ಗಂಡುಮಗುವಿನ ತಾಯುಯಾದ 'ದಿ ವಿಲನ್' ನಟಿ ಆ್ಯಮಿ ಜಾಕ್ಸನ್ 
ಸಿನಿಮಾ ಸುದ್ದಿ

ಗಂಡುಮಗುವಿನ ತಾಯಿಯಾದ 'ದಿ ವಿಲನ್' ನಟಿ ಆ್ಯಮಿ ಜಾಕ್ಸನ್

ಬಹುಭಾಷಾ ನಟಿ  ಆ್ಯಮಿ ಜಾಕ್ಸನ್ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ, ಅವರು ತಮ್ಮ ನವಜಾತ ಪುತ್ರ ಮತ್ತು ತಮ್ಮ ಭಾವೀ ಪತಿ  ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಬಹುಭಾಷಾ ನಟಿ  ಆ್ಯಮಿ ಜಾಕ್ಸನ್ ಗಂಡು ಮಗುವಿನ ತಾಯಿಯಾಗಿದ್ದಾರೆ. ಸೋಮವಾರ, ಅವರು ತಮ್ಮ ನವಜಾತ ಪುತ್ರ ಮತ್ತು ತಮ್ಮ ಭಾವೀ ಪತಿ  ಜಾರ್ಜ್ ಪನಯೌಟು ಅವರೊಂದಿಗೆ ಆಸ್ಪತ್ರೆಯಲ್ಲಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ, ಆಮಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವುದನ್ನು ಕಾಣಬಹುದು, ಮಗುವನ್ನು ತನ್ನ ತೋಳುಗಳಲ್ಲಿಅಪ್ಪಿಕೊಂಡಿದ್ದರೆ ಜಾರ್ಜ್, ಅವಳ ಹಣೆಯ ಮೇಲೆ ಕಿಸ್ ಮಾಡುತ್ತಿದ್ದಾರೆ.

ತಮ್ಮ ವಿಶೇಷ ಕ್ಷಣಗಳಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿರುವ ಆ್ಯಮಿ "Our Angel, welcome to the world Andreas."  ಎಂದು ಬರೆದುಕೊಂಡಿದ್ದಾರೆ.

2018 ಜನವರಿ 1ರಂದು ಆ್ಯಮಿ ಜಾಕ್ಸನ್ ಉದ್ಯಮಿ ಜಾರ್ಜ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೆ ಬ್ರಿಟೀಷ್ ಮದರ್ಸ್ ಡೇ ದಿನ ತಾವು ತಾಯಿಯಾಗುತ್ತಿರುವುದಾಗಿ ಘೋಷಿಸಿಕೊಂಡಿದ್ದರು.ಗರ್ಭಿಣಿ ಆ್ಯಮಿ  ತಮ್ಮ ಗೆಳೆಯ ಜಾರ್ಕ್ಜ್ ಜತೆಗೆ ಮೇ 5ರಂದು ಮತ್ತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮುಂದಿನ ವರ್ಷಾರಂಬಕ್ಕೆ ಇಬ್ಬರೂ ವಿವಾಹವಾಗುವುದಾಗಿ ಹೇಳಿಕೊಂಡಿದ್ದರು.

ಆ್ಯಮಿ ಕನ್ನಡ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದು ಶಿವರಾಜ್ ಕುಮಾರ್, ಸುದೀಪ್ ಅಭಿಮಯದ "ದಿ ವಿಲನ್" ನಲ್ಲಿ ಪ್ರಮುಖ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರೆಂದು ನಾವಿಲ್ಲಿ ನೆನೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT