ವಿದ್ಯಾಬಾಲನ್ 
ಸಿನಿಮಾ ಸುದ್ದಿ

ವಿದ್ಯಾಬಾಲನ್ ಗೆ ಪ್ರತಿಷ್ಠಿತ ಯೂತ್ ಐಕಾನ್ ಪ್ರಶಸ್ತಿ!

ಲಂಡನ್ ನ  ದಿ ಇಂಪಿರಿಯಲ್ ಕಾಲೇಜಿನಿಂದ ಪ್ರತಿಷ್ಠಿತ ಯೂತ್ ಐಕಾನ್ ಪ್ರಶಸ್ತಿಯನ್ನು ಬಾಲಿವುಡ್ ನಟಿ ವಿದ್ಯಾಬಾಲನ್ ಪಡೆದುಕೊಂಡಿದ್ದಾರೆ.

ನವದೆಹಲಿ: ಲಂಡನ್ ನ  ದಿ ಇಂಪಿರಿಯಲ್ ಕಾಲೇಜಿನಿಂದ ಪ್ರತಿಷ್ಠಿತ ಯೂತ್ ಐಕಾನ್ ಪ್ರಶಸ್ತಿಯನ್ನು ಬಾಲಿವುಡ್ ನಟಿ ವಿದ್ಯಾಬಾಲನ್ ಪಡೆದುಕೊಂಡಿದ್ದಾರೆ.

40 ವರ್ಷದ ವಿದ್ಯಾಬಾಲನ್  ಸದ್ಯ 'ಶಕುಂತಲಾ ದೇವಿ ಹನುಮನ್ ಕಂಪ್ಯೂಟರ್  '' ಚಿತ್ರ ದಲ್ಲಿ  ಅಭಿನಯಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಯೂತ್ ಐಕಾನ್ ಪ್ರಶಸ್ತಿ ಪಡೆದುಕೊಂಡಿರುವುದು ವಿಶೇಷವಾಗಿದೆ. 

ದಿ ಇಂಪಿರಿಯಲ್ ಕಾಲೇಜಿಗೆ ಇತ್ತೀಚಿಗೆ ಭೇಟಿ ನೀಡಿದ  ವಿದ್ಯಾಬಾಲನ್, ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ತೋರಿದ ಪ್ರೀತಿಗೆ ಪಿಧಾ ಆಗಿರುವ ವಿದ್ಯಾಬ್ಯಾಲನ್, ಇದೊಂದು ಮರೆಯಲಾದಂತಹ ಭೇಟಿಯಾಗಿದೆ ಎಂದಿದ್ದಾರೆ.

ಇನ್ಸಾಟಾಗ್ರಾಂನಲ್ಲಿ ತಮ್ಮ ಪ್ರಶಸ್ತಿಗೆ ಸಂಬಂಧಿತ ದಾಖಲೆಗಳನ್ನು ಹಂಚಿಕೊಂಡಿರುವ  ಮಿಶನ್ ಮಂಗಳ್ ನಟಿ, ವಿದ್ಯಾರ್ಥಿಗಳೊಂದಿಗೆ ಸಂವಾದಕ್ಕಾಗಿ ದಿ ಇಂಪಿರಿಯನ್ ಕಾಲೇಜಿಗೆ ಭೇಟಿ ನೀಡಿದದ್ದು, ತುಂಬಾ ಅದ್ಬುತವಾಗಿತ್ತು. ಪ್ರಶಸ್ತಿ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಅಲ್ಲಿನ ವಿದ್ಯಾರ್ಥಿಗಳ ಪ್ರೀತಿ, ವಾತ್ಸಲ್ಯ ಮರೆಯಲಾಗದು, ಮೊದಲ ಬಾರಿಗೆ ಯೂತ್ ಐಕಾನ್ ಪ್ರಶಸ್ತಿ ಪಡೆದುಕೊಂಡಿರುವುದಾಗಿ ಬರೆದುಕೊಂಡಿದ್ದಾರೆ.

ಅನು ಮೆನನ್  ನಿರ್ದೇಶನದ ಸೊನಿ ಪಿಕ್ಚರ್ ನೆಟ್ ವರ್ಕ್ ಪ್ರೊಢಕ್ಷನ್ ನಿರ್ಮಾಣದ ಈ ಚಿತ್ರ 2020ರ ಬೇಸಿಗೆ ಸಂದರ್ಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

SCROLL FOR NEXT