ಸಿನಿಮಾ ಸುದ್ದಿ

'ಸರ್ಕಾರಿ ಹಿ.ಪ್ರಾ. ಶಾಲೆ..' ನನ್ನನ್ನು ಕೆರಾಡಿಯಿಂದ ದೆಹಲಿಗೆ ಕರೆದೊಯ್ದ ಚಿತ್ರ:  ರಿಷಬ್ ಶೆಟ್ಟಿ

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶದಲ್ಲಿ ಮೂಡಿಬಂದ ಕಡೆಯ ಚಿತ್ರ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು"ಗೆ ಎರಡು ವರ್ಷಗಳಾಗಿದೆ. "ಸರ್ಕಾರಿ ಹಿ.ಪ್ರ. ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ" ಚಿತ್ರ ಎರಡು ವರ್ಷದ ಹಿಂದೆ . ಆಗಸ್ಟ್ 24 ರಂದುತೆರೆಗೆ ಬಂದಿತ್ತು. ನಿರ್ದೇಶಕ ಹಾಗೂ  ಇಡೀ ತಂಡವು ಇಂದಿಗೂ ಜನರು ಈ ಚಿತ್ರದ ಮೇಲೆ ತೋರಿದ  ಪ್ರೀತಿಗಾಗಿ ಕೃತಜ್ಞರಾಗಿರಬೇಕು. ಎ

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶದಲ್ಲಿ ಮೂಡಿಬಂದ ಕಡೆಯ ಚಿತ್ರ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು"ಗೆ ಎರಡು ವರ್ಷಗಳಾಗಿದೆ. "ಸರ್ಕಾರಿ ಹಿ.ಪ್ರ. ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ" ಚಿತ್ರ ಎರಡು ವರ್ಷದ ಹಿಂದೆ . ಆಗಸ್ಟ್ 24 ರಂದುತೆರೆಗೆ ಬಂದಿತ್ತು. ನಿರ್ದೇಶಕ ಹಾಗೂ  ಇಡೀ ತಂಡವು ಇಂದಿಗೂ ಜನರು ಈ ಚಿತ್ರದ ಮೇಲೆ ತೋರಿದ  ಪ್ರೀತಿಗಾಗಿ ಕೃತಜ್ಞರಾಗಿರಬೇಕು. ಎಂದಿದ್ದಾರೆ.  ಕೇರಳದ ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಮಲಯಾಳಂ ಹೇರಿಕೆಯ ಬಗ್ಗೆ ಹೇಳಿದ್ದ ಈ ಚಿತ್ರ ಇತ್ತೀಚಿನ ದಿನಗಳಲ್ಲಿ ಕೆಲ ಪ್ರತಿಭಟನೆಗಳಿಗೆ ಸಹ ಪ್ರೇರಣೆ ನೀಡಿದೆ. 

ಬೋಧನಾ ಮಾಧ್ಯಮದಲ್ಲಿನ ಬದಲಾವಣೆಗಳಿಂದಾಗಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಕಷ್ಟಗಳು ಚಿತ್ರದ ತಿರುಳಾಗಿದ್ದು ಇದನ್ನು ಪ್ರೇಕ್ಷಕರು ದೊಡ್ಡ ಪ್ರಮಾಣದ ಸಂಭ್ರಮದೊಡನೆ ಸ್ವೀಕರಿಸಿದ್ದಾರೆ.

ಈ ಚಿತ್ರದಲ್ಲಿ ನಟರಾದ ಅನಂತ್ ನಾಗ್, ರಂಜನ್, ಸಂಪತ್, ಪ್ರಮೋದ್ ಶೆಟ್ಟಿ, ಸಪ್ತ ಪಾವೂರ್, ಮಹೇಂದ್ರ, ಸೋಹನ್ ಶೆಟ್ಟಿ, ಪ್ರಕಾಶ್ ತುಮಿನಾಡ್, ಮನೀಶ್ ಹೀರೂರ್ ಮತ್ತಿತರರು ನಟಿಸಿದ್ದಾರೆ.  100 ದಿನಗಳ ಕಾಲ ಪ್ರದರ್ಶನ ಕಂಡ ಈ ಚಿತ್ರ  2019 ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದುಕೊಂಡಿತು.

"ಸರ್ಕಾರಿ... ಚಿತ್ರ ಬಹಳ ವಿಶೇಷವಾಗಿದೆ. ಅದು ಎರಡು ವರ್ಷಗಳನ್ನು ಪೂರೈಸಿದೆ ಎಂದು ನಾನು ಎಣಿಸಲೂ ಸಾಧ್ಯವಿಲ್ಲ. ರಾಷ್ಟ್ರೀಯ ಪ್ರಶಸ್ತಿಗಾಗಿ ನಮ್ಮನ್ನು ಕೆರಾಡಿಯಿಂದ ದೆಹಲಿಗೆ ಕರೆದೊಯ್ದ ಚಿತ್ರ ಇದಾಗಿದೆ, ಮತ್ತು ಇಡೀ ತಂಡವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಇದನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ”ಎಂದು ರಿಷಬ್ ಹೇಳುತ್ತಾರೆ.

“ನಾನು ವಿಶೇಷವಾಗಿ ಮಮ್ಮುಟ್ಟಿ, ಪ್ರವೀಣ ಮತ್ತು ಉಪಾಧ್ಯಾಯ ಪಾತ್ರಗಳನ್ನು ಅನ್ವೇಷಿಸಲು ಉದ್ದೇಶಿಸಿದ್ದು  ನನ್ನ ಮುಂದಿನ ಯೋಜನೆಗಳಲ್ಲಿ ಒಂದನ್ನು ನಾನು ಅದರ ಸುತ್ತಲೂ ತಯಾರಿಸಲು ಚಿಂತನೆ ನಡೆಸಿದ್ದೇನೆ.” ರಿಷಬ್ ಹೇಳಿದ್ದಾರೆ. 

 ರಿಷಬ್ ಶೆಟ್ಟಿಯವರ ಮುಂದಿನ ಚಿತ್ರ ರುದ್ರಪ್ರಯಾಗಆಗಿದ್ದು, ಇದು 2021 ರ ಆರಂಭದಲ್ಲಿ ಫ್ಲೋರ್ ಮೇಲೆ ಬರಲಿದೆ. ಏತನ್ಮಧ್ಯೆ, ಬೆಲ್ ಬಾಟಮ್ ಚಿತ್ರದ ಮೂಲಕ ನಟನಾಗಿ  ಯಶಸ್ಸನ್ನು ಕಂಡ ನಿರ್ದೇಶಕರು ತಮ್ಮ ಮುಂದಿನ ಚಿತ್ರ ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ಶೂಟಿಂಗ್ ಪ್ರಾರಂಭಿಸಲು ಸಜ್ಜಾಗಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಿರ್ಮಿಸಿರುವ ಈ ಚಿತ್ರವು ಗಿರಿ ಕೃಷ್ಣ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT