ಅನುಪಮಾ ಪರಮೇಶ್ವರನ್ 
ಸಿನಿಮಾ ಸುದ್ದಿ

ಯಾರದೋ ದೇಹಕ್ಕೆ ನಟಿಯ ತಲೆ ಅಂಟಿಸಿ ಪೋಸ್ಟ್: ಗರಂ ಆದ 'ನಟಸಾರ್ವಭೌಮ' ಬೆಡಗಿ ಅನುಪಮಾ ಪರಮೇಶ್ವರನ್

ಅನುಪಮಾ ಪರಮೇಶ್ವರನ್ ಬಹುಭಾಷಾ ನಟಿ, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ "ನಟಸಾರ್ವಭೌಮ" ಚಿತ್ರದಲ್ಲಿ ಅಭಿನಯಿಸಿದ ಈ ನಟಿಗೆ ಇದೀಗ ತಡೆಯಲಾಗದಷ್ಟು ಕೋಪ ಬಂದಿದೆ. ಇದಕ್ಕೆ ಕಾರಣವೆಂದರೆ ಅವರ ಫೇಸ್‍ಬುಕ್ ಖಾತೆ ಹ್ಯಾಕ್ ಆಗಿರುವುದು. ಮಾತ್ರವಲ್ಲ ಕಿಡಿಗೇಡಿಗಳು ಮಾರ್ಫ್ ಮಾಡಿದ ಫೋಟೋಗಳನ್ನು ಆಕೆಯ ಖಾತೆಯಲ್ಲಿ ಅಪ್ ಮಾಡಿದ್ದಾರೆ

ಅನುಪಮಾ ಪರಮೇಶ್ವರನ್ ಬಹುಭಾಷಾ ನಟಿ, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರ "ನಟಸಾರ್ವಭೌಮ" ಚಿತ್ರದಲ್ಲಿ ಅಭಿನಯಿಸಿದ ಈ ನಟಿಗೆ ಇದೀಗ ತಡೆಯಲಾಗದಷ್ಟು ಕೋಪ ಬಂದಿದೆ. ಇದಕ್ಕೆ ಕಾರಣವೆಂದರೆ ಅವರ ಫೇಸ್‍ಬುಕ್ ಖಾತೆ ಹ್ಯಾಕ್ ಆಗಿರುವುದು. ಮಾತ್ರವಲ್ಲ ಕಿಡಿಗೇಡಿಗಳು ಮಾರ್ಫ್ ಮಾಡಿದ ಫೋಟೋಗಳನ್ನು ಆಕೆಯ ಖಾತೆಯಲ್ಲಿ ಅಪ್ ಮಾಡಿದ್ದಾರೆ

ಈ ಸಂಬಂಧ ಇದೀಗ ನಟಿ ಅನುಪಮಾ ಸೈಬರ್ ಕ್ರೈಂ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ. ಯಾವಉದೋ ಕಿಡಿಗೇಡಿಗಳು ಯಾರದೋ ಫೋಟೋಗೆ ಅನುಪಮಾ ಪರಮೇಶ್ವರನ್ ಅವರ ತಲೆಯನ್ನು ಅಂಟಿಸಿ ಸಾಮಾಜಿಕ ತಾಣದಲ್ಲಿ ಅಪ್ ಮಾಡಿದ್ದಾರೆ. ಇದು ವೈರಲ್ ಆಗಿದ್ದು ನಟಿ ಇಂತಹಾ ಫೇಕ್ ಫೋಟೋಗಳನ್ನು ದಯವಿಟ್ಟು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

"ನಿಮ್ಮೆಲ್ಲರಲ್ಲಿ ವಿನಮ್ರ ಮನವಿ ದಯವಿಟ್ಟು ಮಾರ್ಫ್ ಮಾಡಿರುವ ಫೋಟೋ ಹಂಚಿಕೊಳ್ಳಬೇಡಿ. ಇದರಿಂದ ಅವರ ಮನಸಿಗೆ ತುಂಬಾ ಘಾಸಿ ಮಾಡುತ್ತದೆ. ಅವರು ಒಬ್ಬ ಹೆಣ್ಣು ಮಗಳು ಎಂಬುದನ್ನು ಮರೆಯಬೇಡಿ"  ನಟಿ ತನ್ನಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ಇಂತಹಾ ಫೇಕ್ ಫೋಟೋ ನಟಿಯ ಅಧಿಕೃತ ಖಾತೆಯಿಂದಲೇ ಅಪ್ ಆಗಿದ್ದು ಇದೀಗ ನಟಿ ಬೇರೆ ಸಾಮಾಜಿಕ ಮಾದ್ಯಮಗಳ ಮೂಲಕ ಅಭಿಮಾನಿಗಳಿಗೆ ಈ ಫೇಕ್ ಸುದ್ದಿ ಹಂಚಿಕೊಳ್ಳದಂತೆ ಕೋರಿದ್ದಾರೆ.

ಅನುಪಮಾ ಪರಮೇಶ್ವರನ್ ಸಧ್ಯ ತೆಲುಗಿನ "ಪಲುಕೆ ಬಂಗಾರಮಾಯೆರಾ" ಎಂಬ ಚಿತ್ರದಲ್ಲಿಆಭಿನಯಿಸುತ್ತಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕ ಈ ಚಿತ್ರದ ಶೂಟಿಂಗ್ ಮುಂದುವರಿಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel