ಮಹಿಳೆ ಗರ್ಭಧರಿಸಿದಾಗ ನಿಮಗೊಂದು ಸಿಹಿ ಸುದ್ದಿ ಇದೆ ಎಂದು ಹೇಳುವುದು ಸಹಜ, ಆದರೆ ಅದೇ ಪುರುಷನೊಬ್ಬ ಗರ್ಭ ಧರಿಸಿದರೆ? ಆಗಲೂ ನಿಮಗೊಂದು ಸಿಹಿ ಸುದ್ದಿ ಎಂದೇ ಹೇಳಬಹುದೇನೋ ಎನ್ನುತ್ತಿದೆ ವೆಬ್ ಸೀರೀಸ್ ಗಾಗಿ ತಯಾರಿ ನಡೆಸುತ್ತಿರುವ ಚಿತ್ರ ತಂಡ!
ರೊಮ್ಯಾಂಟಿಕ್-ಕಾಮಿಡಿ ಕನ್ನಡ ವೆಬ್ ಸೀರೀಸ್ ನಲ್ಲಿ ಇಂಥಹದ್ದೊಂದು ವಿನೂತನ ಪ್ರಯತ್ನ ಮಾಡುತ್ತಿದೆ ಸುಧೀಂದ್ರ ನಾಡಿಗರ್ ಆರ್ ನೇತೃತ್ವದ ತಂಡ
ಗೋಲ್ಡ್ ಚೈನ್ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ಈ ವೆಬ್ ಸೀರೀಸ್ ಗಾಗಿ ತಯಾರಿಸಲಾಗುತ್ತಿರುವ ಕಥಾವಸ್ತು ಚಿತ್ರೀಕರಣಗೊಳ್ಳುತ್ತಿದ್ದು, ಬೆಂಗಳೂರಿನ ಆಸುಪಾಸಿನಲ್ಲಿ ಶೂಟಿಂಗ್ ನಡೆಯುತ್ತಿದ್ದು 8 ಎಪಿಸೋಡ್ ಸೀರೀಸ್ ನ್ನು ಈಗಾಗಲೇ ಚಿತ್ರೀಕರಿಸಲಾಗಿದೆ.
ಕೆಲವೊಮ್ಮೆ ನಮ್ಮ ಸಂತೋಷವೇ ನಮ್ಮ ನಗುವಿನ ಮೂಲವಾಗಿರುತ್ತವೆ, ಕೆಲವೊಮ್ಮೆ ಇದು ಮತ್ತೊಂದು ರೀತಿಯಲ್ಲಿರುತ್ತದೆ. ಎನ್ಎಸ್ಎಸ್ ನಿಮಗೆ ಸಂತೋಷ ಭರಿತ ಮನರಂಜನೆ ನೀಡಲಿದೆ ಎನ್ನುತ್ತಾರೆ ನಿರ್ದೇಶಕ ಸುಧೀಂದ್ರ ನಾಡಿಗರ್.
ಎನ್ಎಸ್ಎಸ್ ಮೂಲಕ ಪರಿಚಯಿಸಲಾಗುತ್ತಿರುವ ರಘು ಭಟ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡಲ್- ನಟಿ ಕಾವ್ಯ ಶೆಟ್ಟಿ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಉರ್ವಿ ಸಿನಿಮಾದ ಆನಂದ್ ಸುಂದರೇಶ ಕ್ಯಾಮಾರವನ್ನು ನಿಭಾಯಿಸಿದ್ದಾರೆ. ವೆಬ್ ಸೀರಿಸ್ ನ ತಂಡದಲ್ಲಿ ಜಗದೀಶ್ ಸಿಂಗ್, ಯೋಗೇಶ್ ನಂಜಪ್ಪ, ಪ್ರಿಯಾಂಕ ಎಂಆರ್, ಪ್ರಕಾಶ್ ಎಸ್ಆರ್, ಅನಿಲ್ ಕುಮಾರ್, ಅಕ್ಶೋಭ್ಯ, ಪ್ರಶಾಂತ್ ಆರ್, ಮಂಜುನಾಥ್ ಸಿಂಗ್ ಇದ್ದಾರೆ. ವೆಬ್ ಸೀರೀಸ್ ಗಾಗಿ ಈ ಕಥೆಯನ್ನು ಚಿತ್ರೀಕರಿಸಿಕೊಳ್ಳುತ್ತಿದ್ದರು. ಒಟಿಟಿ ವೇದಿಕೆಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ, ಒಪ್ಪಂದ ಇನ್ನಷ್ಟೇ ನಡೆಯಬೇಕಿದೆ.