ಸಿನಿಮಾ ಸುದ್ದಿ

'ಅಮ್ಮ ನಾನ್ ಸೇಲ್ ಆದೆ': ಅಮೆರಿಕ ಅಧ್ಯಕ್ಷನ ಹೊಸ ವರಸೆ!

Vishwanath S

ಕನ್ನಡದ ಸ್ಟಾರ್ ನಿರ್ದೇಶಕ ಕಾಶಿನಾಥ್ ನಿರ್ದೇಶನದ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಚಿತ್ರದ ಅಮ್ಮ ನಾನ್ ಸೇಲ್ ಆದೆ ಅಮೆರಿಕ ಪಾಲಾದೆ ಹಾಡು ಈಗಲೂ ಸಖತ್ ಫೇಮಸ್ ಇದೀಗ ಇದೇ ಹಾಡಿನ ಸಾಲನ್ನು ಅಧ್ಯಕ್ಷ ಇನ್ ಅಮೆರಿಕ ಚಿತ್ರಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಅಮ್ಮ ನಾನ್ ಸೇಲ್ ಆದೆ ಅಮೆರಿಕ ಪಾಲಾದೆ ಸಾಲನ್ನು ಮುಂದುವರೆಸಿ ಗೀತರಚನೆಕಾರ ವಿ ನಾಗೇಂದ್ರ ಪ್ರಸಾದ್ ಸಾಲುಗಳನ್ನು ಬರೆದಿದ್ದು ಟಿಪ್ಪು ಈ ಹಾಡನ್ನು ಹಾಡಿದ್ದಾರೆ. ಚಿತ್ರತಂಡ ಈ ಹಾಡನ್ನು ಸೆಪ್ಟೆಂಬರ್ 10 ಬಿಡುಗಡೆ ಮಾಡಲಿದ್ದಾರೆ. 

ನಟ ಶರಣ್ ಮತ್ತು ರಾಗಿಣಿ ಚಿತ್ರದಲ್ಲಿ ಅಭಿಯಿಸುತ್ತಿದ್ದಾರೆ. ಚಿತ್ರಕ್ಕೆ ಯೋಗಾನಂದ್ ಆ್ಯಕ್ಷನ್ ಕಟ್ ಹೇಳುತ್ತಿದ್ದು ಅಕ್ಟೋಬರ್ 4ರಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

SCROLL FOR NEXT