ಗಣೇಶ್ 
ಸಿನಿಮಾ ಸುದ್ದಿ

ರೊಮ್ಯಾಂಟಿಕ್ ಪಾತ್ರ ಬಿಟ್ಟು ಡಾಕ್ಟರ್ ರೋಲ್ ಕಡೆ ವಾಲಿದ ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ-2 ಸಿನಿಮಾ ಶೂಟಿಂಗ್ ಪುನಾರಂಭಕ್ಕಾಗಿ ಕಾಯುತ್ತಿದ್ದಾರೆ. ಇದರ ಜೊತೆಗೆ ಲಾಕ್ ಡೌನ್ ಸಮಯದಲ್ಲಿ ಸಖತ್ ಮತ್ತು ಟ್ರಿಬಲ್ ರೈಡಿಂಗ್ ಸಿನಿಮಾಗಳಿಗೂ ಸಹಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಹಾಗೂ ನಟ ಇದೇ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ. 

ಗೋಲ್ಡನ್ ಸ್ಟಾರ್ ಗಣೇಶ್ ಗಾಳಿಪಟ-2 ಸಿನಿಮಾ ಶೂಟಿಂಗ್ ಪುನಾರಂಭಕ್ಕಾಗಿ ಕಾಯುತ್ತಿದ್ದಾರೆ. ಇದರ ಜೊತೆಗೆ ಲಾಕ್ ಡೌನ್ ಸಮಯದಲ್ಲಿ ಸಖತ್ ಮತ್ತು ಟ್ರಿಬಲ್ ರೈಡಿಂಗ್ ಸಿನಿಮಾಗಳಿಗೂ ಸಹಿ ಹಾಕಿದ್ದಾರೆ. ಈ ಸಿನಿಮಾದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಹಾಗೂ ನಟ ಇದೇ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ. 

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರೊಮ್ಯಾಂಟಿಕ್ ಹೀರೋ ಎಂದೇ ಪ್ರಸಿದ್ಧಿಯಾಗಿರುವ ಗಣೇಶ್ ಈಗ ವಿಭಿನ್ನವಾದ ಪಾತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ.  ಹೀಗಾಗಿ ಗಣೇಶ್ ಮುಂದಿನ ಸಿನಿಮಾದಲ್ಲಿ ನ್ಯೂರೋಸರ್ಜನ್ ಪಾತ್ರದಲ್ಲಿ ನಟಿಸಲಿದ್ದಾರೆ.

ಡಾ.ಶೈಲೇಶ್ ಕುಮಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಡಾ. ಪಿ ಶಶಿಕಲಾ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕಿ ಶಶಿಕಲಾ ನಿರ್ಮಾಪಕ ಶೈಲೇಶ್ ಕುಮಾರ್ ಅವರ ಕಾಲೇಜು ಸಹಪಾಠಿಯಾಗಿದ್ದರು.

ನಿರ್ಮಾಪಕ ಶೈಲೇಶ್ ಕುಮಾರ್ ಅವರು ಡಾ.ರಾಜ್ ಕುಮಾರ್ ಅವರ ಅತಿ ದೊಡ್ಡ ಅಭಿಮಾನಿಯಾಗಿದ್ದು ಸಿನಿಮಾ ರಂಗಕ್ಕೆ ಬರಲು ಕಾರಣವಾಗಿದೆ.

ಈ ಮೊದಲು 6ನೇ ಮೈಲಿ, ಮತ್ತು ತಳವಾರಪೇಟೆ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಶೈಲೇಶ್ ಕುಮಾರ್ ಮೂರನೇ ಸಿನಿಮಾ ಇದಾಗಿದ್ದು ಇನ್ನೂ ಟೈಟಲ್ ಅಂತಿಮವಾಗಿಲ್ಲ, ಗಣೇಶ್ ಮೂರನೇ ಬಾರಿಗೆ ವೈಟ್ ಕೋಟ್ ಧರಿಸಿ ವೈದ್ಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ಯಾಶನ್ ಅಂಟಿಲ್ ಲಾಸ್ಟ್ ಬ್ರೆಥ್ ಎಂಬ ವೈದ್ಯ ಭಾವುಕ ಜೀವನ ಸಂಬಂಧ ಕಥೆಯನ್ನು ಶಶಿಕಲಾ ಸೃಷ್ಟಿಸಿದ್ದಾರೆ. 

ನಾನೊಬ್ಬ ವೈದ್ಯೆ  ಮೆಡಿಕಲ್ ಫೀಲ್ಡ್ ನಲ್ಲಿ ನನಗೆ ಅಪಾರ ಅನುಭವವಿದೆ,  ನನ್ನ ಅನುಭವನನ್ನು ತೆರೆಯ ಮೇಲೆ ತರಲು ನಿರ್ದರಿಸಿದ್ದೇನೆ,  ಗಣೇಶ್ ಅವರನ್ನು ಮನಸ್ಸಿನಲ್ಲಿರಿಸಿಕೊಂಡು ಕಥೆ ಸಿದ್ದಪಡಿಸಿದ್ದೇನೆ, ಪಾತ್ರಕ್ಕೆ ನಟ ಗಣೇಶ್ ನ್ಯಾಯ ಒದಗಿಸಲಿದ್ದಾರೆ ಎಂದು ಭರವಸೆಯಿದೆ ಎಂದು ತಿಳಿಸಿದ್ದಾರೆ.

ಗಣೇಶ್ ತಮ್ಮ ಕಣ್ಣುಗಳಲ್ಲಿಯೇ ಭಾವನೆಗಳನ್ನು ವ್ಯಕ್ತ ಪಡಿಸುವ ಅದ್ಭುತ ಕಲೆ ಹೊಂದಿದ್ದಾರೆ.  ನ್ಯೂರೋ ಸರ್ಜನ್ ಪಾತ್ರದಲ್ಲಿ ನಟಿಸಲು ಗಣೇಶ್ ಒಪ್ಪಿರುವುದಾಗಿ ತಿಳಿಸಿದ್ದಾರೆ. ಕಥೆ ಹೇಳಿದ 20 ನಿಮಿಷದಲ್ಲೇ ಗಣೇಶ್ ನಟಿಸುವುದಾಗಿ ಖಚಿತ ಪಡಿಸಿದರು ಎಂದು ಶೈಲೇಶ್ ಕುಮಾರ್ ತಿಳಿಸಿದ್ದಾರೆ, ಸಿನಿಮಾ ಕಮರ್ಷಿಯಲ್ ಎಂಟರ್ ಟೈನರ್ ಆಗಿದ್ದು, ಐದು ಸಿನಿಮಾಗಳಿವೆ, ಮೂರು ಫೈಟ್ ಮತ್ತು ಸುಂದರವಾದ ಸಂಗೀತವಿದೆ ಎಂದು ತಿಳಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ