ಯುವ ರಾಜ್‌ಕುಮಾರ್ 
ಸಿನಿಮಾ ಸುದ್ದಿ

ರಾಜ್ ಮೊಮ್ಮಗ ಯುವ ರಾಜ್‌ಕುಮಾರ್ ಸ್ಯಾಂಡಲ್ ವುಡ್ ಎಂಟ್ರಿ ಫಿಕ್ಸ್, ಚೊಚ್ಚಲ ಚಿತ್ರದ ಫಸ್ಟ್ ಲುಕ್ ರಿವೀಲ್

ವರನಟ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ಅವರ ಮೊಮ್ಮಗನಾದ ಯುವ ರಾಜ್‌ಕುಮಾರ್ ತಾವು ಸ್ಯಾಂಡಲ್ ವುಡ್ ಪ್ರವೇಶವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಕೈಯಲ್ಲಿ ಆಯುಧ ಹಿಡಿದು ಮೊನಚು ನೋಟ ಬೀರುವ ಫಸ್ ಲುಕ್ ಒಂದು ಇದಾಗಲೇ ಹೊರಬಂದಿದೆ. ಪುನೀತ್ ನಿರ್ದೇಶಿಸಲಿರುವ ಇನ್ನೂ ಹೆಸರಿಡದ ಚೊಚ್ಚಲ ಚಿತ್ರದಲ್ಲಿ ಯುವ ರಾಜ್‌ಕುಮಾರ್ ಅಭಿನಯಿಸುತ್ತಿದ್ದಾರೆ.

ವರನಟ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ಅವರ ಮೊಮ್ಮಗನಾದ ಯುವ ರಾಜ್‌ಕುಮಾರ್ ತಾವು ಸ್ಯಾಂಡಲ್ ವುಡ್ ಪ್ರವೇಶವನ್ನು ಅಧಿಕೃತವಾಗಿ ದೃಢಪಡಿಸಿದ್ದಾರೆ. ಕೈಯಲ್ಲಿ ಆಯುಧ ಹಿಡಿದು ಮೊನಚು ನೋಟ ಬೀರುವ ಫಸ್ ಲುಕ್ ಒಂದು ಇದಾಗಲೇ ಹೊರಬಂದಿದೆ. ಪುನೀತ್ ನಿರ್ದೇಶಿಸಲಿರುವ ಇನ್ನೂ ಹೆಸರಿಡದ ಚೊಚ್ಚಲ ಚಿತ್ರದಲ್ಲಿ ಯುವ ರಾಜ್‌ಕುಮಾರ್ ಅಭಿನಯಿಸುತ್ತಿದ್ದಾರೆ.

ವೈಆರ್ 01 ಎಂಬ ಶೀರ್ಷಿಕೆಯೊಂದಿಗೆ ತಯಾರಕರು ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ, ಆದರೆ ಅವರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಪೋಸ್ಟರ್‌ನಲ್ಲಿ ಯುವ ರಾಜ್‌ಕುಮಾರ್ ನೋಡಿದಾಗ ಒಂದು ಕುತೂಹಲಕಾರಿ ಕಥಾಹಂದರ ಮತ್ತು ಐತಿಹಾಸಿಕ ಟೈಮ್ ಡ್ರಾಮಾ ಇರಬಹುದೆಂದು ಖಚಿತವಾಗಿದೆ.

"ಪ್ರಸ್ತುತ, ಕಥಾವಸ್ತುವಿನ ಬಗ್ಗೆ ಹೆಚ್ಚಿನದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ" ಎಂದು ಟೀಸರ್‌ ಕೆಲಸದಲ್ಲಿ ನಿರತವಾಗಿರುವ ನಿರ್ದೇಶಕ ಹೇಳಿದ್ದಾರೆ.ಲಾಕ್‌ಡೌನ್ ತೆಗೆದ ನಂತರದಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವುದಾಗಿ ಅವರು ಹೇಳೀದ್ದಾರೆ.

"ಟೀಸರ್ ಪಾತ್ರದಒಂದು ಲುಕ್ ನೀಡಲಿದೆ. ಜೊತೆಗೆ ಯುವ ರಾಜ್‌ಕುಮಾರ್ ಈ ಪಾತ್ರಕ್ಕೆ ಹೊಂದಿಕೊಳ್ಳುವಲ್ಲಿ ಹೇಗೆ ತರಬೇತಿ ಹೊಂದಿದ್ದಾರೆ ಎನ್ನುವುದು ಗೊತ್ತಾಗಲಿದೆ" ಏಪ್ರಿಲ್ 23 ರಂದು ತಮ್ಮ ಜನ್ಮದಿನ ಆಚರಿಸಿಕೊಂಡಿದ್ದ ಯುವ ರಾಜ್‌ಕುಮಾರ್ ಅವರಿಗೆ, ಅಣ್ಣಾವ್ರ ಜನ್ಮ ದಿನಾಚರಣೆಯಂದು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿರುವುದು ಹೆಚ್ಚು ವಿಶೇಷ ಸಂದರ್ಭವೆನಿಸಿದೆ.

ಯುವ ರಾಜ್‌ಕುಮಾರ್   ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಮತ್ತು ವಿನಯ್ ರಾಜ್‌ಕುಮಾರ್ ಅವರ ಸಹೋದರನಾಗಿದ್ದು ತಮ್ಮ ದೊಡ್ಡಪ್ಪನಾಗಿರುವ ಶಿವರಾಜ್‌ಕುಮಾರ್ ಮತ್ತು ಚಿಕ್ಕಪ್ಪನಾಗಿರುವ  ಪುನೀತ್ ರಾಜ್‌ಕುಮಾರ್  ಅವರ ಅಭಿನಯ ನೋಡುತ್ತಾ ಬೆಳೆದವರು. ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿರುವ ಪುನೀತ್ ಈ ಹಿಂದೆ ಕೆಜಿಎಫ್ ಚಾಪ್ಟರ್ 1 ರಲ್ಲಿ ಪ್ರಶಾಂತ್ ನೀಲ್ ಅವರ ಸಹವರ್ತಿಯಾಗಿ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!