ರಮೇಶ್ ಅರವಿಂದ್ 
ಸಿನಿಮಾ ಸುದ್ದಿ

ಶಿವಾಜಿ ಸುರತ್ಕಲ್ ನಲ್ಲಿ ರಮೇಶ್ ಅರವಿಂದ್ ಹೊಸ ಪ್ರಯೋಗ

ಪ್ರಸಿದ್ಧ ನಟ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಎಂಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಶಿವಾಜಿ ಸುರತ್ಕಲ್- ದಿ ಕೇಸ್ ಆಫ್ ರಣಗಿರಿ ...

ಪ್ರಸಿದ್ಧ ನಟ ರಮೇಶ್ ಅರವಿಂದ್ ಶಿವಾಜಿ ಸುರತ್ಕಲ್ ಎಂಬ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ಶಿವಾಜಿ ಸುರತ್ಕಲ್- ದಿ ಕೇಸ್ ಆಫ್ ರಣಗಿರಿ ರಹಸ್ಯ’ ತನಿಖಾಧಿಕಾರಿಯ ಜೊತೆಗೆ ನಾಯಕನ ಪಾತ್ರದಲ್ಲೂ ರಮೇಶ್ ಕಾಣಿಸಿಕೊಂಡಿದ್ದಾರೆ.
ನಟ ರಮೇಶ್ ಗಾಗಿ ಮೊದಲ ಬಾರಿಗೆ ವಿಶೇಷವಾಗಿ ಗಡ್ಡದ ಡಿಸೈನ್ ಮಾಡಲಾಗಿದೆ,.ಇದೇ ಮೊದಲ ಬಾರಿಗೆ ರಮೇಶ್ ಈ ರೀತಿಯ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ರಮೇಶ್ ಶೇವ್ ಮಾಡಿಲ್ಲ ಎಂದು ನಿರ್ದೇಶಕ ಆಕಾಶ್ ಶ್ರೀವಾತ್ಸವ್ ಹೇಳಿದ್ದಾರೆ. 
ಈ ಚಿತ್ರದಲ್ಲಿ ರಮೇಶ್ ಅರವಿಂದ್ ಷೆರ್ಲಾಕ್ ಹೋಮ್ಸ್ ಥರ ಓರ್ವ ಪತ್ತೇದಾರ. ಹೆಸರು ಶಿವಾಜಿ ಸುರತ್ಕಲ್. ಇದೇ ಮೊದಲು ಅವರು ವಿಭಿನ್ನ ಪಾತ್ರ ಮತ್ತು ವಿಶಿಷ್ಟ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕರ ಪ್ರಕಾರ, ಶಿವಾಜಿ ಸುರತ್ಕಲ್ ಬೇರೆಯವರಂತಲ್ಲ. ಅವನ ತನಿಖಾ ವಿಧಾನವೇ ಅಪೂರ್ವ. ಸಾಕ್ಷ್ಯಾಧಾರಗಳನ್ನು ಶೋಧಿಸಿ, ತನ್ನ ಅದ್ಭುತವಾದ ಕಲ್ಪನಾ ಶಕ್ತಿಯಿಂದ ಅಪರಾಧಿಯನ್ನು ಹಿಡಿದು ಹಾಕುವ ಚಾಣಾಕ್ಷ.
ಈಗಾಗಲೇ ಶೇ,80 ರಷ್ಟು ಶೂಟಿಂಗ್ ಮುಗಿದಿದ್ದು,ಉಳಿದ ಭಾಗವನ್ನು ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ಮಾಡಲಾಗುವುದು, ಶೂಟಿಂಗ್ ಮುಗಿದ ಕೂಡಲೇ ಎಡಿಟಿಂಗ್ ಪ್ರಕ್ರಿಯೆ ಆರಂಭವಾಗಲಿದೆ.ರಾಧಿಕಾ ಚೇತನ್ ಹಾಗೂ ಆರೋಹಿ ನಾರಾಯಣ್. ರೇಖಾ ಕೆ.ಎನ್. ಹಾಗೂ ಅನೂಪ್ ಗೌಡ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!