ಎಂಎಸ್ ಎನ್ ಸೂರ್ಯ ನಿರ್ದೇಶನದ "ಸುವರ್ಣ ಸುಂದರಿ" ಮೂಲಕ ದಕ್ಷಿಣ ಭಾರತದ ಖ್ಯಾತ ನಟಿ ಪೂರ್ಣ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ "ಜೋಶ್" ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಪೂರ್ಣ ಕೋಮಲ್ ಅಭಿನಯದ "ರಾಧನ ಗಂಡ"ದಲ್ಲಿ ಸಹ ಅಭಿನಯಿಸಿದ್ದರು. ಈಗ ಸಸ್ಪೆನ್ಸ್ ಹಾರರ್ ಚಿತ್ರ "ಸುವರ್ಣ ಸುಂದರಿ" ಮೂಲಕ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿದ್ದಾರೆ.
ಪೂರ್ಣ ಹೇಳುವಂತೆ ಆಕೆಗೆ ಕನ್ನಡ ಭಾಷೆ ಬರುವುದಿಲ್ಲ. ಮಾತನಾಡಲು ಬಹಳ ಕಷ್ಟಣವಾಗುತ್ತದೆ. ಹಾಗಾಗಿ ಆಕೆ ಹೆಚ್ಚು ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಲಲು ಪ್ರಯತ್ನಿಸಿಲ್ಲ. "ನಾನು ಭಾಷೆ ತಿಳಿದಿದ್ದರೆ ಮಾತ್ರ ಚಿತ್ರದಲ್ಲಿ ಅಭಿನಯಿಸಬೇಕೆಂದು ಬಯಸುವ ನಟಿ. ಒಂದೊಮ್ಮೆ ನನಗೆ ಆ ಭಾಷೆ ತಿಳಿದಿದ್ದರೆ, ಮಾತನಡಲು ಬರುವಂತಿದ್ದರೆ ಮಾತ್ರ ಅಂತಹಾ ಚಿತ್ರದಲ್ಲಿ ನಾನು ಉತ್ತಮ ಅಭಿನಯ ಕೊಡಬಲ್ಲೆ ಎನ್ನುವುದು ನನ್ನ ಅಭಿಪ್ರಾಯ. ಈಗೀಗ ನಾನು ತೆಲುಗು ಭಾಷೆಯಲ್ಲಿ ಸ್ವಲ್ಪ ಸ್ವಲ್ಪ ತರಬೇತಿ ಪಡೆಇದ್ದೇನೆ. ಹಾಗಾಗಿ ಟಾಲಿವುಡ್ ನಲ್ಲಿ ನಿಧಾನವಾಗಿ ಹೆಜ್ಜೆ ಮೂಡಿಸಲು ಸಹಕಾರಿಯಾಗಿದೆ. ಆದರೆ ಕನ್ನಡ ವಿಚಾರದಲ್ಲಿ ನನಗೆ ಹಾಗಿಲ್ಲ. ಕನ್ನಡ ಕಲಿಯಲು ಕಠಿಣವಾಗಿದೆ, ಆದರೆ ನಾನು ಬಿಟ್ಟುಕೊಡುವುದಿಲ್ಲ "ಎಂದುನಟಿ ಹೇಳಿದ್ದಾರೆ.
"ನನಗೆ ಹಿಂದಿ ಮಾತನಾಡುವುದು ಬಹಳವೇ ಕಷ್ಟದ ವಿಚಾರ. ನಾನು ನಾಲ್ಕನೇ ತರಗತಿಯವರೆಗೂ ಹಿಂದಿ ಭಾಷೆಯಲ್ಲಿ ಫೇಲ್ ಆಗಿದ್ದೆ. ಕಡೆಗೆ ಶಿಕ್ಷಕರೇ ನನ್ನ ಕಷ್ಟ ಅರಿತು ಹಿಂದಿ ಬದಲು ಇಂಗ್ಲೀಷ್ ಭಾಷಾ ತರಗತಿಗೆ ನನನ್ನು ಕಳಿಸಿದ್ದರು."
ಪೂರ್ಣ "ಸುವರ್ಣ ಸುಂದರಿ" ಚಿತ್ರದಲ್ಲಿ ನಟಿ ಸಾಕ್ಷಿ ಹಾಗೂ ಹಿರಿಯ ನಟಿ ಜಯಪ್ರದಾ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. "ನಾನು ಈ ಯೋಜನೆ ಒಪ್ಪಿಕೊಳ್ಳುವ ವೇಳೆ ಚಿತ್ರ ತೆಲುಗಿನಲ್ಲಷ್ಟೇ ಬರಲಿದೆ ಎಂದು ಹೇಳಿದ್ದರು. ಆದರೆ ನಂತರದಲ್ಲಿ ಇದು ಕನ್ನಡದಲ್ಲಿ ಸಹ ತೆರೆಕಾಣುವುದು ನಿಶ್ಚಿತವಾಯಿತು. ಆಗ ನಿರ್ದೇಶಕರು ನನಗೆ ಕನ್ನಡ ಸಂಬಾಷಣೆ ನಿಡಲು ಪ್ರಾರಂಭಿಸಿದ್ದರು. ಆದರೆ ನಾನು ಅವುಗಳನ್ನು ಕಲಿತು ನಟಿಸಲು ವಿಳಂಬವಾಗಿದೆ." ಪೂರ್ಣ ಹೇಳಿದ್ದಾರೆ.
"ನನ್ನ ಪಾಲಿಗೆ ಸುವರ್ಣ ಸುಂದರಿ ಎಂದರೆ ಜಯಪ್ರದಾ, ಅವರು ಸೆಟ್ ನಲ್ಲಿರುವಾಗ ಎಲ್ಲರೂ ಅವರ ಮೇಲೆಯೇ ಫೋಕಸ್ ಮಾಡುತ್ತಿರುತ್ಟಾರೆ." ಎನ್ನುವ ನಟಿ ಚಿತ್ರ ಹಾರರ್ ಕಥೆಯೋಓ, ಐತಿಹಾಸಿಕವೋ ಎಂದು ಹೇಳಲು ಬಯಸುವುದಿಲ್ಲ. "ಚಿತ್ರದಲ್ಲಿ ನನ್ನದು ಎರಡು ಶೇಡ್ ನ ಫಾತ್ರ. ಎರಡು ತಲೆಮಾರಿನ ವ್ಯಕ್ತಿಯಾಗಿ ನಾನು ಇಲ್ಲಿ ಕಾಣಿಸುತ್ತೇನೆ.ಇನ್ನು ನಾನು ಸಹ ಪ್ರೇಕ್ಷಕರ ಅಭಿಪ್ರಾಯ ಹೇಗಿದೆ ಎಂದು ತಿಳಿಯಲು ಮೇ31 ರತನಕ ಕಾಯಲಿದ್ದೇನೆ" ಅವರು ಹೇಳಿದ್ದಾರೆ.
"ಚಿತ್ರದಲ್ಲಿ ಜಯಪ್ರದಾ ಅವರ ಜತೆ ಅಭಿನಯಿಸಿದ್ದು ನನಗೆ ಆಶೀರ್ವಾದದಂತೆ, ಈ ಪಾತ್ರಕ್ಕಾಗಿ ನಾನು ಕಪ್ಪು ಬಿಳುಪಿನ ಛಾಯೆಯಲ್ಲಿ ಕಾಣಿಸಿದ್ದೇನೆ. ಈ ನಿರ್ದಿಷ್ಟ ರೆಟ್ರೊ ಪ್ರಸಂಗವು ತುಂಬಾ ಆಸಕ್ತಿದಾಯಕವಾಗಿದೆ ಎಂದು ನಾನು ಹೇಳಬಲ್ಲೆ."
ಚಿತ್ರ ಬಿಡುಗಡೆಗೆ ಎರಡು ವರ್ಷ ತೆಗೆದುಕೊಂಡಿದೆ.ಏಕೆಂದರೆ ಚಿತ್ರವು ಗ್ರಾಫಿಕ್ ಕೆಲಸಕ್ಕಾಗಿ ಸಾಕ್ಷ್ಟು ಸಮಯ ತೆಗೆದುಕೊಂಡಿತ್ತು. "ಮೊದಲ ಭಾರಿ ಮಾಡಿದ್ದ ಗ್ರಾಫಿಕ್ಸ್ ಕೆಲಸ ಮಾಡಲಿಲ್ಲ, ಮತ್ತೆ ಮರಳಿ ಪ್ರತಿ ದೃಶ್ಯವನ್ನೂ ಗ್ರಾಫಿಕ್ ಮಾಡಬೇಕಾಯಿತು. ಇದು ಸುವರ್ಣ ಸುಂದರಿ ಇಷ್ಟು ತಡವಾಗಲು ಕಾರಣವಾಗಿದೆ. ಆದರೆ ಅದಾಗ್ಯೂ ಚಿತ್ರೀಕರಣದ ವೇಳೆ ನಾವೆಲ್ಲಾ ಸಾಕಷ್ಟು ಹಾಸ್ಯ ಪ್ರಸಂಗವನ್ನು ಕಂಡಿದ್ದೇವೆ. ಕಡೆಯ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ವೇಳೆ ಸಾಕಷ್ತು ನಕ್ಕು ನಲಿದಿದ್ದೇವೆ" ಪೂರ್ಣ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos