2012 ರಲ್ಲಿ ತೆರೆಕಂಡ ಅದ್ದೂರಿ ಸಿನಿಮಾ ಯಶಸ್ಸು ಕಂಡಿತ್ತು, ಇದೀಗ ಅದ್ಧೂರಿ-2 ನಿರ್ಮಾಣ ಹಂತದಲ್ಲಿದೆ. ಅದ್ಧೂರಿ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶಿಸಿದ್ದರು, ಧ್ರುವ ಸರ್ಜಾ ಅಭಿನಯಿಸಿದ್ದರು.
ಅದ್ಧೂರಿ ಸಿನಿಮಾ ಉತ್ತಮ ಯಶಸ್ಸು ಕಂಡಿತ್ತು. ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಬ್ರೇಕ್ ಕೊಟ್ಟ ಸಿನಿಮಾವಾಗಿತ್ತು., ಸದ್ ಸಿಎಂಆರ್ ಪ್ರೊಡಕ್ಷನ್ ಅಡಿ ಶಂಕರ್ ರೆಡ್ಡಿ ನಿರ್ಮಿಸುತ್ತಿರುವ ಸಿನಿಮಾದಲ್ಲಿ ನಟ ಉಪೇಂದ್ರ ಸಂಬಂಧಿ ನಿರಂಜನ್ ಸುದೀಂದ್ರ ಅಭಿನಯಿಸುತ್ತಿದ್ದಾರೆ. ವೆಂಕಟೇಶ್ ನಿರ್ದೇಶನದ ಸಿನಿಮಾ ಇದಾಗಿದೆ.
ಈ ಮೊದಲು ನಿರಂಜನ್ ಸುಧೀಂದ್ರ ಪ್ರಿಯಾಂಕ ಉಪೇಂದ್ರ ನಟನೆಯ 2 ಅಂಡ್ ಹಾಫ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಸಿನಿಮಾಗಾಗಿ ತರಬೇತಿ ಪಡೆದುಕೊಂಡಿದ್ದು. ಇನ್ನೂ ಒಂದು ಅಥವಾ ಎರಡು ತಿಂಗಳಲ್ಲಿ ಅಧಿಕೃತವಾಗಿ ಪ್ರಕಟವಾಗಲಿದೆ.