ಸಿನಿಮಾ ಸುದ್ದಿ

ಮೇ 17ರಂದು ‘ಕಾರ್ಮೋಡ ಸರಿದು’ ಚಿತ್ರ ರಿಲೀಸ್, ಪ್ರೇಕ್ಷಕರಿಗೆ ಸಂತಸದ ಕೋಲ್ಮಿಂಚು!

Raghavendra Adiga
ಬೆಂಗಳೂರು: ಬದುಕಿನಲ್ಲಿ ಸಂತಸದ ಕೋಲ್ಮಿಂಚು ಹರಿದಾಗ, ಸಂಕಷ್ಟ, ಅಸಮಾಧಾನ, ಒಂಟಿತನಗಳೆಂಬ ಕಾರ್ಮೋಡ ತನ್ನಿಂತಾನೆ ಹಿಂದೆ ಸರಿಯುತ್ತದೆ.  ಇಂತಹ ಭಾವನೆಗಳ ಮೇಲಾಟದ ಕಾರ್ಮೋಡ ಸರಿದು’ ಮುಂದಿನ ಶುಕ್ರವಾರ ತೆರೆಗೆ ಬರಲಿದೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಗರಡಿಯಲ್ಲಿ ಪಳಗಿರುವ ಉದಯ್ ಕುಮಾರ್ ಪಿ ಎಸ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ.
‘ನಿರ್ಮಾಪಕ ಮಂಜು ರಾಜಣ್ಣ ನಾಯಕನ ಪಾತ್ರದಲ್ಲಿದ್ದರೆ, ಅದ್ವಿತಿ ಶೆಟ್ಟಿ, ವೈದ್ಯೆಯ ಪಾತ್ರದಲ್ಲಿ ಮಿಂಚಿದ್ದಾರೆ. “ಪ್ರಸ್ತುತ ಬಹುಪಾಲು ಜನರ ಜೀವನ ಯಾಂತ್ರಿಕವಾಗುತ್ತಿದೆ.  ಸಂಬಂಧಗಳಿಗೆ ಬೆಲೆ ಸಿಗದೆ ಭಾವನೆಗಳು ಮಂಕಾಗುತ್ತಿವೆ.  ಇಂತಹ ಕಥಾಹಂದರ ಹೊಂದಿರುವ ಚಿತ್ರವೇ ‘ಕಾರ್ಮೋಡ ಸರಿದು’ ನನ್ನ ಹುಟ್ಟೂರು ಕುದುರೆಮುಖದಲ್ಲಿ ಬಹುಪಾಲು ಚಿತ್ರೀಕರಣವಾಗಿದೆ’ ಎಂದು ಮಂಜು ರಾಜಣ್ಣ ಹೇಳಿಕೊಂಡಿದ್ದು, ಚಿತ್ರ ಬಿಡುಗಡೆಯಾದ ಒಂದು ವಾರದ ನಂತರ ಯುರೋಪ್ ಹಾಗೂ ಗಲ್ಫ್ ರಾಷ್ಟ್ರಗಳಲ್ಲೂ ಸಿನೆಮಾ ಬಿಡುಗಡೆಯ ಚಿಂತನೆಯಿದೆ ಎಂದಿದ್ದಾರೆ.
“ಕಾಡುವ ಒಂಟಿತನದಿಂದ ನರಳುವ ಯುವಕ ಆತ್ಮಹತ್ಯೆಗೆ ನಿರ್ಧರಿಸಿದ ನಂತರ ಎದುರಾಗುವ ಘಟನೆಗಳು ಆತನ ಜೀವನವನ್ನು ಹೇಗೆ ಬದಲಿಸುತ್ತದೆ ಎಂಬುದು ಚಿತ್ರದ ತಿರುಳು. ಕೊನೆಯವರೆಗೂ ಪ್ರೇಕ್ಷಕರ ಕುತೂಹಲ ಹಿಡಿದಿಟ್ಟುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಕುಟುಂಬದವರು ಒಟ್ಟಿಗೆ ಕುಳಿತು ನೋಡುವ ಚಿತ್ರ” ಎಂದು ನಿರ್ದೇಶಕ ಉದಯ್ ತಿಳಿಸಿದ್ದಾರೆ. 
ಅಳಿಸುವುದು ಬಲುಕಷ್ಟ: ದಿವ್ಯಶ್ರೀ
ಖಾಸಗಿ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ನಲ್ಲಿ ಜನರನ್ನು ನಗಿಸುತ್ತಿದ್ದ ದಿವ್ಯಶ್ರೀ ‘ಕಾರ್ಮೋಡ ಸರಿದು’ ಚಿತ್ರದಲ್ಲಿ ತಾವೂ ಅಳುತ್ತಾ ಪ್ರೇಕ್ಷಕರನ್ನೂ ಅಳಿಸುತ್ತಾರಂತೆ.  “ಈ ಚಿತ್ರದಲ್ಲಿ ಅಳುತ್ತಿರುತ್ತೇನೆ  ಹೀಗಾಗಿ ಅಳುವುದು, ಅಳಿಸುವುದು ಎಷ್ಟು ಕಷ್ಟ? ಭಾವನೆಗಳ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಹೇಗೆಂದು ಗೊತ್ತಾಗಿದೆ” ಎಂದು ಹೇಳಿಕೊಂಡಿದ್ದಾರೆ.
SCROLL FOR NEXT