ಸೋನು ಸೂದ್ 
ಸಿನಿಮಾ ಸುದ್ದಿ

ನಿತ್ಯ 32 ಸಾವಿರ ಮಂದಿಯಿಂದ ಸಹಾಯಕ್ಕಾಗಿ ಮನವಿ; ನನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇನೆ ಎಂದ ಸೋನು ಸೂದ್

ನೆರವು ಯಾಚಿಸಿ ನಿತ್ಯ ಬರೊಬ್ಬರಿ 32 ಸಾವಿರಕ್ಕೂ ಅಧಿಕ ಮಂದಿ ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಬಾಲಿವುಡ್ ನಟ ಸೋನುಸೂದ್ ಹೇಳಿದ್ದಾರೆ.

ಮುಂಬೈ: ನೆರವು ಯಾಚಿಸಿ ನಿತ್ಯ ಬರೊಬ್ಬರಿ 32 ಸಾವಿರಕ್ಕೂ ಅಧಿಕ ಮಂದಿ ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಬಾಲಿವುಡ್ ನಟ ಸೋನುಸೂದ್ ಹೇಳಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ವಲಸೆ ಕಾರ್ಮಿಕರ ಪ್ರಯಾಣಕ್ಕೆ ನೆರವು ನೀಡಿ ದೇಶಾದ್ಯಂತ ಮನೆ ಮಾತಾಗಿದ್ದ ಸೋನುಸೂದ್ ಅವರ ಪರೋಪಕಾರ ಮುಂದುವರೆದಿದ್ದು, ಇದೀಗ ಸೋನು ಸೂದ್ ಅವರ ಬಳಿ ನಿತ್ಯ ಸುಮಾರು 32 ಸಾವಿರ ಮಂದಿ ನೆರವು ಯಾಚಿಸುತ್ತಿದ್ದಾರೆ. ಈ ಬಗ್ಗೆ ಸ್ವತಃ ನಟ ಸೋನು  ಸೂದ್ ಅವರು ಟ್ವೀಟ್ ಮಾಡಿದ್ದು, ಸುಮಾರು 1,137 ಇಮೇಲ್, 19 ಸಾವಿರ ಫೇಸ್‍ಬುಕ್ ಮೆಸೇಜ್, 4,812 ಇನ್ಸ್ ಸ್ಟಾಗ್ರಾಂ ಮೆಸೇಜ್, 6,741 ಟ್ವಿಟ್ಟರ್ ನಲ್ಲಿ ಸಹಾಯ ಮಾಡುವಂತೆ ಮನವಿಗಳು ಬರುತ್ತಿವೆ. ಸಹಾಯಕ್ಕಾಗಿ ಇಷ್ಟೊಂದು ಮನವಿಗಳು ಬಂದರೆ ಒಬ್ಬನೇ ವ್ಯಕ್ತಿ ಎಷ್ಟು ಜನರಿಗೆ ಸಹಾಯ  ಮಾಡಲು ಸಾಧ್ಯ?. ಎಲ್ಲರನ್ನೂ ಸಂಪರ್ಕಿಸಲೂ ಸಾಧ್ಯವಿಲ್ಲ. ಆದರೂ ನನ್ನ ಕೈಲಾದಷ್ಟು ಸಹಾಯ ಮಾಡುವುದಾಗಿ ನಟ ಭರವಸೆ ನೀಡಿದ್ದಲ್ಲದೆ, ಒಂದು ವೇಳೆ ನಿಮ್ಮ ಮೆಸೇಜ್ ನೋಡಿಲ್ಲ ಎಂದರೆ ದಯವಿಟ್ಟು ಕ್ಷಮಿಸಿಬಿಡಿ ಎಂದು ಹೇಳಿದ್ದಾರೆ.

ಕಳೆದ ಬುಧವಾರ ಕರ್ನಾಟಕದ ವರಲಕ್ಷ್ಮಿ ಎಂಬಾಕೆ ನಟನ ಬಳಿ ತನಗೊಂದು ತರಕಾರಿ ಅಂಗಡಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಳು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ನಟ, ಹೊಸ ಅಂಗಡಿಯೊಂದಿಗೆ ನಿಮ್ಮ ಬೆಳಗ್ಗಿನ ದಿನ ಪ್ರಾರಂಭವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!