ವಿಹಾನ್ 
ಸಿನಿಮಾ ಸುದ್ದಿ

'ಕಾಲ್ ಕೆಜಿ ಪ್ರೀತಿ' ಹುಡುಕಿಕೊಂಡು ಮಾಲಿವುಡ್ ಗೆ ವಿಹಾನ್ ಎಂಟ್ರಿ!

ಯೋಗರಾಜ್ ಭಟ್ ನಿರ್ದೇಶನದ "ಪಂಚತಂತ್ರ" ನಾಯಕ ವಿಹಾನ್ ಈಗ ಮಾಲಿವುಡ್ ಪ್ರವೇಶಕ್ಕೆ ಸಿದ್ದತೆ ನಡೆಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ವಿಹಾನ್ ಅವರೇ ನಾಯಕನಾಗಿದ್ದ "ಕಾಲ್ ಕೆಜಿ ಪ್ರೀತಿ" ಚಿತ್ರದ ಮಲಯಾಲಂ ರಿಮೇಕ್ ನಲ್ಲಿ ....

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ "ಪಂಚತಂತ್ರ" ನಾಯಕ ವಿಹಾನ್ ಈಗ ಮಾಲಿವುಡ್ ಪ್ರವೇಶಕ್ಕೆ ಸಿದ್ದತೆ ನಡೆಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಅವರೇ ನಾಯಕನಾಗಿದ್ದ "ಕಾಲ್ ಕೆಜಿ ಪ್ರೀತಿ" ಚಿತ್ರದ ಮಲಯಾಲಂ ರಿಮೇಕ್ ನಲ್ಲಿ ಈಗ ವಿಹಾನ್ ಕಾಣಿಸಿಕೊಳ್ಲಲಿದ್ದಾರೆ. ಸತ್ಯ ಸೂರ್ಯ ಸಾಗರ್ ಎಂಬ ಹೊಸ ನಿರ್ದೇಶಕ ಮಲಯಾಳಂ ನಲ್ಲಿ ಕನ್ನಡದ ಚಿತ್ರವೊಂದರ ರೀಮೇಕ್ ಗಾಗಿ ಮೊದಲ ಬಾರಿಗೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ.
ಕನ್ನಡದಲ್ಲಿ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದ "ಕಾಲ್ ಕೆಜಿ ಪ್ರೀತಿ" ಮಲಯಾಳಂ ರೀಮೇಕ್ ಬಗೆಗೆ ಯುವನಟ ತನ್ನ ಅಭಿಪ್ರಾಯ ಬಹಿರಂಗಪಡಿಸಲು ಹಿಂದೇತು ಹಾಕುತ್ತಿದ್ದಾರೆ. ಮಲಯಾಳಂ ನಿರ್ಮಾಪಕರು ಈ ಚಿತ್ರವನ್ನು ಇಷ್ಟಪಟ್ಟು ರೀಮೇಕ್ ಹಕ್ಕುಗಳನ್ನು ಕೇಳಿದ್ದರು. ಈ ಕುರಿತ ಮಾತುಕತೆ ಇತ್ತೀಚೆಗೆ ಮುಕ್ತಾಯವಾಗಿತ್ತು.
ಈಗ ವಿಹಾನ್ ಮಲಯಾಳಂ ಸೆಟ್ ನಲ್ಲಿ ತಯಾರಾಗುವ ರೀಮೇಕ್ ಚಿತ್ರಕ್ಕಾಗಿ ಸಂಭಾಷಣೆಗಳನ್ನು ನೋಡುತ್ತಿದ್ದಾರೆ.ಹಾಗೆಯೇ ಆಗಸ್ಟ್ ವೇಳೆಗೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ.ಸದ್ಯ ವಿಹಾನ್ ಮಾತ್ರ ನಟಿಸುವುದು ಖಚಿತವಾಗಿದ್ದು ಚಿತ್ರದ ಉಳಿದ ಪಾತ್ರಗಳಲಿ ಅಭಿನಯಿಸಲು ನಟ ನಟಿಯರು ಇನ್ನೂ ಅಂತಿಮಗೊಂಡಿಲ್ಲ. ಈ ನಡುವೆ ವಿಹಾನ್ ಕನ್ನಡ ನಿರ್ದೇಶಕರೊಡನೆ ಸಹ ಮಾತುಕತೆ ನಡೆಸಿದ್ದು ಮುಂದಿನ ಕನ್ನಡ ಚಿತ್ರ ಯಾವುದೆನ್ನುವುದನ್ನು ಒಮ್ಮೆ ಮಾತುಕತೆ ಸಂಪೂರ್ಣವಾದ ನಂತರ ಬಹಿರಂಗಪಡಿಸುವುದಾಗಿ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT