ಸಿನಿಮಾ ಸುದ್ದಿ

ಶಿವಣ್ಣ ಲಾಂಗ್ ಹಿಡಿದರೆ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ: ಚಾಲೆಂಜಿಂಗ್ ಸ್ಟಾರ್ ದರ್ಶನ್

Vishwanath S

ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಲಾಂಗ್ ಹಿಡಿದರೆ ನಾನು ಅವರ ಬೆನ್ನಿಗೆ ನಿಲ್ಲುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ. 

ದರ್ಶನ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದೀಗ ಅವರಿಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿತ್ತು. 

ಹೌದು. ಶಿವಣ್ಣ ಅವರ ಸಂಬಂಧಿ ಧ್ರುವನ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದು ಚಿತ್ರದ ಮುಹೂರ್ತಕ್ಕೆ ಈ ಇಬ್ಬರು ದಿಗ್ಗಜ ನಟರು ಬಂದಿದ್ದರು. ಈ ವೇಳೆ ಮಾಧ್ಯಮಗಳು ಶಿವಣ್ಣ ಅವರನ್ನು ದರ್ಶನ್ ಜೊತೆ ನೀವು ಸಿನಿಮಾ ಮಾಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಒಳ್ಳೆಯ ಕಥೆ ಸಿಕ್ಕರೆ ಖಂಡಿತವಾಗಿಯೂ ಮಾಡುತ್ತೇವೆ ಎಂದರು. 

ಈ ವೇಳೆ ಮಾತನಾಡಿದ ದರ್ಶನ್ ಸಹ ಶಿವಣ್ಣ ಹಿರಿಯ ಕಲಾವಿದರು, ಅವರು ಲಾಂಗ್ ಹಿಡಿದರೆ ಅವರ ಬೆನ್ನಿಗೆ ನಾನು ನಿಲ್ಲುತ್ತೇನೆ ಎಂದು ಹೇಳಿದರು. ಇನ್ನು ನಮ್ಮಿಬ್ಬರನ್ನು ಒಂದೇ ಸಿನಿಮಾದಲ್ಲಿ ಹ್ಯಾಂಡಲ್ ಮಾಡೋ ನಿರ್ದೇಶಕರು ಯಾರೂ ಇಲ್ಲ. ಅಂತಹ ನಿರ್ದೇಶಕರು ಸಿಕ್ಕರೆ ಖಂಡಿತವಾಗಿಯೂ ಒಟ್ಟಿಗೆ ಚಿತ್ರ ಮಾಡುತ್ತೇವೆ ಎಂದರು.

SCROLL FOR NEXT