ಸಿನಿಮಾ ಸುದ್ದಿ

೭ ಕಥೆ, ೭ ನಿರ್ದೇಶಕರ 'ಕಥಾ ಸಂಗಮ’: ಪುಟ್ಟಣ್ಣ ಕಣಗಾಲ್ ಹಾದಿಯಲ್ಲಿ ರಿಷಬ್ ಶೆಟ್ಟಿ

Lingaraj Badiger

ಬೆಂಗಳೂರು: ಕನ್ನಡದ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ವಿಭಿನ್ನ ಪ್ರಯೋಗಗಳ ಮೂಲಕ ಚಂದನವನದ ಕೀರ್ತಿಯನ್ನು ಪಸರಿಸಿದವರು. ೧೯೭೬ರಲ್ಲಿ ಅವರು ಐದು ಕಥೆಗಳನ್ನು ಒಟ್ಟಾಗಿಸಿ 'ಕಥಾ ಸಂಗಮ’ ಚಿತ್ರ ಮಾಡಿದ್ದರು. ಇದೀಗ ಉತ್ಸಾಹಿ ಯುವ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸಹ ಅಂತಹ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಏಳು ನಿರ್ದೇಶಕರು, ಏಳು ಸಂಗೀತ ನಿರ್ದೇಶಕರು, ಒಂದೊಂದು ಚಿತ್ರಕ್ಕೂ ಬೇರೆ ಬೇರೆ ಕಲಾವಿದರು. ಹೀಗೆ ಏಳು ವಿಭಿನ್ನ ಕಥೆಗಳನ್ನು ಇಟ್ಟುಕೊಂಡು ''ಕಥಾ ಸಂಗಮ’ ಸಿನಿಮಾ ಸಿದ್ಧವಾಗುತ್ತಿದೆ. ಈ ಎಲ್ಲ ಸಿನಿಮಾಗಳ ನೇತೃತ್ವ ರಿಷಬ್ ಶೆಟ್ಟಿ ವಹಿಸಿದ್ದಾರೆ ಹಾಗೂ ಈ ಚಿತ್ರವನ್ನು ಪುಟ್ಟಣ್ಣನವರಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ಏಳು ವಿಭಿನ್ನ ಸಂಸ್ಕೃತಿಯ, ನೆಲದ, ಸೊಗಡಿನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಚಿತ್ರ ನಿರ್ಮಿಸುತ್ತಿದ್ದು, ಹೊಸ ಮತ್ತು ಅನುಭವಿ ಕಲಾವಿದರು ನಟಿಸುತ್ತಿದ್ದಾರೆ. ಹೊಸ ನಿರ್ದೇಶಕರಿಗೆ ಅವಕಾಶ ನೀಡಲಾಗಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ನವೆಂಬರ್ 4ರಂದು ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಜೀವನದ ಸುತ್ತ ನಡೆಯುವ ಕಥೆಯೇ 'ಕಥಾ ಸಂಗಮ'. ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಪ್ರಮೋದ್ ಶೆಟ್ಟಿ, ಹರಿಪ್ರಿಯಾ, ಪ್ರಕಾಶ್ ಬೆಳವಾಡಿ, ಮುಂತಾದವರು ತಾರಾಗಣದಲ್ಲಿದ್ದಾರೆ. 2.5 ಗಂಟೆಗಳ ಕಾಲ ಸಿನಿಮಾ ಇರಲಿದೆಯಂತೆ.

ಮೊದಲ ಕಥೆಯನ್ನು ಶಶಿ, ಎರಡನೇ ಕಥೆಯನ್ನು ಚಂದ್ರಜಿತ್ ಬೆಳ್ಳಿಯಪ್ಪ, ಮೂರನೇ ಕಥೆ ಕರಣ್ ಅನಂತ್, ನಾಲ್ಕನೇ ಕಥೆ ರಾಹುಲ್ ಪಿಕೆ, ಐದನೇ ಕಥೆ ಜಮದಗ್ನಿ ಮನೋಜ್, ಆರನೇ ಕಥೆ ಕಿರಣ್ ರಾಜ್ ಹಾಗೂ ಏಳನೇ ಕಥೆಯನ್ನು ಜಯಶಂಕರ್ ನಿರ್ದೇಶಿಸಿದ್ದಾರೆ.

SCROLL FOR NEXT