ಸಿನಿಮಾ ಸುದ್ದಿ

13ನೇ ಸಂಖ್ಯೆ ಸುತ್ತ ನಡೆಯುವ ಕಥೆಯೇ ಬ್ಲ್ಯಾಂಕ್: ಕೃಷಿ ತಾಪಂಡ

Shilpa D
ಡ್ರಗ್ಸ್‌ ಸ್ಕ್ಯಾಂಡಲ್‌ ಆಧರಿಸಿ ಬ್ಲ್ಯಾಂಕ್ ಸಿನಿಮಾ  ಕಥೆ ಮಾಡಲಾಗಿದೆ, ಮೈಸೂರಿನ ಒಂದೇ ಮನೆಯಲ್ಲಿ ಮೂರು ದಿನ ನಡೆಯುವ ಕತೆ ಇದಾಗಿದೆ.
ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಯುತ್ತ ಬಂದಿದ್ದು, ಒಂದು ವಾರ ಮಾತ್ರ ಬಾಕಿದೆ. ಚಿಕ್ಕಮಗಳೂರಿನಲ್ಲಿ ಹಾಡುಗಳ ಚಿತ್ರೀಕರಣ ನಡೆಯಲಿದೆ. ಪೂರ್ಣಚಂದ್ರ, ಸುಚೇಂದ್ರ ಪ್ರಸಾದ್‌, ಪ್ರಶಾಂತ್‌ ಸಿದ್ದಿ ಮುಂತಾದವರು ನಟಿಸುತ್ತಿದ್ದಾರೆ. ಕ್ರೈಮ್‌, ಥ್ರಿಲ್ಲರ್‌, ಲವ್‌ ಈ ಮೂರು ಅಂಶಗಳನ್ನು ಒಳಗೊಂಡ ಚಿತ್ರವಿದೆ.
13ನೇ ಫ್ಲೋರ್ ನಲ್ಲಿ ನಡೆಯುವ ಕಥೆ ಇದಾಗಿದೆ, 13ನೇ ಸಂಖ್ಯೆಯ ಸುತ್ತ ನಡೆಯುವ ಕಥೆ ಇದಾಗಿದೆ. ಅದರಲ್ಲೂ ವಿಶೇಷವಾಗಿ ಏಷ್ಯಾ ದೇಶಗಳಲ್ಲಿ 13 ನೇ ಸಂಖ್ಯೆ ಇರುವ ಒಲವಿನ ಬಗ್ಗೆ ಕಥೆ ಎಣೆಯಲಾಗಿದೆ. ಈಗಾಗಲೇ ಶೇ.80ರಷ್ಟು ಪೂರ್ಣಗೊಂಡಿದೆ, ಇನ್ನು ಕ್ಲೈಮ್ಯಾಕ್ಸ್ ಭಾಗದ ಶೂಟಿಂಗ್ ಬಾಕಿಯಿದೆ. ಬ್ಲ್ಯಾಂಕ್ ಸಿನಿಮಾಗೆ ಸಾಷ್ಟ್ಯ ಸಂಗೀತ ನೀಡಿದ್ದಾರೆ. 
SCROLL FOR NEXT