ಪುನೀತ್ ರಾಜ್‌ಕುಮಾರ್ 
ಸಿನಿಮಾ ಸುದ್ದಿ

ಪವರ್ ಸ್ಟಾರ್ ಪುನೀತ್ ಗೆ ಆಕ್ಷನ್ ಕಟ್ ಹೇಳಲಿರುವ 'ರಾಮ ರಾಮ ರೆ' ನಿರ್ದೇಶಕ?

"ರಾಮ ರಾಮ ರೇ" ಹಾಗೂ "ಒಂದಲ್ಲ ಎರಡಲ್ಲ" ಖ್ಯಾತಿಯ ನಿರ್ದೇಶಕರಾದ ಡಿ ಸತ್ಯ ಪ್ರಕಾಶ್ ಈಗ ವಿಶೇಷ ಸ್ಕ್ರಿಪ್ಟ್ ತಯಾರಿಯಲ್ಲಿ  ತೊಡಗಿದ್ದಾರೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ಸತ್ಯ ಪ್ರಕಾಶ್ ಅವರ ಮುಂಬರುವ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಲುತ್ತಿರುವುದು....

"ರಾಮ ರಾಮ ರೇ" ಹಾಗೂ "ಒಂದಲ್ಲ ಎರಡಲ್ಲ" ಖ್ಯಾತಿಯ ನಿರ್ದೇಶಕರಾದ ಡಿ ಸತ್ಯ ಪ್ರಕಾಶ್ ಈಗ ವಿಶೇಷ ಸ್ಕ್ರಿಪ್ಟ್ ತಯಾರಿಯಲ್ಲಿ  ತೊಡಗಿದ್ದಾರೆ. ಇನ್ನೂ ಗಮನಾರ್ಹ ಸಂಗತಿ ಎಂದರೆ ಸತ್ಯ ಪ್ರಕಾಶ್ ಅವರ ಮುಂಬರುವ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಲುತ್ತಿರುವುದು ಮಾತ್ರವಲ್ಲ ಪುನೀತ್ ಅವರ ಹೋಂ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ ಎನ್ನಲಾಗಿದೆ..

ಹೇಮಂತ್ ಎಂ ರಾವ್ ನಿರ್ದೇಶನದ ಕವಾಲುದಾರಿ, ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಚೊಚ್ಚಲ ಚಿತ್ರ, ಮಾಯಾಬಜಾರ್, ರಾಗಿಣಿ ಚಂದ್ರನ್ ಅಭಿನಯದ ಲಾ  ಸಮರ್ತ್ ನಿರ್ದೇಶನದ ಚಿತ್ರಗಳು ಇದಾಗಲೇ  ಪಿಆರ್ಕೆ ಬ್ಯಾನರ್ ನಿರ್ಮಿಸಿದೆ.ಸತ್ಯ ಪ್ರಕಾಶ್ ಅವರೊಂದಿಗಿನ ಚಿತ್ರವೀಗ ಪುನೀತ್ ಬ್ಯಾನರ್ ನಡಿ ನಿರ್ಮಾಣವಾಗಿ ಆರಲ್ಲಿ ಅವರೇ ನಾಯಕರಾಗಿ ನಟಿಸಿದ್ದರೆ ಅದೊಂದು ಹೊಸ ಮೈಲಿಗಲ್ಲಾಗುವುದು ಖಚಿತವೆಂದು ಮೂಲಗಳು ಹೇಳಿದೆ.. ಪವರ್ ಸ್ಟಾರ್‌ಗಾಗಿ ಸತ್ಯ ಪ್ರಕಾಶ್ ಯಾವ ರೀತಿಯ ಸ್ಕ್ರಿಪ್ಟ್ ತಯಾರಿಸಲಿದ್ದಾರೆ ಎಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.ಇದಕ್ಕಾಗಿ ನಿರ್ಮಾಪಕರ ತಂಡದಿಂದ ಅಂತಿಮ ಘೋಷಣೆಯಾಗಬೇಕಿದೆ.

ನಟಸಾರ್ವಭೌಮ ಚಿತ್ರದ ನಾಯಕನಾಗಿದ್ದ ಪುನೀತ್ ಪ್ರಸ್ತುತ ಸಂತೋಷ್ ಆನಂದ್ ರಾಮ್  ನಿರ್ದೇಶನದ ಯುವರತ್ನ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹೊಂಬಾಳೆ  ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಈ ಚಿತ್ರದ ಮಾತಿನ ಭಾಗಗಳು ಕಡೆ ಹಂತದಲ್ಲಿದೆ.ಹಾಡುಗಳ ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

. ಸತ್ಯ ಪ್ರಕಾಶ್ ಅವರೊಂದಿಗಿನ ಚಿತ್ರವು 2020 ರಲ್ಲಿ ಅವರು ಪ್ರಾರಂಭಿಸಲಿರುವ ಯೋಜನೆಗಳಲ್ಲಿ ಒಂದಾಗಲಿದೆ. ಜೇಮ್ಸ್ ಚಿತ್ರಕ್ಕಾಗಿ ನಿರ್ದೇಶಕ ಚೇತನ್ ಕುಮಾರ್ ಅವರೊಂದಿಗೆ ಕೈಜೋಡಿಸಿರುವ ಪುನೀತ್  ಈ ಎರಡು ಚಿತ್ರಗಳ ನಡುವೆ ತಮ್ಮ ಸಮಯವನ್ನು ಸರಿದೂಗಿಸಲು ಯೋಜಿಸಿದ್ದಾರೆ ಎಂದು ಮಾತುಗಳು ಕೇಳಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT