ಸಿನಿಮಾ ಸುದ್ದಿ

ಗುಂಜಾನ್ ಸಕ್ಸೇನಾ: ಅನಗತ್ಯ ಋಣಾತ್ಮಕ ಚಿತ್ರಣದ ಬಗ್ಗೆ ಐಎಎಫ್ ಆಕ್ಷೇಪ

Srinivas Rao BV

ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಐಎಎಫ್ ನ ಮೊದಲ ಮಹಿಳಾ ಅಧಿಕಾರಿ ಗುಂಜಾನ್ ಸಕ್ಸೇನಾ ಅವರ ಕುರಿತಾದ ಸಿನಿಮಾದ ಬಗ್ಗೆ ಐಎಎಫ್ ನ್ನು ಋಣಾತ್ಮಕವಾಗಿ ಚಿತ್ರಿಸಲಾಗಿದೆ ಎಂದು ಐಎಎಫ್ ಆಕ್ಷೇಪ ವ್ಯಕ್ತಪಡಿಸಿದೆ. 

ಈ ಬಗ್ಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ಪತ್ರ ಬರೆದಿದ್ದು, ಸಿನಿಮಾದಲ್ಲಿ ಗುಂಜಾನ್ ಸಕ್ಸೇನಾ ಅವರನ್ನು ವೈಭವೀಕರಿಸುವ ಸಲುವಾಗಿ ಐಎಎಫ್ ನಲ್ಲಿರುವ ಕೆಲಸದ ವಾತಾವರಣದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಪ್ರಮುಖವಾಗಿ ಮಹಿಳೆಯರ ವಿರುದ್ಧ ಇರುವಂತೆ ಚಿತ್ರಿಸಲಾಗಿದೆ ಎಂದು ಆಕ್ಷೇಪ ಸಲ್ಲಿಸಿದೆ. 

ಆ.12 ರಂದು ಗುಂಜಾನ್ ಸಕ್ಸೇನಾ ಅವರ ಕುರಿತಾಗಿ ತಯಾರಾಗಿರುವ ದಿ ಕಾರ್ಗಿಲ್ ಗರ್ಲ್ ಎಂಬ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ಇಂದು ಬಿಡುಗಡೆಯಾಗಲಿದೆ. ಸೆನ್ಸಾರ್ ಬೋರ್ಡ್ ಹಾಗೂ ನೆಟ್ ಫ್ಲಿಕ್ಸ್ ಸಿನಿಮಾವನ್ನು ನಿರ್ಮಿಸಿರುವ ಧರ್ಮ ಪ್ರೊಡಕ್ಷನ್ಸ್ ಗೆ ಐಎಎಫ್ ಆಕ್ಷೇಪಣೆಯ ಪತ್ರ ತಲುಪಿಸಲಾಗಿದೆ. 

ಮುಂದಿನ ಪೀಳಿಗೆಯ ಐಎಎಫ್ ಅಧಿಕಾರಿಗಳಿಗೆ ಸ್ಪೂರ್ತಿ ನೀಡುವ ಚಿತ್ರವಾಗಲಿದೆ ಎಂಬ ಕಾರಣಕ್ಕಾಗಿ ಅಧಿಕೃತ ಮಾಹಿತಿಯನ್ನು ಚಿತ್ರದಲ್ಲಿ ತೋರಿಸಲು ಒಪ್ಪಿಗೆ ನೀಡಲಾಗಿತ್ತು. ಆದರೆ ಈಗ ಟ್ರೈಲರ್ ನೋಡಿದ ಬಳಿಕ ಐಎಎಫ್ ನ್ನು ಋಣಾತ್ಮಕವಾಗಿ ಚಿತ್ರಿಸಲಾಗಿರುವುದು ಕಂಡುಬಂದಿದೆ ಎಂದು ಐಎಎಫ್ ಹೇಳಿದೆ. 

SCROLL FOR NEXT