ಸಿನಿಮಾ ಸುದ್ದಿ

ಲಾಕ್‌ಡೌನ್ ನಡುವೆ ಕಿಚ್ಚ ಅಭಿಮಾನಿಗಳಿಗೆ ಗುಡ್ ನ್ಯೂಸ್: ಏ.27ಕ್ಕೆ 'ಕೋಟಿಗೊಬ್ಬ 3' ಲಿರಿಕಲ್ ಸಾಂಗ್ ರಿಲೀಸ್

ದೇಶಾದ್ಯಂತ ಕೊರೋನಾ ಲಾಕ್‌ಡೌನ್ ಇರುವಂತೆಯೇ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಹೊಸ ಉತ್ಸಾಹ ತುಂಬಲು 7ಬರುತ್ತಿದ್ದಾರೆ. ಕಿಚ್ಚ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್ ಏ27ಕ್ಕೆರಿಲೀಸ್ ಆಗಲಿದೆ.

ದೇಶಾದ್ಯಂತ ಕೊರೋನಾ ಲಾಕ್‌ಡೌನ್ ಇರುವಂತೆಯೇ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಹೊಸ ಉತ್ಸಾಹ ತುಂಬಲು ಬರುತ್ತಿದ್ದಾರೆ. ಕಿಚ್ಚ ಅಭಿನಯದ ಕೋಟಿಗೊಬ್ಬ 3 ಚಿತ್ರದ ಮೊದಲ ಲಿರಿಕಲ್ ವೀಡಿಯೋ ಸಾಂಗ್ ಏ27ಕ್ಕೆ ರಿಲೀಸ್ ಆಗಲಿದೆ.

ಶಿವ ಕಾರ್ತಿಕ್ ನಿರ್ದೇಶನದ ಚಿತ್ರದ ಮೊದಲ ಹಾಡು "ಆಕಾಶಾನೆ ಆದರಿಸುವ..."ಏಪ್ರಿಲ್ 27 ರಂದು ಬೆಳಿಗ್ಗೆ 10 ಗಂಟೆಗೆ ಆನಂದ್ ಆಡಿಯೊದ ಯೂಟ್ಯೂಬ್ ಚಾನಲ್ ನಲ್ಲಿ ಅನಾವರಣಗೊಳ್ಳಲಿದೆ. ಈ ಬಗ್ಗೆ ನಟ ಸುದೀಪ್ ಸ್ವತಃ ತಮ್ಮ ಟ್ವಿಟ್ಟರ್ ನಲ್ಲಿ ಪ್ರಕಟಿಸಿದ್ದಾರೆ.

ಇಂಟ್ರೋ ಸಾಂಗ್ ಅನ್ನು  ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಂಯೋಜಿಸಿದ್ದಾರೆ ಮತ್ತು ಡಾ.ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯ ಇದಾಗಿದ್ದು ವ್ಯಾಸರಾಜ್ ಹಾಡಿದ್ದಾರೆ ದೇಶದಲ್ಲಿ ಕೊರೋನಾ ಹಾವಳಿ ಇಲ್ಲದೆ ಇದ್ದ ಪಕ್ಷದಲ್ಲಿ ಇದೇ ಏಪ್ರಿಲ್ 30 ರಂದು ಕೋಟಿಗೊಬ್ಬ 3 ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಾಗಿತ್ತು.

ಇದೆಲ್ಲದರ ನಡುವೆ ರಾಕ್ಲೈನ್ ​​ಎಂಟರ್ಟೈನರ್ಸ್ ಪ್ರಸ್ತುತಪಡಿಸಿದ ಮತ್ತು ಸುರಪ್ಪ ಬಾಬು ನಿರ್ಮಿಸಿದ ಈ ಚಿತ್ರ ಸ್ಯಾಟಲೈಟ್, ಡಿಜಿಟಲ್,  ಹಿಂದಿ ಡಬ್ಬಿಂಗ್ ಹಕ್ಕುಗಳ ವ್ಯವಹಾರದಲ್ಲಿ ಭಾರೀ ಲಾಭ ಗಳಿಸಿದೆ. ಒಟ್ತಾರೆ 27 ಕೋಟಿ ರೂ.ಕಲೆಕ್ಷನ್ ಆಗಿದೆ ಎಂದು ಹೇಳಲಾಗಿದೆ. ಚಿತ್ರದ ಕಥೆಯನ್ನು ಕಿಚ್ಚ ಸುದೀಪ್ ಬರೆದಿದ್ದರೆ ಶೇಖರ್ ಚಂದ್ರ ಛಾಯಾಗ್ರಹಣ ನೆರವೇರಿಸಿದ್ದಾರೆ.ಮಡೋನಾ ಸೆಬಾಸ್ಟಿಯನ್ ಚಿತ್ರದ ನಾಯಕಿಯಾಗಿದ್ದರೆ ದ್ಧಾ ದಾಸ್ ಇಂಟರ್ಪೋಲ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೋಟಿಗೊಬ್ಬ 3ನಲ್ಲಿ ಬಾಲಿವುಡ್ ನಟ ಅಫ್ತಾಬ್ ಶಿವದಾಸಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ನಟ ರವಿಶಂಕರ್ ಕೂಡ ತೆರೆ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಆಯ್ಕೆ ಸಮಿತಿ ಅಧ್ಯಕ್ಷರ ಆಯ್ಕೆ ಕಸರತ್ತು; BCCI ಆಫರ್ ತಿರಸ್ಕರಿಸಿದ ಸ್ಟಾರ್‌ ಗಳು, 100 ಟೆಸ್ಟ್‌ ಅನುಭವಿ ಆಟಗಾರರಿಂದಲೇ ನಕಾರ?

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ