ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಅ.23ಕ್ಕೆ ದಬಂಗ್ 3 ಟ್ರೇಲರ್ ಬಿಡುಗಡೆ

ಬಾಲಿವುಡ್ ಸೂಪರ್ ಸುಲ್ದಾನ್ ಸಲ್ಮಾನ್ ಖಾನ್ ಅಭಿನಯದ ಭಾರೀ ವೆಚ್ಚದ ಚಿತ್ರ ದಬಂಗ್ 3 ಕನ್ನಡಕ್ಕೆ ಡಬ್ ಆಗುತ್ತಿದ್ದು, ಚಿತ್ರ ಭಾರೀ ಸಂಚಲ ಮೂಡಿಸಿದೆ. ಚಿತ್ರದ ಟ್ರೇಲರ್ ಇದೇ ಅ.23ರಂದು ಬಿಡುಗಡೆಗೊಳ್ಳಲಿದೆ. 

ಬಾಲಿವುಡ್ ಸೂಪರ್ ಸುಲ್ದಾನ್ ಸಲ್ಮಾನ್ ಖಾನ್ ಅಭಿನಯದ ಭಾರೀ ವೆಚ್ಚದ ಚಿತ್ರ ದಬಂಗ್ 3 ಕನ್ನಡಕ್ಕೆ ಡಬ್ ಆಗುತ್ತಿದ್ದು, ಚಿತ್ರ ಭಾರೀ ಸಂಚಲ ಮೂಡಿಸಿದೆ. ಚಿತ್ರದ ಟ್ರೇಲರ್ ಇದೇ ಅ.23ರಂದು ಬಿಡುಗಡೆಗೊಳ್ಳಲಿದೆ. 

ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದು, ಕೋರಮಂಗಲದ ಪಿವಿಆರ್ ಚಿತ್ರಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. 

ಚಿತ್ರವನ್ನು ಪ್ರಭುದೇವಾ ನಿರ್ದೇಶಿಸಿದ್ದು, ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಕನ್ನಡ ಆವೃತ್ತಿಯ ದಬಂಗ್ 3 ಚಿತ್ರಕ್ಕೆ ಅನೂಪ್ ಬಂಡಾರಿಯಾ ಅವರು ಡೈಲಾಗ್ ಗಳನ್ನು ಬರೆದಿದ್ದಾರೆ. 

ಚಿತ್ರದಲ್ಲಿ ಪದಗಳು ಹೆಚ್ಚಿನ ಪಾತ್ರ ವಹಿಸುತ್ತೇವೆ. ದಬಂಗ್ 3 ಚಿತ್ರದ ಕನ್ನಡ ಆವೃತ್ತಿ ನನ್ನ ಕೈಗೆ ಬಂದಿದ್ದು, ಚಿತ್ರದ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿದೆ. ನಿರ್ಮಾಪಕ ಜಾಕ್ ಮಂಜು ಅವರು ಮೊದಲು ನನ್ನನ್ನು ಸಂಪರ್ಕಿಸಿದ್ದರು. ದಬಂಗ್ ಚಿತ್ರದಲ್ಲಿನ ಹಾಡೊಂದಕ್ಕೆ ಸಾಹಿತ್ಯ ಬರೆಯುವ ಕುರಿತು ಕೇಳಿದ್ದರು. ಬಳಿಕ ಚಿತ್ರದ ಆರೂ ಗೀತೆಗಳಿಗೂ ನಾನೇ ಸಾಹಿತ್ಯ ನೀಡುವಂತೆ ತಿಳಿಸಿದರು. ಈ ಮೂಲಕ ಚಿತ್ರದ ಡೈಲಾಗ್ ಬರೆಯುವ ಹೊಣೆ ಕೂಡ ನನ್ನ ಮೇಲೆ ಬಂತು ಎಂದು ಅನೂಪ್ ಅವರು ಹೇಳಿದ್ದಾರೆ. 

ಹಿಂದಿ ಆವೃತ್ತಿಯನ್ನು ನೋಡಿ ಮಗ್ಗಿ ಕಾ ಮಗ್ಗಿ ಬರೆದಿಲ್ಲ. ಸಾಹಿತ್ಯ ಬರೆಯುವುದಕ್ಕೂ ಮುನ್ನ ಸಾರವನ್ನು ತಿಳಿದುಕೊಂಡೆ. ಅರ್ಥ ಹಾಗೂ ದೃಶ್ಯಗಳು ಒಂದೇ ರೀತಿ ಇದ್ದರೂ, ಎರಡೂ ಆವೃತ್ತಿಗಳ ನಡುವೆ ಸಾಕಷ್ಟು ವ್ಯತ್ಯಾಸಗಳನ್ನು ನೀವೇ ಕಾಣುತ್ತೀರಿ. ಪ್ರತೀ ಗೀತೆಗೂ ಸಾಹಿತ್ಯ ಬರೆಯಲು 2-3 ಗಂಟೆಗಳ ಸಮಯ ಬೇಕಾಯಿತು. ಐಡಿಯಾ ಬಹಳ ಚೆನ್ನಾಗಿತ್ತು. ಹೀಗಾಗಿ ಸಾಹಿತ್ಯ ಬರೆಯಲು ಸುಲಭವೆನಿಸಿತು. ಮೊದಲ ಬಾರಿಗೆ ವಿಭಿನ್ನ ರೀತಿಯ ಕೆಲಸ ಮಾಡಿದ್ದೇನೆ. ನನ್ನ ಪ್ರತಿಭೆಯ ಮತ್ತೊಂದು ಮುಖ ಜನರಿಗೆ ಪರಿಚಯವಾಗಲಿದೆ. ಸ್ಥಳೀಯ ಗಾಯಕರಿಗೆ ಅವಕಾಶ ನೀಡಲು ಮುಂದಾಗಿದ್ದೇವೆ. ಈ ಹಿಂದೆ ಈ ರೀತಿಯ ಪ್ರಯತ್ನ ಯಾರೂ ಮಾಡಿಲ್ಲ. ಕನ್ನಡ ಆವೃತ್ತಿಯ ಗೀತೆಗಳನ್ನು ಕೇಳಿದ ಬಳಿದ ನಿರ್ದೇಶಕ ಸಾಜಿದ್-ವಾಜಿದ್ ಕೂಡ ಬಹಳ ಇಷ್ಟಪಟ್ಟರು. ಸಲ್ಮಾನ್ ಖಾನ್ ಹಾಗೂ ಸುದೀಪ್ ಅಭಿನಯದ ಚಿತ್ರದ ಮೂಲಕ ಸ್ವತಂತ್ರ ಸಾಹಿತಿಯಾಗಿ ಹೊರಹೊಮ್ಮುತ್ತಿರುವುದಕ್ಕೆ ನನಗೆ ಬಹಳ ಸಂತೋಷವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!