ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

'ಫ್ಯಾಂಟಮ್'ಚಿತ್ರದ ಸಂಪೂರ್ಣ ಸೆಟ್ ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ಶಿಫ್ಟ್, ಮರು ರಚನೆ

ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಸೆಟ್ ಹಾಕಿ ಅಲ್ಲಿ ಶೂಟಿಂಗ್ ಸಾಗುತ್ತಿರುವುದು ಸುದ್ದಿಯಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕೆ ಸೆಟ್ ಪರಿಕಲ್ಪನೆ ನೀಡಿದ್ದು ಕಲಾ ನಿರ್ದೇಶಕ ಶಿವಕುಮಾರ್.

ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಸೆಟ್ ಹಾಕಿ ಅಲ್ಲಿ ಶೂಟಿಂಗ್ ಸಾಗುತ್ತಿರುವುದು ಸುದ್ದಿಯಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರಕ್ಕೆ ಸೆಟ್ ಪರಿಕಲ್ಪನೆ ನೀಡಿದ್ದು ಕಲಾ ನಿರ್ದೇಶಕ ಶಿವಕುಮಾರ್.

ಈಗ ಅದೇ ಸ್ಟುಡಿಯೊ ಸೆಟ್ ನ್ನು ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಮರುಸ್ಥಾಪಿಸಲಿದ್ದಾರೆ ಶರವಣ ಪ್ರಸಾದ್. ಶರವಣ ಪ್ರಸಾದ್ ಅವರು ಇತ್ತೀಚೆಗೆ ಹೈದರಾಬಾದ್ ಗೆ ಹೋಗಿದ್ದಾಗ ಅಲ್ಲಿ ಫ್ಯಾಂಟಮ್ ಚಿತ್ರಕ್ಕಾಗಿ ಹಾಕಿದ್ದ ಸೆಟ್ ನ್ನು ನೋಡಿ ಖುಷಿಯಾಗಿ ಅದನ್ನು ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ತರಲು ಯೋಜಿಸಿದ್ದಾರೆ. ಇದರ ಹೊಣೆಯನ್ನು ಕೂಡ ಶಿವಕುಮಾರ್ ಹೊರಲಿದ್ದಾರೆ.

ಪ್ರಸ್ತುತ ಶೆಡ್ಯೂಲ್ ನ ಕೊನೆಯ ಹಂತದ ಚಿತ್ರೀಕರಣದಲ್ಲಿ ಫ್ಯಾಂಟಮ್ ಚಿತ್ರದ ಇಡೀ ಸೆಟ್ ಬೆಂಗಳೂರಿನ ಇನ್ನೊವೇಟಿವ್ ಫಿಲ್ಮ್ ಸಿಟಿಗೆ ವರ್ಗಾವಣೆಯಾಗಲಿದೆ. ಸುಮಾರು 40 ಲಕ್ಷ ರೂಪಾಯಿ ವೆಚ್ಚದ ಕೃತಕ ಮರ, ಕಾಸ್ಟ್ಯೂಮ್ ಗಳು, ಬೈಕ್ಸ್ ಕಾರುಗಳು ಇತ್ಯಾದಿಗಳನ್ನು ಬೆಂಗಳೂರಿಗೆ ತರಲಾಗುತ್ತದೆ.

ಹೈದರಾಬಾದ್ ನಲ್ಲಿ ಹಾಕಿರುವ ಸೆಟ್ ಗಳು ಎಷ್ಟು ಸುಂದರವಾಗಿದೆ ಎಂದರೆ ಅದು ನಿಷ್ಟ್ರಯೋಜಕವಾಗಬಾರದು. ಹೀಗಾಗಿ ಅಂತದ್ದೇ ಸೆಟ್ ನ್ನು ಇನ್ನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಹಾಕಲಾಗುತ್ತದೆ. ಅದು ಅಲ್ಲಿ ಶಾಶ್ವತವಾಗಿ ಇರುತ್ತದೆ. ಮರು ಸ್ಥಾಪನೆ ಕೆಲಸಕ್ಕೆ ಸುಮಾರು 2 ಕೋಟಿ ರೂಪಾಯಿ ವೆಚ್ಚವಾಗಲಿದೆ. ಚಿತ್ರತಂಡ ಈ ಶೆಡ್ಯೂಲ್ ಮುಗಿಸಿ ನಂತರ ಸೆಟ್ ನ್ನು ಬೆಂಗಳೂರಿಗೆ ತರುತ್ತದೆ ಎಂದು ಶರವಣ ಪ್ರಸಾದ್ ಹೇಳಿದ್ದಾರೆ.

ಶಾಲಿನಿ ಆರ್ಟ್ಸ್ ನಡಿ ಫ್ಯಾಂಟಮ್ ಚಿತ್ರವನ್ನು ಮಂಜುನಾಥ್ ಗೌಡ ನಿರ್ಮಿಸುತ್ತಿದ್ದಾರೆ. ಬಿ ಅಜನೀಶ್ ಲೋಕನಾಥ್ ಸಂಗೀತ, ವಿಲಿಯಮ್ ಡೇವಿಡ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸುದೀಪ್ ಅವರ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel