ಸಿನಿಮಾ ಸುದ್ದಿ

ಪೌರಾಣಿಕ ಪಾತ್ರದಲ್ಲಿ ದೀಪಿಕಾ ಪಡುಕೋಣೆ: ಪದ್ಮಾವತ್ ನಂತರ ದ್ರೌಪದಿಯಾಗಿ ಗುಳಿಕೆನ್ನೆ ಚೆಲುವೆ

Shilpa D

ಮುಂಬೈ: ಪೌರಾಣಿಕ ಹಿನ್ನೆಲೆಯ ‘ಮಹಾಭಾರತ’ ಬಿಗ್ ಬಜೆಟ್ ಸಿನಿಮಾದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದ್ರೌಪದಿಯ ಪಾತ್ರ ನಿಭಾಯಿಸಲಿದ್ದಾರೆ.

ಈ  ಸಿನಿಮಾದಲ್ಲಿ ದ್ರೌಪದಿಯಾಗಿ ನಟಿಸುವುದರ ಜೊತೆಗೆ ನಿರ್ಮಾಣ ಜವಾಬ್ದಾರಿಯನ್ನೂ ಹೊತ್ತುಕೊಳ್ಳಲಿದ್ದಾರಂತೆ ದೀಪಿಕಾ. 2021 ರ ವೇಳೆಗೆ ಈ ಸಿನಿಮಾ ಹೊರಬರುವ ನಿರೀಕ್ಷೆಯಿದೆ.

ಪದ್ಮಾವತ್ ನಲ್ಲಿ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ಇಲ್ಲಿ ದ್ರೌಪದಿಯಾಗಿ ತೆರೆಯ ಮೇಲೆ ವಿಭಿನ್ನ ಆಯಾಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ದೀಪಾವಳಿ ವೇಳೆಗೆ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆಯಂತೆ.

SCROLL FOR NEXT