ಸಿನಿಮಾ ಸುದ್ದಿ

ಮುಖ್ಯಮಂತ್ರಿಗಳೇ ಎರಡರಲ್ಲಿ ಯಾವುದಾದರೂ ಒಂದನ್ನು ಮಾಡಿ-ಲಾಕ್ ಡೌನ್ ಬಗ್ಗೆ ಯಡಿಯೂರಪ್ಪಗೆ ರಿಯಲ್ ಸ್ಟಾರ್ ಕೊಟ್ಟ ಸಲಹೆ ಹೀಗುಂಟು

Raghavendra Adiga

ಬೆಂಗಳೂರು: ರಿಯಲ್ ಸ್ಟಾರ್, ಪ್ರಜಾಕೀಯ ನಾಯಕ ಉಪೇಂದ್ರ ತಮ್ಮ ವಿಭಿನ್ನ ಶೈಲಿಯ ಆಲೋಚನೆಗಳಿಂದ ಹೆಸರಾದವರು. ಇದೀಗ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಕುರಿತಂತೆ ಉಪೇಂದ್ರ ತಮ್ಮದೇ ಶೈಲಿಯ ಆಲೋಚನೆ ಮಾಡಿದ್ದು ಈ ಕುರಿತಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲಹೆಗಳನ್ನು ನೀಡಿದ್ದಾರೆ.

ಕೊರೋನಾ ತಡೆಗಾಗಿ ಸರ್ಕಾರ ಲಾಕ್ ಡೌನ್ ಹಾಕಿದ್ದರೂ ಸಹ ಜನ ಹಾಲು, ದಿನಸಿ ಸೇರಿ ಅಗತ್ಯ ವಸ್ತುಗಳ ಖರೀದೆಗೆ ಹೊರಬರುವುದು ನಿಂತಿಲ್ಲ. ಇದರಿಂದ ಜನ ತರಕಾರಿ ಮಾರುಕಟ್ಟೆ, ಅಂಗಡಿಗಳ ಮುಂದೆ ಗುಂಪು ಸೇರುತ್ತಾರೆ. ಈ ಗುಂಪು ಸೇರುವುದನ್ನು ತಡೆಯಲು ಸೂಕ್ತ ಮಾರ್ಗ ಅನುಸರಿಸಬೇಕು ಎಂದ ಉಪೇಂದ್ರ ಎರಡು ಸಲಹೆಗಳನ್ನು ಕೊಟ್ಟಿದ್ದಾರೆ.

ನಿರ್ದೇಶಕ, ಪ್ರಜಾಕೀಯ ನಾಯಕ ಉಪೇಂದ್ರ ಈ ಕುರಿತು ಟ್ವೀಟ್ ಮಾಡಿದ್ದು ಅದನ್ನು ಸಿಎಂ ಅವರಿಗೆ ಟ್ಯಾಗ್ ಮಾಡಿದ್ದಾರೆ. "ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿ... ಎರಡರಲ್ಲಿ ಯಾವುದಾದರೂ ಒಂದನ್ನು ಮಾಡಿ" ಎಂದು ಎರಡು ಸಲಹೆಗಳನ್ನು ನೀಡಿದ್ದಾರೆ.

ಉಪೇಂದ್ರ ನೀಡಿರುವ ಆ ಎಅರಡು ಸಲಹೆಗಳು ಹೀಗಿದೆ-

1. ಶೇಕಡ ನೂರಕ್ಕೆ ನೂರು ಲಾಕ್‍ಡೌನ್: ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ
* ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರುತ್ತಾರೆ.
* ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.

2. ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್‍ಡೌನ್ ತೆರೆಯಿರಿ: ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅವರವರ ವ್ಯವಹಾರಗಳನ್ನು ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರು (ಹೀಗೆ ನಾಯಕರಯ ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ.
* ಲಾಕ್‍ಡೌನ್ ಮಾಡಿ ಜನರನ್ನು ಹಾಲು, ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ?

ಇಷ್ಟು ಮಾತ್ರವಲ್ಲದೆ "ಇಷ್ಟೆಲ್ಲಾ ಲಾಕ್‍ಡೌನ್ ಮಾಡಿಯೇ ನಮ್ಮ ದಡ್ಡ ಜನರು ಹೀಗೆ. ಇನ್ನು ಲಾಕ್‍ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣ ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್‍ಡೌನ್ ಮುಂದುವರಿಸಿದ್ರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ. ಮಲಗಿದ್ರೆ-ಸಾವು | ಕೂತಿದ್ರೆ – ರೋಗ | ನಡೀತಿದ್ರೆ ಜೀವನ" ಎಂದು ಹೇಳಿದ್ದಾರೆ.

SCROLL FOR NEXT