ರಿವೈಂಡ್ ಪೋಸ್ಟರ್ 
ಸಿನಿಮಾ ಸುದ್ದಿ

ತೇಜ್ ಅಭಿನಯದ ಕನ್ನಡದ ಚೊಚ್ಚಲ ಚಿತ್ರ 'ರಿವೈಂಡ್'

ಮೂಲತ: ಬೆಂಗಳೂರಿನವರಾದ ತೇಜ್, ಒಂಬತ್ತು ವರ್ಷಗಳ ನಂತರ ಕನ್ನಡದಲ್ಲಿ ಮೊದಲ ಬಾರಿಗೆ ರಿವೈಂಡ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವುದಲ್ಲದೆ, ತಾವೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ

ಬೆಂಗಳೂರು: ಮೂಲತ: ಬೆಂಗಳೂರಿನವರಾದ ತೇಜ್,  ಕಾಲಿವುಡ್ ನಲ್ಲಿ ವೃತ್ತಿ ಆರಂಭಿಸಿ 'ಕೊಂಜಮ್ ವೆಯಿಲ್ ಕೊಂಜಮ್ ಮಝಾಯಿ, ಕದಲುಕು ಮರಣಾನಂ ಇಲೈ, ಗಾಂಥಮ್ ಮತ್ತು ಮೊಜಿವತ್ ಯಾಥ್ಲೇಲ್ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಒಂಬತ್ತು ವರ್ಷಗಳ ನಂತರ ಕನ್ನಡದಲ್ಲಿ ಮೊದಲ ಬಾರಿಗೆ  ರಿವೈಂಡ್  ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವುದಲ್ಲದೆ, ತಾವೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕೆಲವು ಪೋಸ್ಟರ್ ಗಳನ್ನು ಶೇರ್ ಮಾಡಿಕೊಂಡಿರುವ ತೇಜ್, ರಿವಿಂಡ್  ಇದೊಂದು ಕುಟುಂಬ ಥ್ರಿಲ್ಲರ್  ಚಿತ್ರವಾಗಿದ್ದು, ತಮಿಳು ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ಮೂಡಿಬರಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಹಾಗೂ ಸಿಂಗಾಪುರದಲ್ಲಿ ಚಿತ್ರೀಕರಣ ಮಾಡುವ  ಬಗ್ಗೆ ಯೋಚಿಸಲಾಗಿದೆ. ಜರ್ಮನಿ, ಲಿಥುವೇನಿಯಾ ಮತ್ತಿತರ ರಾಷ್ಟ್ರಗಳಲ್ಲಿಯೂ ಚಿತ್ರೀಕರಣ ಮಾಡುವ ಆಲೋಚಿಸಲಾಗಿದೆ.
ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ. ಇವರಲ್ಲಿ ಒಬ್ಬರಾದ ಚಂದನ್ ಸಹಿ ಹಾಕಿದ್ದಾರೆ. ಉಳಿದಂತೆ ಸಂಪತ್ ಕುಮಾರ್, ಸುಂದರ್ ರಾಜ್, ಮಂಡ್ಯ ರವಿ ಮತ್ತು ಮತ್ತಿತರರ ತಾರಾಗಣವಿದೆ. ಚೀನಾದ ಖ್ಯಾತ ನಟರೊಬ್ಬರನ್ನು ವಿಲನ್ ಪಾತ್ರಕ್ಕಾಗಿ ಕರೆತರುವ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ತೇಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ: 6 ಅಂತಸ್ತಿನ ಕಟ್ಟಡ ಕುಸಿತ; ಓರ್ವ ಸಾವು, ಹಲವರು ಸಿಲುಕಿರುವ ಶಂಕೆ

ಹಿಂದೂ ದೇವತೆಗಳಿಗೆ ಅಪಮಾನ: ನಿಶು ಆಜಾದ್ ವಿರುದ್ಧ ದೂರು ದಾಖಲಿಸಿದ ಸುಪ್ರೀಂ ಕೋರ್ಟ್ ವಕೀಲ!

ಕೊಪ್ಪಳ: ಕೆಲಸದಿಂದ ತಪ್ಪಿಸಿಕೊಳ್ಳಲು ಭಾರಿ ಪ್ಲಾನ್; AI ನಲ್ಲಿ ಹುಲಿ ಸೃಷ್ಟಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದ ಮೈಗಳ್ಳ!

ನೇಪಾಳದಲ್ಲಿ ಮತ್ತೆ ಪ್ರವಾಹ ಆತಂಕ; ಬುಧಿಗಂಡಕಿ ನದಿ ತೀರದಲ್ಲಿ ಹೈ ಅಲರ್ಟ್, ಆಗಿದ್ದೇನು?

ಉಡುಪಿ: ವಿಟ್ಲಪಿಂಡಿ ಉತ್ಸವದ ವೇಳೆ ಸ್ವಾಮೀಜಿಗಳ ಕೈಯಿಂದ ಜಾರಿದ ಶ್ರೀಕೃಷ್ಣನ ಉತ್ಸವ ಮೂರ್ತಿ, ಭಕ್ತರಲ್ಲಿ ಹೆಚ್ಚಿದ ಆತಂಕ!