ಸಿನಿಮಾ ಸುದ್ದಿ

ಸರ್ಕಾರಿ ಶಾಲೆ ದತ್ತು ಪಡೆದ 'ಡಿಬಾಸ್' ಫ್ಯಾನ್ಸ್-ಶಿಕ್ಷಣ ಸಚಿವರ ಅಭಿನಂದನೆ

Raghavendra Adiga

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ’ಡಿ ಕಂಪನಿ’ ಹಾಸನ ಜಿಲ್ಲೆಯ ಕುಗ್ರಾಮದಲ್ಲಿರುವ ಸರ್ಕಾರಿ ಶಾಲೆಯೊಂದನ್ನು ದತ್ತು ಪಡೆದಿದ್ದು, ಸಾರ್ವಜನಿಕರ ಪ್ರಶಂಸೆ ಹಾಗೂ ಶಿಕ್ಷಣ ಸಚಿವರು ಮೆಚ್ಚುಗೆಗೆ ಪಾತ್ರವಾಗಿದೆ

ಸಕಲೇಶಪುರ ತಾಲ್ಲೂಕಿನ ರಾಮೇನಹಳ್ಳಿ ಸರ್ಕಾರಿ ಶಾಲೆಯನ್ನು ಎರಡು ವರ್ಷಗಳಿಗಾಗಿ ’ಡಿ ಕಂಪನಿ’ ದತ್ತು ಪಡೆದಿದ್ದು, ಅಭಿವೃದ್ಧಿಗೆ ಮುಂದಾಗಿದೆ.

ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಮೊದಲಾದ ವ್ಯವಸ್ಥೆಗಳನ್ನು ಡಿ ಕಂಪನಿ ಒದಗಿಸಲು ಮುಂದಾಗಿದೆ.  ಬೇಸಿಗೆ ರಜೆಯಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಲು ನಿರ್ಧರಿಸಿದೆ.

ದರ್ಶನ್ ಅಭಿಮಾನಿಗಳ ಈ ಕಾರ್ಯವನ್ನು ರಾಮೇನಹಳ್ಳಿಯ ನಿವಾಸಿಗಳು, ಶಾಲಾ ಮಕ್ಕಳ ಪೋಷಕರು ಶ್ಲಾಘಿಸಿದ್ದಾರೆ.

ಶಿಕ್ಷಣ ಸಚಿವ ಸುರೇಶ್ ಕುಮಾರ್, ಅನುಕರಣೀಯ ಕಾರ್ಯ ಮಾಡಿರುವ ದರ್ಶನ್ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ.

SCROLL FOR NEXT