ಲೂಸ್ ಮಾದ ಯೋಗಿ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ 
ಸಿನಿಮಾ ಸುದ್ದಿ

ಲೂಸ್ ಮಾದ ಯೋಗಿ ಮಗಳ ನಾಮಕರಣದಲ್ಲಿ ದರ್ಶನ್ ಭಾಗಿ

ಚಂದನವನದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟ ಲೂಸ್ ಮಾದ ಯೋಗಿ ಅವರ ಮುದ್ದಾದ ಮಗುವಿಗೆ ನಾಮಕರಣವಾಗಿದೆ. 

ಬೆಂಗಳೂರು: ಚಂದನವನದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟ ಲೂಸ್ ಮಾದ ಯೋಗಿ ಅವರ ಮುದ್ದಾದ ಮಗುವಿಗೆ ನಾಮಕರಣವಾಗಿದೆ. 

ಯೋಗಿ ಸಾಹಿತ್ಯ ದಂಪತಿ ತಮ್ಮ ಕುಟುಂಬದ ಕೆಲವು ಹಿರಿಯರು ಆತ್ಮೀಯ ಸ್ನೇಹಿತರನ್ನು ಕರೆದು ತಮ್ಮ ಮುದ್ದು ಮಗಳಿಗೆ ನಾಮಕರಣ ಶಾಸ್ತ್ರವನ್ನು ಅತ್ಯಂತ ಸರಳವಾಗಿ ನೆರವೇರಿಸಿದ್ದು, ಶ್ರೀನಿಕಾ ಎಂದು ನಾಮಕರಣ ಮಾಡಿದ್ದಾರೆ. 

 ಇವರ ಈ ನಾಮಕರಣ ಸಮಾರಂಭಕ್ಕೆ ಸ್ವತಃ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೋಗಿ ಮಗುವಿಗೆ ಆಶೀರ್ವಾದ ಮಾಡಿ ಯೋಗಿ ದಂಪತಿಗಳಿಗೆ ಅಭಿನಂದನೆ ಸಲ್ಲಿಸಿ ಶುಭಹಾರೈಸಿ ಬಂದಿದ್ದಾರೆ. 

 ಸದ್ಯ ಈಗಾಗಲೇ ಸಾಲು ಸಾಲು ಸಿನಿಮಾಗಳು ಯೋಗಿ ಕೈಯಲ್ಲಿ ಇದ್ದು ತಮಿಳು ಚಿತ್ರರಂಗದಿಂದಲೂ ಆಫರ್ ಬಂದಿದೆ. ಮಗಳು “ಶ್ರೀನಿಕಾ” ಯೋಗಿಗೆ ಭಾಗ್ಯವನ್ನು ತಂದಿದ್ದಾಳೆ ಎನ್ನಲಾಗುತ್ತಿದೆ. 

ಯೋಗಿ ಲೂಸ್ ಮಾದ ಕಳೆದ ೨೦೧೭ ರ ನವೆಂಬರ್ ೨ ರಂದು ತಮ್ಮ ಬಾಲ್ಯದ ಗೆಳತಿ ಐಟಿಯಲ್ಲಿ ಕೆಲಸವನ್ನು ಮಾಡುತ್ತಿರುವ ಸಾಹಿತ್ಯರವರನ್ನು ಹಿರಿಯರ ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಅವರ ಪ್ರೇಮದ ಫಲವಾಗಿ ಮೇ ೨೦೧೯ ರ ೫ ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು ಸಾಹಿತ್ಯ. ಸೋಶಿಯಲ್ ಮೀಡಿಯಾದಲ್ಲಿ ಯೋಗಿ ಹಾಗೂ ಸಾಹಿತ್ಯ ತಮ್ಮ ಮುದ್ದಿನ ಮಗಳ ಅನೇಕ ಸುಂದರ ಚಿತ್ರಗಳನ್ನು ಕೂಡ ಶೇರ್ ಮಾಡಿ ಮಗಳ ಜೊತೆ ತುಂಟಾಟ ಆಡುತ್ತಾ ಕಾಲ ಕಳೆದಿದ್ದರು. ಈಗ ಅವರ ಮಗಳಿಗೆ ನಾಮಕರಣ ಮಾಡಿ ಸಂಭ್ರಮಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 World Cup, IND vs Pak: ಇಶಾನ್ ಕಿಶಾನ್ ಬ್ಯಾಟಿಂಗ್ ಅಬ್ಬರ; ಸ್ಪಿನ್ ಮೋಡಿಗೆ ಪಾಕ್ ತತ್ತರ, ಭಾರತಕ್ಕೆ 61 ರನ್ ಗೆಲುವು!

T20 World Cup 2026: ಸೂಪರ್ 8 ಹಂತಕ್ಕೆ ಭಾರತ ಲಗ್ಗೆ; ದೇಶಾದ್ಯಂತ ಸಂಭ್ರಮಾಚರಣೆ, ಗಣ್ಯರ ಶುಭಾಶಯ!

T20 World Cup 2026: 27 ಬಾಲ್ ಗಳಲ್ಲಿ ಅರ್ಧಶತಕ ಹೊಡೆದು, ಭಾರತದ ಸ್ಕೋರ್ ಹೆಚ್ಚಿಸಿದ ಇಶಾನ್ ಕಿಶಾನ್!

RSS ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು: ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ!

SCROLL FOR NEXT