ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆ ಭಾರತೀಯ ಚಿತ್ರರಂಗದ ಇತರೆ ಭಾಷೆಗಳ ಚಿತ್ರಕ್ಕೆ ಹೋಲಿಸಿದರೆ ಕಡಿಮೆ ಇದೆ.ಅಲ್ಲದೆ ಹಲವು ಕನ್ನಡ ಸ್ಟಾರ್ ನಟರು ಈ ವರ್ಷ ಒಂದು ಅಥವಾ ಎರಡು ಚಿತ್ರಗಲಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದಾರೆ.ಈ ನಡುವೆ ಬೇರೆ ಭಾಷೆಯಲ್ಲಿ ತಯಾರಾದ ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್ ಆಗಿ ಇಲ್ಲಿಯೂ ಪ್ರದರ್ಶನ ಕಾಣುತ್ತಿದೆ.ಹಲವು ವರ್ಷಗಳ ಕಾಲ ಕನ್ನಡ ನಟರು, ನಿರ್ಮಾಪಕರ ನಡುವೆ ತಿಕ್ಕಾಟಕ್ಕೆ ಕಾರಣವಾಗಿದ್ದ ಡಬ್ಬಿಂಗ್ ಚಿತ್ರಗಳ ಬಿಡುಗಡೆ ಬೇಕು, ಬೇಡ ಚರ್ಚೆ ಈಗ ಕೊನೆಯಾಗಿದ್ದು ಕನ್ನಡದ "ಕೆಜಿಎಫ್" ಪರಭಾಷೆಗಳಲ್ಲಿ ಡಬ್ ಆದ ನಂತರ ಪರಭಾಷಾ ಚಿತ್ರಗಳು ಕನ್ನಡದಲ್ಲಿ ಸಹ ಬರಲು ಪ್ರಾರಂಭಿಸಿದೆ, ರಾಮ್ ಗೋಪಾಲ್ ವರ್ಮ್ನಾ ಅವರ "ರಂಗಸ್ಥಳಂ" ಸೇರಿ ಹಲವು ಮಹತ್ವದ ಚಿತ್ರಗಳು ಕನ್ನಡದಲ್ಲಿ ಡಬ್ ಆಗಿ ಪ್ರದರ್ಶನಗೊಳ್ಳುವುದು ಖಚಿತವಾಗಿದೆ, ಇದೀಗ ಈ ಸಾಲಿನ ಹೊಸ ಸೇರ್ಪಡೆ-"ಕಾಂಚನಾ-3"
ಕಾಮಿಡಿಯನ್, ಹಾರರ್ ಚಿತ್ರವಾದ "ಕಾಂಚನಾ-3" ಈ ಮುನ್ನ ಏಪ್ರಿಲ್ 26ಕ್ಕೆ ಕನ್ನಡ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಲುತ್ತದೆ ಎನ್ನಲಾಗಿತ್ತು. ಆದರೆ ಅಂತಿಮವಾಗಿ ಕಾರ್ಮಿಕರ ದಿನವಾದ ಮೇ 1 ರಂದು ಬಿಡುಗಡೆ ಕಾಣುತ್ತಿದೆ.ರಾಘವ ಲಾರೆನ್ಸ್ ನಿರ್ದೇಶನದ ಈ ಚಿತ್ರದ ಕನ್ನಡ ಡಬ್ಬಿಂಗ್ ಹಕ್ಕುಗಳನ್ನು ರಾಘವೇಂದ್ರ ಪ್ರೊಡಕ್ಷನ್ಸ್ ಪಡೆದುಕೊಂಡಿದೆ. ಇನ್ನು ಕೆ.ಎಸ್.ಕೆ.ಶೋರೀಲ್ ಸಂಸ್ಥೆ ಈ ಚಿತ್ರದ ಕನ್ನಡ ಅವತರಣಿಕೆಯ ವಿತರಣೆ ಜವಾಬ್ದಾರಿ ಹೊತ್ತಿದೆ.ಕರ್ನಾಟಕದಾದ್ಯಂತ ಕನಿಷ್ಟ 70 ಚಿತ್ರಮಂದಿರಗಳಲ್ಲಿ ಇಂದು ಚಿತ್ರ ತೆರೆ ಕಾಣುತ್ತಿದೆ.
ಇನ್ನು "ಕಾಂಚನಾ-3" ಇದಾಗಲೇ ತಮಿಳು, ತೆಲುಗಿನಲ್ಲಿ ಬಿಡುಗಡೆ ಕಂಡಿದೆ.ನಿರ್ದೇಶಕ ರಾಘವ ಲಾರೆನ್ಸ್ ಸ್ವತಃ ನಾಯಕನಾಗಿರುವ ಈ ಚಿತ್ರದಲ್ಲಿ ವೇದಿಕಾ, ಓವಿಯಾ ಮತ್ತು ನಿಕ್ಕಿ ತಾಂಬೋಲಿ ಮತ್ತಿತರರು ನಟಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos