ಸಿನಿಮಾ ಸುದ್ದಿ

ಕನ್ನಡದ 'ಲವ್ ಮಾಕ್ಟೇಲ್' ಹೊಗಳಿದ ತಮಿಳು ನಟ ಶಿವಕಾರ್ತಿಕೇಯನ್!

Vishwanath S

ನಟ ಕೃಷ್ಣ ನಟಿಸಿ, ನಿರ್ದೇಶಿಸಿರುವ ಲವ್ ಮಾಕ್ಟೇಲ್ ಚಿತ್ರ ಉತ್ತಮ ಪ್ರಶಂಸೆ ಪಡೆದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ಸದ್ದು ಮಾಡಲಿಲ್ಲ. ಆದರೆ ಇದೀಗ ತಮಿಳು ನಟನೋರ್ವನ ಚಿತ್ರವನ್ನು ಹೊಗಳಿದ್ದಾರೆ. 

ತಮಿಳಿನ ನಟ ಶಿವಕಾರ್ತಿಕೇಯನ್ ಚಿತ್ರವನ್ನು ನೋಡಿ ನಂತರ ಕೃಷ್ಣ ಅವರಿಗೆ ದೂರವಾಣಿ ಕರೆ ಮಾಡಿ ಪ್ರಶಂಸಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಕೃಷ್ಣ ಅವರು, ತಮಿಳು ನಟ ಶಿವಕಾರ್ತಿಕೇಯನ್ ಅವರು ದೂರವಾಣಿ ಕರೆ ಮಾಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಚಿತ್ರವನ್ನು ನೋಡಿದ ಬಳಿಕ ಅವರು ನನ್ನ ನಂಬರ್ ಅನ್ನು ಪತ್ತೆ ಮಾಡಿ ಶುಭಾಶಯ ಸಂದೇಶ ಕಳುಹಿಸಿದ್ದರು. 

ಬಳಿಕ ನಾನು ಅವರಿಗೆ ಕರೆ ಮಾಡಿದೆ. ಅವರು ಚಿತ್ರದ ಬಗ್ಗೆ ಹೊಗಳಿದರು. ಚಿತ್ರದಲ್ಲಿ ಹಾಸ್ಯ, ಲವ್ ಮತ್ತು ಭಾವನೆಗಳಿಂದ ಕೂಡಿದೆ. ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದೀರಾ ಎಂದರು ಎಂದು ಕೃಷ್ಣ ಹೇಳಿದರು. 

ಇದೇ ವೇಳೆ ಸೆಲೆಬ್ರಿಟಿಗಳಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿರುವುದು ಸಂತಸದ ಸಂಗತಿ. ಇದು ಮತ್ತಷ್ಟು ಚಿತ್ರಗಳನ್ನು ಮಾಡಲು ಹುರುಪು ತುಂಬಿದೆ. ಇನ್ನು ಲವ್ ಮಾಕ್ಟೇಲ್ ಸಿಕ್ವೇಲ್ ಮಾಡುವುದಾಗಿ ಕೃಷ್ಣ ಹೇಳಿದ್ದಾರೆ.

SCROLL FOR NEXT