ಸಿನಿಮಾ ಸುದ್ದಿ

ಚಿತ್ರಕಥೆ ಬರೆಯುವುದರಲ್ಲಿ ಬ್ಯುಸಿಯಾದ ರಕ್ಷಿತ್ ಶೆಟ್ಟಿ ಮತ್ತವರ ತಂಡ!

Nagaraja AB

ಬೆಂಗಳೂರು: ಪ್ರಸ್ತುತ ಎಂಟರ್ ಟೈನ್ ಮೆಂಟ್ ಜಗತ್ತಿನಲ್ಲಿ ಅಪ್ ಡೇಟ್ ನೊಂದಿಗೆ ಅಸ್ತಿತ್ವ ಉಳಿಸಿಕೊಳ್ಳಲು ಬಯಸುವ ನಟ, ನಿರ್ದೇಶಕ , ನಿರ್ಮಾಪಕ ರಕ್ಷಿತ್ ಶೆಟ್ಟಿ, ಡಿಜಿಟಲ್ ಯುಗಕ್ಕೆ ತಕ್ಕಂತೆ ಸಿನಿಮಾ ಮಾಡುವ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಸ್ಯಾಂಡಲ್ ವುಡ್ ಪ್ರವೇಶಿಸಿ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ಜುಲೈ 23 ರಂದು ತನ್ನ  ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದ ರಕ್ಷಿತ್ ಶೆಟ್ಟಿ, ಪುಣ್ಯಕೋಟಿ ಕಥೆಯಿಂದ ಬಿಡುವು ಪಡೆದುಕೊಂಡಿದ್ದು, ಹೊಸ ರೀತಿಯ ಕಥೆ ಮಾಡುತ್ತಿರುವುದಾಗಿ ತಿಳಿಸಿದ್ದರು.

ರಕ್ಷಿತ್ ಮತ್ತು ಇತರ ಎಂಟು ಮಂದಿ ಕಥೆಗಾರರು ಕಥೆ ಬರೆಯುವಲ್ಲಿ ತೊಡಗಿಸಿಕೊಂಡಿದ್ದಾರೆ.ಕಥೆಗಾರರೊಂದಿಗೆ ರಾಜೀ ಇಲ್ಲ, ಕಥೆ ಪೂರ್ಣಗೊಂಡ ನಂತರ ಚಿತ್ರೀಕರಣ ಆರಂಭಿಸಲಾಗುವುದು, ನಂತರ ಒಂದು ತಿಂಗಳೊಳಗೆ ಸಿನಿಮಾ ಪೂರ್ಣಗೊಳಿಸಬಹುದು ಎಂದು ರಕ್ಷಿತ್ ಶೆಟ್ಟಿ ತಿಳಿಸಿದರು.

ಉತ್ತಮವಾದ ಮೂರು ಕಥೆಗಳನ್ನು ಆಯ್ಕೆ ಮಾಡಿ ಅವುಗಳನ್ನು ನಮ್ಮ ಪ್ರೊಡಕ್ಷನ್ ಹೌಸ್ ನಿಂದ ಚಿತ್ರ ಮಾಡಲಾಗುವುದು,ಪ್ರಸ್ತುತ ಸಂದರ್ಭದಲ್ಲಿ 777 ಚಾರ್ಲಿ, ಸಪ್ತ ಸಾಗರದಾಚೆ ಯೆಲ್ಲೂ ಚಿತ್ರೀಕರಣ ಬಾಕಿ ಉಳಿದಿದ್ದು, ಅವುಗಳು ಮುಗಿದ ನಂತರ ನೂತನ ಚಿತ್ರಗಳ ಕಡಗೆ ಗಮನ ಹರಿಸಲಾಗುವುದು ಎಂದು ಹೇಳಿದರು.

ಒಟಿಟಿ ಬಗ್ಗೆ ತಿಳಿದುಕೊಂಡಿರುವ ರಕ್ಷಿತ್ ಶೆಟ್ಟಿ, ಇನ್ನೂ ಎರಡು ತಿಂಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದ್ದು,ಮಿತವಾದ ಪರಿಸರದಲ್ಲಿ ಚಿಕ್ಕದಾದ ಮೂರು ಪ್ರಾಜೆಕ್ಟ್ ಗಳ ಚಿತ್ರೀಕರಣ ಮಾಡಲು ಯೋಜನೆ ರೂಪಿಸಲಾಗಿದೆ.ಸಣ್ಣದಾದ ಬಜೆಟ್ ನಲ್ಲಿ ಉತ್ತಮವಾದ ಚಿತ್ರ ಮಾಡಲಾಗುತ್ತಿದೆ. ತಾನು ಕಥೆ ಬರೆಯುತ್ತಿರುವ ಸಿನಿಮಾ ವಿಶಿಷ್ಠವಾಗಲಿದೆ. ಕಮರ್ಷಿಯಲ್ ಅಂಶಗಳನ್ನು ಮನದಲ್ಲಿ ಇಟ್ಟುಕೊಳ್ಳದೆ ಭಾವನಾತ್ಮಕ ಅಂಶಗಳೊಂದಿಗೆ ಪ್ರಯೋಗ ಮಾಡಲು ಲಾಕ್ ಡೌನ್ ಅವಕಾಶ ಮಾಡಿಕೊಟ್ಟಿದೆ ಅನ್ನಿಸುತ್ತಿದೆ ಎಂದರು.

SCROLL FOR NEXT