ಸಿನಿಮಾ ಸುದ್ದಿ

ಕಣ್ಣೀರು ಹಾಕಿದ ಕೆಜಿಎಫ್ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು, ವಿಡಿಯೋ!

Vishwanath S

ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಖ್ಯಾತಿ ಗಳಿಸಿರುವ ರವಿ ಬಸ್ರೂರು ಅವರು ವಿಡಿಯೋ ಮಾಡಿ ತಮ್ಮ ಮನಸ್ಸಿನ ನೋವನ್ನು ತೋಡಿಕೊಂಡಿದ್ದಾರೆ. 

ರವಿ ಬಸ್ರೂರು ಅವರು ಕಟಕ ಚಿತ್ರದ ನಿರ್ದೇಶನದ ಮೂಲಕ ಯಶಸ್ಸು ಗಳಿಸಿದ್ದರು. ಇದೀಗ ನೂರಾರು ಮಕ್ಕಳನ್ನು ಬಳಸಿ ಗಿರ್ಮಿಟ್ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರು ಸರಿಯಾಗಿ ಆದರಿಸುತ್ತಿಲ್ಲ ಎಂದು ವಿಡಿಯೋ ಮೂಲಕ ಕಣ್ಣೀರಿಟ್ಟಿದ್ದಾರೆ. 

300ಕ್ಕೂ ಹೆಚ್ಚು ಮಕ್ಕಳನ್ನು ಬಳಸಿ ಒಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಪ್ರತಿಭಾ ಮಕ್ಕಳನ್ನು ಬಳಸಿ ಇಂತಹ ಹೊಸ ಪ್ರಯತ್ನ ಮಾಡಿದ್ದೇವೆ. ಆದರೂ ಜನರು ಧಿಯೇಟರಗಳಿಗೆ ಬರುತ್ತಿಲ್ಲ ಹೇಳಿಕೊಂಡಿದ್ದಾರೆ. 

ಈ ಚಿತ್ರ ಸೋತಿರಬಹುದು. ಆದರೆ ನಮ್ಮ ಪ್ರಯತ್ನವನ್ನು ನಾವು ಬಿಡುವುದಿಲ್ಲ. ಮುಂದೆ ಸಹ ಇಂತಹ ಸಾಹಸಕ್ಕೆ ಕೈಹಾಕುತ್ತೇನೆ. ನನ್ನ ಛಲವನ್ನು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT