ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಹೊಸ ಅವತಾರದಲ್ಲಿ `ದಾರಿ ತಪ್ಪಿದ ಮಗ’

ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು...

ಬೆಂಗಳೂರು: ನಾಲ್ಕೂವರೆ ದಶಕಗಳ ಹಿಂದೆ ಒಮ್ಮೆ ತಿರುಗಿನೋಡಿದರೆ, ಚಂದನವನದಲ್ಲಿ ಅದೆಷ್ಟು ಚಂದದ ಚಿತ್ರಗಳು ತೆರೆಗೆ ಬಂದಿದ್ದವು, ಅಂತಹ ಸದಭಿರುಚಿಯ ಚಿತ್ರಗಳು ಈಗೇಕಿಲ್ಲ ಎನಿಸುತ್ತದೆ. ಈ ನಿಟ್ಟಿನಲ್ಲಿ, ಅಂದಿನ ಕಾಲಘಟ್ಟದ ಚಿತ್ರಗಳನ್ನು ನೋಡಬಯಸುವ ಪ್ರೇಕ್ಷಕರಿಗಾಗಿ ೧೯೭೫ರಲ್ಲಿ ತೆರೆಕಂಡ 'ದಾರಿ ತಪ್ಪಿದ ಮಗ’ ಮತ್ತೆ ಹೊಸ ಅವತಾರದಲ್ಲಿ ಬರಲಿದೆ.

ಅಂದು ಪೇಕೇಟಿ ಶಿವರಾಂ ನಿರ್ಮಿಸಿ ನಿರ್ದೇಶಿಸಿದ್ದ ಬಹುತಾರಾಗಣದ ಚಿತ್ರದಲ್ಲಿ ರಸಿಕರ ರಾಜ, ಕರ್ನಾಟಕ ರತ್ನ ಡಾ ರಾಜ್‌ಕುಮಾರ್, ಜಯಮಾಲಾ, ಆರತಿ, ಕಲ್ಪನಾ, ಮಂಜುಳ ನಾಯಕ, ನಾಯಕಿಯರಾಗಿದ್ದರೆ, ಪೋಷಕ ಪಾತ್ರದಲ್ಲಿ ಎಂ ವಿ ರಾಜಮ್ಮ, ವಜ್ರಮುನಿ, ಕೆ ಎಸ್ ಅಶ್ವತ್ಥ್ ಮೊದಲಾದವರಿದ್ದಾರೆ.

ಇದೇ ನವೆಂಬರ್ 22ರಂದು ದಾರಿತಪ್ಪಿದ ಮಗ ಮತ್ತೆ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. 

ಅಂದು 35 ಎಂ ಎಂನಲ್ಲಿದ್ದ ಚಿತ್ರವನ್ನು ಇಂದು ಸಿನಿಮಾಸ್ಕೋಪ್ 7.1 ಡಿಟಿಎಸ್ 2ಕೆ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುನಿರಾಜು ಅವರು ಚಿತ್ರ ನಿರ್ಮಾಣ ಸಂಸ್ಥೆ ಜಯಪ್ರಭ ಪ್ರೊಡಕ್ಷನ್ಸ್ ಮೂಲಕ ಹೊರತರುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ