ಎಸ್ ಪಿ ಬಾಲಸುಬ್ರಹ್ಮಣ್ಯಂ 
ಸಿನಿಮಾ ಸುದ್ದಿ

ಎಸ್‌ಪಿಬಿ ಚೇತರಿಕೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ, ಮೆಸೇಜ್‍ಗಳ ಮಹಾಪೂರ

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಚೇತರಿಕೆಗಾಗಿ ಚಲನಚಿತ್ರ ನಿರ್ದೇಶಕ ಭಾರತೀರಾಜ ಮತ್ತು ಚಲನಚಿತ್ರ ಭ್ರಾತೃತ್ವದ ಕರೆಯ ಮೇರೆಗೆ ಗಾಯಕನ ಅಭಿಮಾನಿಗಳು ಇಂದು ಸಂಜೆ 6 ಗಂಟೆಯಿಂದ 6.05ರವರೆಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಚೆನ್ನೈ: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಚೇತರಿಕೆಗಾಗಿ ಚಲನಚಿತ್ರ ನಿರ್ದೇಶಕ ಭಾರತೀರಾಜ ಮತ್ತು ಚಲನಚಿತ್ರ ಭ್ರಾತೃತ್ವದ ಕರೆಯ ಮೇರೆಗೆ ಗಾಯಕನ ಅಭಿಮಾನಿಗಳು ಇಂದು ಸಂಜೆ 6 ಗಂಟೆಯಿಂದ 6.05ರವರೆಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

ಖ್ಯಾತ ನಟರಾದ ರಜನೀಕಾಂತ್, ಕಮಲ್ ಹಾಸನ್, ವೈರಮುತ್ತು ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಎ.ಆರ್. ರಹಮಾನ್, ಚಲನಚಿತ್ರ ನಟರು ಮತ್ತು ನಟಿಯರು, ನಿರ್ದೇಶಕರು, ಸಂಗೀತಗಾರರು, ಫೆಫ್ಸಿ ಸದಸ್ಯರು, ನಿರ್ಮಾಪಕರು, ಚಿತ್ರಮಂದಿರಗಳ ಮಾಲೀಕರು, ವಿತರಕರು ಮತ್ತು ಮಾಧ್ಯಮಗಳು ಮತ್ತು ಜಗತ್ತಿನಾದ್ಯಂತ ಕೋಟ್ಯಂತರ ಎಸ್ ಪಿಬಿ ಅಭಿಮಾನಿಗಳು ಅವರಿದ್ದ ಸ್ಥಳಗಳಲ್ಲಿ ಎಸ್ ಪಿಬಿ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸಿದರು. 

ಭಾರತೀಯ ಸಿನೆಮಾ ರಂಗದಲ್ಲಿ ಅವರು ಮೋಡಿಮಾಡುವ ಕಂಠಸಿರಿ ಮತ್ತು ವಿವಿಧ ಭಾಷೆಗಳಲ್ಲಿನ ಪಾಂಡಿತ್ಯಕ್ಕೆ ನಮನಗಳು. ಅವರು ಕೋವಿಡ್-19 ಸೋಂಕಿಗೆ ತುತ್ತಾಗಿರುವುದಕ್ಕೆ ಕಣ್ಣೀರು ತರಿಸಿದೆ ಎಂದು ಹೇಳಿರುವ ಭಾರತಿ ರಾಜ, ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಮತ್ತೆ ಕೇಳುವಂತೆ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.

ಈ ಮಧ್ಯೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ತಮಿಳುನಾಡು ಆರೋಗ್ಯ ಸಚಿವ ಡಾ.ಸಿ.ವಿಜಯಬಾಸ್ಕರ್, ರಜನಿಕಾಂತ್ ಮತ್ತು ಚಲನಚಿತ್ರ ರಂಗದ ಗಣ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಗಾಯಕನ ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರ್ನಾಟಕ ಮೂಲದ ವ್ಯಕ್ತಿಯ ಶಿರಚ್ಛೇದ ಪ್ರಕರಣ: ಅಕ್ರಮ ವಲಸಿಗರ ಬಗ್ಗೆ ಮೃದು ಧೋರಣೆ ತೋರುವ ಕಾಲ ಮುಗಿದಿದೆ- ಟ್ರಂಪ್

ಗ್ರೇಟರ್ ಬೆಂಗಳೂರು ಚುನಾವಣೆಗೆ ಭದ್ರ ಬುನಾದಿ ಹಾಕುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್!

ರಾಜಕೀಯದಿಂದ ನಿವೃತ್ತಿಯಾಗಲ್ಲ, ಸಂಸತ್ತಿಗೂ ವೀಲ್‌ಚೇರ್‌ನಲ್ಲಿ ಹೋಗುತ್ತೇನೆ: ಎಚ್.ಡಿ ದೇವೇಗೌಡ

Asia Cup 2025: ಪಾಕ್ ವಿರುದ್ಧದ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರು, ಸೇನಾಪಡೆಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್! Video

ರಾಜಕೀಯ ಲಾಭಕ್ಕಾಗಿ 'ಮೃದು ಹಿಂದುತ್ವ'ಕ್ಕೆ ಕೈ ಹಾಕುತ್ತಿರುವ ಡಿ.ಕೆ ಶಿವಕುಮಾರ್ - ಡಾ. ಪರಮೇಶ್ವರ್?

SCROLL FOR NEXT