ಸಿನಿಮಾ ಸುದ್ದಿ

ಜನಪ್ರಿಯ ತಮಿಳು ಹಾಸ್ಯನಟ ಕೃಷ್ಣಮೂರ್ತಿ ನಿಧನ

Shilpa D

ಚೆನ್ನೈ: ಜನಪ್ರಿಯ ತಮಿಳು ಹಾಸ್ಯನಟ ಕೃಷ್ಣಮೂರ್ತಿ ಅಲಿಯಾಸ್ ಮ್ಯಾನೇಜರ್  ಕೃಷ್ಣಮೂರ್ತಿ ಕೇರಳದ ಕುಮಿಲಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕೇರಳದ ಕುಮಿಲಿಯಲ್ಲಿ ಶೂಟಿಂಗ್ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ,  ವಿಜಯ್ ಕಾಂತ್- ಸೌಂದರ್ಯ ನಟನೆಯ ತಾವಸಿ ಸಿನಿಮಾದಲ್ಲಿ ಮಾನಸಿಕ ಅಸ್ವಸ್ಥನ ಪಾತ್ರದ ಮೂಲಕ ಜನಪ್ರಿಯರಾಗಿದ್ದರು.

ಕೇರಳದ ತೇಣಿಯಲ್ಲಿ ಇಂದು ಬೆಳಗ್ಗೆ 4.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಷ್ಟರಲ್ಲಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಕೃಷ್ಣಮೂರ್ತಿ ಅವರನ್ನು ಮ್ಯಾನೇಜರ್ ಕೃಷ್ಮಮೂರ್ತಿ ಎಂದು ಕರೆಯಲಾಗುತ್ತಿತ್ತು. ಹಲವು ಸ್ಟಾರ್ ನಟರ ಜೊತೆ ನಟಿಸಿದ್ದ ಕೃಷ್ಣಮೂರ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

SCROLL FOR NEXT