ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್ ನಲ್ಲಿ ಸೈರಾ ಮ್ಯಾಜಿಕ್ : ಐದು ದಿನಗಳ ಕಲೆಕ್ಷನ್ ಎಷ್ಟು ಗೊತ್ತಾ? 

Nagaraja AB

ಚೆನ್ನೈ: ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಚಿತ್ರ ದೇಶ, ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಮೆರಿಕಾದಲ್ಲಿ ಐದು ದಿನಗಳಲ್ಲಿ 2 ಮಿಲಿಯನ್ ಬಾಚಿಕೊಂಡಿದೆ. 

ಐತಿಹಾಸಿಕ ಚಿತ್ರವಾಗಿರುವ ಸೈರಾ ದೇಶದಲ್ಲಿ ನಾಗಲೋಟದಲ್ಲಿ ಪ್ರದರ್ಶನ ಕಾಣುತ್ತಿದ್ದು,ಆಂಧ್ರ ಪ್ರದೇಶವೊಂದರಲ್ಲಿಯೇ  ಸುಮಾರು 20 ಕೋಟಿ ಕಲೆಕ್ಷನ್ ಮಾಡಿದೆ. ಚಿರಂಜೀವಿ ಪುತ್ರ ರಾಮ್ ಚರಣ್ ನಿರ್ಮಾಣದ ಈ ಚಿತ್ರವನ್ನು ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಅಕ್ಟೋಬರ್ 2 ರಂದು  ಬಿಡುಗಡೆ ಮಾಡಲಾಗಿತ್ತು

ಚೆನ್ನೈನಲ್ಲಿ ಸೈನಾ ನರಸಿಂಹ ರೆಡ್ಡಿ ಹಾಲಿವುಡ್ ನ ಜೋಕರ್ ಹಾಗೂ ಹಿಂದಿಯ ವಾರ್ ಚಿತ್ರಕ್ಕಿಂತ ಕಲೆಕ್ಷನ್ ನಲ್ಲಿ ಕುಗ್ಗಿದೆ.  ಚೆನ್ನೈ ನಗರದಲ್ಲಿ ಐದು ದಿನಗಳ ಒಟ್ಟಾರೇ ಕಲೆಕ್ಷನ್ ನೋಡುವುದಾರೆ  ಜೋಕರ್  1. 01 ಕೋಟಿ, ವಾರ್ 1 ಕೋಟಿ ಹಾಗೂ ಸೈರಾ 81 ಲಕ್ಷ  ಬಾಚಿಕೊಂಡಿವೆ.

ದೇಶಿಯ ಮಾರುಕಟ್ಟೆಯಲ್ಲಿ ಜೋಕರ್ 95 ಮಿಲಿಯನ್ ಡಾಲರ್,  ಹೃತ್ತಿಕ್ ರೋಷನ್ ಬಾಗೂ ಟೈಗರ್ ಶ್ರಾಫ್ ಅಭಿಯನದ ವಾರ್ 150 ಕೋಟಿ ಕಲೆಕ್ಷನ್ ಮಾಡಿದ್ದು, ವಾರ್ ಚಿತ್ರದ ತೆಲುಗು ಹಾಗೂ ತಮಿಳು ಆವೃತ್ತಿಯಲ್ಲಿ 7 ಕೋಟಿ ವ್ಯವಹಾರ ಮಾಡಿದೆ ಎಂದು ಸಿನಿ ವ್ಯವಹಾರ ತಜ್ಞ ತರಣ್ ಆದರ್ಶ್ ಹೇಳಿದ್ದಾರೆ. 

ಮತ್ತೊಬ್ಬ ಸಿನಿ ವ್ಯವಹಾರ ತಜ್ಞ ರಮೇಶ್ ಬಾಲಾ, ಸೈರಾ ನರಸಿಂಹ ರೆಡ್ಡಿ ಚಿತ್ರ ಐದು ದಿನಗಳಲ್ಲಿ ತೆಲುಗು ಭಾಷಿಕ ರಾಜ್ಯಗಳಲ್ಲಿ 75 ಕೋಟಿ ರೂ. ಬಾಚಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲಾಡ ನರಸಿಂಹ ರೆಡ್ಡಿ  ಜೀವನಾದಾರಿತ ಚಿತ್ರವಾಗಿರುವ ಸೈರಾ ನರಸಿಂಹ ರೆಡ್ಡಿ ಚಿತ್ರವನ್ನು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು, ಅಮಿತಾಬ್ ಬಚ್ಚನ್  ಚಿರಂಜೀವಿಯ ಗುರುವಾಗಿ ಕಾಣಿಸಿಕೊಂಡಿದ್ದಾರೆ. ನಯನ ತಾರಾ, ತಮನ್ನಾ, ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು ಮತ್ತಿತರ ನಟರು ಅಭಿನಯಿಸಿದ್ದಾರೆ. 

SCROLL FOR NEXT