ವಿವೇಕ್ ಒಬೆರಾಯ್-ಶಿವರಾಜಕುಮಾರ್ 
ಸಿನಿಮಾ ಸುದ್ದಿ

ನನಗೆ 18 ವರ್ಷವಿದ್ದಾಗಲೇ ಶಿವಣ್ಣ ನಟನೆಗೆ ಆಹ್ವಾನಿಸಿದ್ದರು: ನಟ ವಿವೇಕ್ ಒಬೆರಾಯ್

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಮಧ್ಯೆ ಚಿತ್ರದ ಕುರಿತಂತೆ ಮಾತನಾಡಿದ ವಿವೇಕ್...

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಮಧ್ಯೆ ಚಿತ್ರದ ಕುರಿತಂತೆ ಮಾತನಾಡಿದ ವಿವೇಕ್ ಅವರು ನನಗೆ 18 ವರ್ಷವಿದ್ದಾಗಲೇ ಶಿವಣ್ಣ ಅವರು ನಟನೆಗೆ ಆಹ್ವಾನಿಸಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ನಾನು ನಟನಾಗಿ ಗುರುತಿಸಿಕೊಳ್ಳುವ ಮೊದಲ ನನಗೆ ಆಗ 18 ವರ್ಷವಾಗಿತ್ತು. ಆಗಲೇ ಶಿವಣ್ಣ ನನಗೆ ನಟನಾಗಲು ಆಹ್ವಾನಿಸಿದ್ದರು. ನಾನು ಚಿಕ್ಕಮ್ಮ ಬೆಂಗಳೂರಿನಲ್ಲಿ ವಾಸವಾಗಿದ್ದರು. ಅವರ ಕುಟುಂಬ ರಾಜಕುಮಾರ್ ಅವರ ಕುಟುಂಬಕ್ಕೆ ಹೆಚ್ಚು ಆಪ್ತರಾಗಿದ್ದರು. 
ಒಂದು ಸಲ ನನ್ನನ್ನು ಕಂಡಾಗ ಶಿವಣ್ಣ ಅವರು ನೋಡಲು ಸುಂದರವಾಗಿದ್ದಾನೆ. ಕನ್ನಡದಲ್ಲಿ ಲಾಂಚ್ ಮಾಡುವುದಾಗಿ ಹೇಳಿದ್ದರು. ಶಿವಣ್ಣ ಅವರು ಹೀರೋ ಆಗಿ ಅಭಿನಯಿಸಲಿದ್ದ ಚಿತ್ರದಲ್ಲಿ ತಮ್ಮನ ಪಾತ್ರದಲ್ಲಿ ಅಭಿನಯಿಸಲು ಆಹ್ವಾನಿಸಿದ್ದರು. ಆದರೆ ನಾನು ಅಮೆರಿಕಕ್ಕೆ ಹೋಗಬೇಕಿದ್ದರಿಂದ ಅಂದಿನ ಆಫರ್ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ವಿವೇಕ್ ಹೇಳಿದ್ದಾರೆ.
ರವಿ ವರ್ಮಾ ಅವರ ಚೊಚ್ಚಲ ನಿರ್ದೇಶನದ ರುಸ್ತುಂ ಚಿತ್ರದಲ್ಲಿ ಶಿವಣ್ಣ ಅಭಿನಯಿಸುತ್ತಿದ್ದು ಈ ಚಿತ್ರದಲ್ಲಿ ವಿವೇಕ್ ಸಹ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್, KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

SCROLL FOR NEXT