ಸಿನಿಮಾ ಸುದ್ದಿ

ಸುಶೀಲ್ ನಂಬಿಯಾರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಗಾಯತ್ರಿ ಅಯ್ಯರ್

Shilpa D
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಜಗ್ಗುದಾದ ಸಿನಿಮಾದಲ್ಲಿ ನಟಿಸಿದ್ದ ಗಾಯತ್ರಿ ಅಯ್ಯರ್ ಮತ್ತೆ ಕನ್ನಡ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ.
ಮಲಯಾಳಂ ಛಾಯಾಗ್ರಾಹಕ ಸುಶೀಲ್ ನಂಬಿಯಾರ್ ಚೊಚ್ಚಲ ನಿರ್ದೇಶನ ಇನ್ನೂ ಹೆಸರಿಡದ ಸಿನಿಮಾದಲ್ಲಿ ಗಾಯತ್ರಿ ಅಯ್ಯರ್ ನಟಿಸಿದ್ದಾರೆ.
ಅಡಚಣೆಗಾಗಿ ಕ್ಷಮಿಸಿ ಮತ್ತು ಡಮ್ಕಿ ಡಮಾರ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಪ್ರದೀಪ್ ವರ್ಮಾ ನಾಯಕನಾಗಿ ನಟಿಸಿದ್ದಾರೆ, ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಈ ಕಾಮಿಡಿ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿದ್ದಾರೆ. ಕಳೆದ ವಾರ ಸರಳವಾಗಿ ಮೂಹೂರ್ತ ಆಯೋಜಿಸಲಾಗಿತ್ತು, 
ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಸಂಜಯ್ ಸಿನಿಮಾ ನಿರ್ಮಾಣ ಮಾಡಿದ್ದಾರೆ, ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ತಯಾರಾಗಲಿದೆ. 
SCROLL FOR NEXT