ಸಿನಿಮಾ ಸುದ್ದಿ

ಅನಿಮೇಷನ್ ಜಗತ್ತಿಗೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್!

Nagaraja AB

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಮಾನ್ನಿತಾ ಕಾಮತ್ ಗೆ ತನ್ನೊಳಗಿನ ಮತ್ತೊಂದು ಸೃಜನಾತ್ಮಕ ಅಂಶವನ್ನು ತಿಳಿಯಲು
ಲಾಕ್ ಡೌನ್ ನೆರವಾಗಿದೆ. ಆರ್ ಜೆ ಆಗಿದ್ದ ನಟಿ ಮಾನ್ವಿತಾ ಇದೀಗ ಅನಿಮೇಷನ್ ಜಗತ್ತಿಗೆ ಕಾಲಿಟ್ಟಿದ್ದು, ಕಥೆ ಬರೆಯುತ್ತಿದ್ದಾರೆ.
ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಾನ್ವಿತಾ ಇದನ್ನು ಪ್ಯಾಶನ್ ಆಗಿ ಮಾಡುತ್ತಿದ್ದಾರೆ.

ಮಾನೇಕಿನ್ ಸ್ಟುಡಿಯೋ ಹೊಸ ಸಾಹಸವಾಗಿದ್ದು, ಅನಿಮೇಷನ್ ಮತ್ತು ನೇರ ಕ್ರಿಯಾ ಚಿತ್ರ ನಿರ್ಮಾಣ ನಡುವಣ ಅಂತರವನ್ನು 
ಸರಾಗವಾಗಿ ತುಂಬಲಿದ್ದು, ಹೆಚ್ಚಿನ ಗುಣಮಟ್ಟದ ಅಂಶಗಳ ಸೃಷಿಗೂ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಚಲನಚಿತ್ರ ನಿರ್ಮಾಪಕರು ಕಥೆ, ಟೈಟಲ್ ಸಿಕ್ವೇನ್ಸ್ , ಮತ್ತಿತರ ಸಿನಿಮಾಗೆ ಸಂಬಂಧಿತ ಅಂಶಗಳಿಗಾಗಿ ಆಗಾಗ್ಗೆ ಕರೆಯುವ ಸಂಸ್ಥೆಯಾಗ ಬಯಸುವುದಾಗಿ ಹೇಳುವ ಮಾನ್ವಿತಾ,  ಚಿತ್ರದ ಪ್ರತಿಯೊಂದು ಅಂಶವನ್ನು ತಿಳಿಯಲು ಹಲವಾರು ವರ್ಷಗಳೇ ಬೇಕಾಗಲಿವೆ. ಅನಿಮೇಷನ್ ಕಲಾವಿದರಿಗೆ ದೃಶ್ಯೀಕರಣ ಕೌಶಲ್ಯಗಳು ಎಲ್ಲವೂ ಒಂದೇ ಸ್ಥಳದಲ್ಲಿ ಸಿಗುತ್ತವೆ ಎಂದು ಮಾನ್ವಿತಾ ಹೇಳುತ್ತಾರೆ. ಅವರ ಸ್ಟುಡಿಯೋವನ್ನು ಇತ್ತೀಚಿಗೆ ಬಾಲಿವುಡ್ ನಿರ್ಮಾಪಕ ಮಧು ಮಂತೇನಾ ವರ್ಮ ಉದ್ಘಾಟಿಸಿದ್ದರು.

ಎರಡು ವರ್ಷಗಳ ಕಾಲ ನಿರಂತರ ಕಲಿಕೆ ಮತ್ತು ಪ್ರಯಾಣದ ಅಲೆದಾಟದ ನಂತರ ಆಲೋಚನೆ ಮತ್ತು ಕಲಿಕೆಗೆ
ನೆಲೆ ಕಲ್ಪಿಸಲು ಬಯಸಿದ್ದು, ಅನಿಮೇಷನ್ ಉಪನ್ಯಾಸಕರೊಂದಿಗೆ ಸಂಪರ್ಕದಲ್ಲಿರುವುದಾಗಿ ಟಗರು ಪುಟ್ಟಿ ತಿಳಿಸಿದ್ದಾರೆ.

ಪ್ರಸ್ತುತ ನೆದರ್ ಲ್ಯಾಂಡ್ ನಲ್ಲಿ ನೆಲೆಸಿರುವ ಸಂಬಂಧಿ ಅಂಕಿತಾ ಜೊತೆಗೆ ಪೋನ್ ನೊಂದಿಗೆ ಸಂಪರ್ಕದಲ್ಲಿದ್ದು, ಜೊತೆಯಾಗಿ
ಕೆಲಸ ಮಾಡಲು ಸಂತೋಷವಾಗುತ್ತಿದೆ.  ಮಂಕಿ ರೈಡಿಂಗ್ ಎ ಬೈಸಿಕಲ್ ಅವರ ಮೊದಲ ಅನಿಮೇಷನ್ ಚಿತ್ರವಾಗಿದ್ದು, ಇದು ನಮ್ಮ
ಅಸ್ವಿತ್ವಕ್ಕೆ ಥೀಮ್ ಆಗಿ ಕಾರ್ಯನಿರ್ವಹಿಸಿತು ಎಂದು ಹೇಳುವ ಮಾನ್ವಿತಾ, ನಿರ್ದೇಶಕ ಸೂರಿ ಕಲಾಕೃತಿ ವೀಕ್ಷಣೆ ಬಳಿಕ ನನ್ನ ಫ್ಯಾಶನ್ ಮತ್ತಷ್ಟು ಬೆಳೆಯಿತು ಎನ್ನುತ್ತಾರೆ.

ವರ್ಣಚಿತ್ರಕಾರರು ಆಗಿರುವ ಚಿತ್ರ ನಿರ್ದೇಶಕರು ಯಾವಾಗಲೂ ನಮಗೆ ಸ್ಪೂರ್ತಿ ಎನ್ನುವ ಮಾನ್ವಿತಾ, ಮಾನೇಕಿನ್ ಎಂಬುದು ಮಾನ್ವಿತಾ ಮತ್ತು ಕಿನಿ ಎಂಬ ಪದಗಳಿಂದ ಬಂದಿದೆ. ಅದು ಸಂಸ್ಥೆಗೆ ಸಾಕಷ್ಟು ಸೂಕ್ತವೆಂದು ಭಾವಿಸಿದ್ದು,  ಪೂರ್ವ ದೃಶ್ಯೀಕರಣ ಸೇವೆಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

SCROLL FOR NEXT