ಸಿನಿಮಾ ಸುದ್ದಿ

ಸ್ವಿಟ್ಜರ್ ಲೆಂಡ್ ನಲ್ಲಿ ಕೊನೆಯ ಹಂತದ ಶೂಟಿಂಗ್ ಮುಗಿಸಿದ 'ಒಡೆಯ'!

Shilpa D

ದರ್ಶನ್ ನಟನೆಯ ಒಡೆಯ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದು, ಸ್ವಿಟ್ಜರ್ ಲೆಂಡ್ ನಲ್ಲಿ ಶೂಟಿಂಗ್ ಮುಗಿಸಿರುವ ಫೋಟೋವನ್ನು ರಿಲೀಸ್ ಮಾಡಿದ್ದಾರೆ.

ನಟ ದರ್ಶನ್ ಮತ್ತು ಚಿತ್ರತಂಡ ಶೂಟಿಂಗ್ ಮುಗಿಸಿ ಸಂಭ್ರಮಾಚರಣೆ ಮಾಡಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. 

ಕುರುಕ್ಷೇತ್ರ ಸಿನಿಮಾ 100 ನೇ ದಿನದತ್ತ ಸಾಗುತ್ತಿದೆ. ಹೀಗಾಗಿ ದರ್ಶನ್ ಮುಂದಿನ ಸಿನಿಮಾ ರಿಲೀಸ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ, ಒಡೆಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಡಿಸೆಂಬರ್ 20 ರಂದು ಒಡೆಯ ಸಿನಿಮಾ ರಿಲೀಸ್ ಆಗಲಿದೆ, ಅಂದೇ ದಬಾಂಗ್ 3 ಕೂಡ ರಿಲೀಸ್ ಆಗುತ್ತಿದೆ. ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದು, ರಾಘವಿ ತಿಮ್ಮಯ್ಯ ನಟಿಸಿದ್ದಾರೆ.

SCROLL FOR NEXT