ಸಿನಿಮಾ ಸುದ್ದಿ

ಮೌನದಲ್ಲೂ ಶಬ್ದಗಳನ್ನು ಕಾಣಿಸಿದ ಕಲಾವಿದ!

Srinivas Rao BV

ಇರ್ಫಾನ್ ಖಾನ್ ಎಂದಾಕ್ಷಣ ಎಲ್ಲಾ ಸಿನಿಮಾ ಪ್ರಿಯರ ಕಣ್ಣಲ್ಲೂ ಒಂದು ಮಿಂಚು ಕಾಣಿಸಿ ಹೋಗುತ್ತದೆ, ಬಾಯಿಂದ ತನಗೆ ತಾನೆ ಗೊತ್ತೊಲ್ಲದೆ ವಾವ್ವ್.. ಸೂಪರ್ ಎನ್ನುವ ಉದ್ಘಾರ ಬಂದು ಬಿಡುತ್ತದೆ. ಕಲೆ ಕೇವಲ ನಿನಗೆ ಮಾತ್ರ ಸಂಬಂಧಿಸಿದ್ದಲ್ಲಾ, ಅದು ನೀನು ಮತ್ತು ಸಮಾಜ ಎರಡರ ನಡುವಿನ ಸಂಬಂಧವಾಗಿರುತ್ತದೆ ಎನ್ನುತ್ತಾರೆ. 

ಇರ್ಫಾನ್ ಅಭಿನಯಿಸಿದ್ದಾರೆ ಎನ್ನುವ ಕಾರಣಕ್ಕಾಗೇ ಇವರ ಸಿನಿಮಾವನ್ನು ನೋಡಿದ್ದು ಇದೆ. ಆದರೆ ಅಂತಹ ಪ್ರಯತ್ನಗಳು ಎಂದಿಗೂ ಮೋಸ ಮಾಡಿಲ್ಲ. ಇವರ ಆಕ್ಟಿಂಗ್ ನಾನು ಮೊದಲು ನೋಡಿದ್ದು ಬೈಪಾಸ್ ಅನ್ನುವ ಒಂದು ಕಿರು ಚಿತ್ರದಿಂದ. ಅದರಲ್ಲಿ ಒಂದು ಪುಟ್ಟ ಪಾತ್ರ. ಮುಂದಿನ ದಿನಗಳಲ್ಲಿ ಆತನ ಬಗ್ಗೆ ಕೇಳಿದ್ದೇ ಕೇಳಿದ್ದು ಎಲ್ಲಾ ಸಿನಿಮಾಗಳನ್ನು ನೋಡಲು ಪ್ರಾರಂಭಿಸಿದೆ. ನಂತರದ ದಿನಗಳಲ್ಲಿ  ನೋಡಿದ ಇವರ ಮೊದಲ ಸಿನಿಮಾ ’ಪಾನ್ ಸಿಂಗ್ ತೋಮಾರ್’. ಅದೆಂತಹ ಬ್ರಿಲಿಯಂಟ್ ಪರ್ಫಾಮೆನ್ಸ್, ಈ ಚಿತ್ರಕ್ಕಾಗಿ ಪಟ್ಟಿರುವ ಶ್ರಮಕ್ಕೆ ಆ ಸಿನಿಮಾ ಬಹಳಷ್ಟು ಜನರಿಗೆ ತಲುಪಬೇಕಾಗಿತ್ತು. ನಂತರ ’ಲಂಚ್ ಬಾಕ್ಸ್’ ಮೆಚ್ಯೂರಿಟಿ ಆಫ್ ಆಕ್ಟಿಂಗ್, ಸಾಮಾನ್ಯ ಮನುಷ್ಯನಂತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದು ’ಪೀಕು’. ಅದಾದ ಬಳಿಕ ಇವರು ಆಕ್ಟ್ ಮಾಡಿದ ಎಲ್ಲಾ ಚಿತ್ರಗಳನ್ನು ನೋಡಿದ್ದಾಯಿತು. ಹೆಗ್ಗಳಿಕೆ ಅಂದರೆ ಬಾಲಿವುಡ್ ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನನ್ನ ಪ್ರೀತಿಯ 2ನೇ ನಟರು ಇವರು. ಮೊದಲು ನಾಸಿರುದ್ದಿನ್‌ಷಾ ಸರ್. ಇಬ್ಬರಲ್ಲೂ ಅದೆಂತಹದೋ ಸಾಮ್ಯತೆ ನನಗೆ ಇಷ್ಟ. ಖಾನ್ ಅಭಿಯದಲ್ಲಿ ತಮ್ಮದೇ ಆದ ಶೈಲಿಯನ್ನು ಕಂಡುಕೊಂಡಿದ್ದರು. ತುಂಬಾ ಸೀರಿಯಸ್ ಪಾತ್ರಗಳ ಮೂಲಕ ಜನರು ಗುರುತ್ತಿಸುತ್ತಿರುವುದ ಕಂಡುಕೊಂಡ ಅವರು ಹಾಸ್ಯ ಮತ್ತು ಶೃಂಗಾರವನ್ನು ಮಾಡಬಲ್ಲೇ ಎಂದು ತೋರಿಸಿಕೊಟ್ಟರು.

ಕಲೆಗೆ ಇರುವ ಶಕ್ತಿಯೇ ಅಂತಹುದು. ಜಾತಿ, ಧರ್ಮ, ಭಾಷೆ, ದೇಶ, ಗಡಿಗಳನ್ನು ಮೀರಿದ್ದು. ಕಡಿಮೆ ಹಾಗೂ ನೇರವಾಗಿ ಮಾತನಾಡುತ್ತಿದ್ದದ್ದು ಅವರ ಗುಣಸ್ವಭಾವದಲ್ಲಿ ಒಂದು. ನೀವು ಮಾಡುತ್ತಿರುವ ಕೆಲಸವನ್ನು ಎಂಜಾಯ್ ಮಾಡಿ, ಆ ಕ್ಷಣಕ್ಕೆ, ಅಲ್ಲಿ ಜೀವಂತಿಕೆಯನ್ನು ಕಂಡುಕೊಳ್ಳಿ ಎಂದು ಸದಾ ನಗುವಿನ ಮೂಲಕ ಉತ್ತರ ನೀಡಿದ ಇರ್ಫಾನ್ ಇಂದು ಸಿನಿಮಾಗಳ ಮೂಲಕ ನಮ್ಮೊಂದಿಗಿದ್ದಾರೆ. ನಿಮ್ಮ ಸಿನಿಮಾಗಳನ್ನು ನೋಡಿ ಅಭಿನಯವನ್ನು ಕಲಿಯುವ ಅಭಿಮಾನಿಗಳನ್ನು ಹೊಂದಿರುವ ಇರ್ಫಾನ್ ಸರ್ ನಿಮಗೆ ನಮ್ಮದೊಂದು ಸಲಾಮ್. 

ನಟರಾಜ್ ಎಸ್ ಭಟ್, ಚಿತ್ರ ನಟ

natarajsbhat@gmail.com

SCROLL FOR NEXT