ಸಿನಿಮಾ ಸುದ್ದಿ

ತಂದೆಯನ್ನು ಕಳೆದುಕೊಂಡ ನಟಿ ಹರ್ಷಿಕಾ ಪೂಣಚ್ಚ

Raghavendra Adiga

ಸ್ಯಾಂಡಲ್ ವುಡ್ ನಟಿ ಕೊಡಗಿನ ಹರ್ಷಿಕಾ ಪೂಣಚ್ಚ ತಂದೆ ಇಂದು (ಸೋಮವಾರ) ವಿಧಿವಶರಾಗಿದ್ದಾರೆ.

ಉದ್ದಪಂಡ ಪೂಣಚ್ಚ (68) ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು ಕರುಳಿನ ಸಮಸ್ಯೆಯೂ ಇದ್ದ ಕಾರಣ ಕಳೆದ ಒಂದೂವರೆ ತಿಂಗಳಿನಿಂದ ಆಹಾರ ಸೇವನೆ ಕಷ್ಟವಾಗಿತ್ತು. ಇಂದು ಮುಂಜಾನೆ ಅವರು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆ ಬಳಿಯ ಕುಮ್ಮೆತೋಡುವಿನಲ್ಲಿ ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ.

SCROLL FOR NEXT