ಸಿನಿಮಾ ಸುದ್ದಿ

ಜೂನ್ 14ಕ್ಕೆ 'ಐ ಲವ್ ಯೂ' ಹೇಳಲಿದ್ದಾರೆ ಉಪ್ಪಿ!

Sumana Upadhyaya
ತೆರೆಯ ಮೇಲೆ ಉಪ್ಪಿಯನ್ನು ನೋಡಲು ಇಷ್ಟು ದಿನ ಕಾತರದಿಂದ ಕಾಯುತ್ತಿದ್ದವರಿಗೆ ಕೊನೆಗೂ ಖುಷಿಯ ವಿಚಾರವೊಂದು ಸಿಕ್ಕಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷದ ಅಂತ್ಯದಲ್ಲೇ ಐ ಲವ್ ಯೂ ಸಿನಿಮಾ ತೆರೆಗೆ ಬರಬೇಕಿತ್ತು.
ನಂತರ ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಅಂದೂ ಬರಲಿಲ್ಲ. ಆಮೇಲೆ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ ಆಯಿತು. ಅಲ್ಲಿಗೆ ಉಪೇಂದ್ರ ಪಕ್ಷವೂ ಸ್ಪರ್ಧಿಸುತ್ತಿದ್ದರಿಂದ ನೀತಿ ಸಂಹಿತೆ ಮುಗಿಯವರೆಗೂ ಚಿತ್ರ ಬಿಡುಗಡೆ ಮಾಡುವುದು ಸಾಧ್ಯವಾಗಿರಲಿಲ್ಲ.
ಇದೀಗ, ಕರ್ನಾಟಕದಲ್ಲಿ ಎಲೆಕ್ಷನ್ ಮುಗಿದಿದೆ. ಅದೇ ರೀತಿ ಐ ಲವ್ ಯೂ ಚಿತ್ರದ ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿರುವ ಉಪೇಂದ್ರ ನಟನೆಯ ಆರ್ ಚಂದ್ರು ನಿರ್ದೇಶನದ ಉಪ್ಪಿ ಐ ಲವ್ ಯೂ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ.
ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಎರಡು ಭಾಷೆಯಲ್ಲೂ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇತ್ತೀಚಿಗಷ್ಟೆ ಸೆನ್ಸಾರ್ ಮುಗಿಸಿದ್ದ ಐ ಲವ್ ಯೂ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.
SCROLL FOR NEXT