ರಿಷಬ್ ಶೆಟ್ಟಿ 
ಸಿನಿಮಾ ಸುದ್ದಿ

ಅನಾರೋಗ್ಯ ಸಮಸ್ಯೆ: 'ಹರಿಕಥೆ ಅಲ್ಲ ಗಿರಿಕಥೆ'ಯಿಂದ ದೂರ ಸರಿದ ನಿರ್ದೇಶಕ ಗಿರಿಕೃಷ್ಣ

ರಿಷಬ್ ಶೆಟ್ಟಿ ಅಭಿನಯದ "ಹರಿಕಥೆ ಅಲ್ಲ ಗಿರಿಕಥೆ"ಗೆ ಈಗ ಇಬ್ಬರು ನಿರ್ದೇಶಕರು ಸೇರಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಚಿತ್ರದ ನಿರ್ದೇಶನಕ್ಕೆ ತಯಾರಾಗಿದ್ದಾರೆ.

ರಿಷಬ್ ಶೆಟ್ಟಿ ಅಭಿನಯದ "ಹರಿಕಥೆ ಅಲ್ಲ ಗಿರಿಕಥೆ"ಗೆ ಈಗ ಇಬ್ಬರು ನಿರ್ದೇಶಕರು ಸೇರಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಚಿತ್ರದ ನಿರ್ದೇಶನಕ್ಕೆ ತಯಾರಾಗಿದ್ದಾರೆ. ಆದರೆ ಚಿತ್ರಕಥೆಯ ಮನ್ನಣೆಯನ್ನು ಗಿರಿ ಕೃಷ್ಣ ಅವರಿಗೆ ಸಲ್ಲಿಸಲಾಗುತ್ತದೆ  ಸಂದೇಶ್ ಪ್ರೊಡಕ್ಷನ್ಸ್, ನ್ಯಾನರ್ ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರ ಇಬ್ಬರು ಡಿಒಪಿಗಳನ್ನು ಸಹ ಹೊಂದಿದೆ. ರಿಷಬ್ ಶೆಟ್ಟಿ ನಟಿಸಿರುವ ಚಿತ್ರದ ಚಿತ್ರೀಕರಣವು ಪ್ರಸ್ತುತ ಮೈಸೂರಿನಲ್ಲಿ ಚುರುಕಾಗಿ ನಡೆಯುತ್ತಿದ್ದು, ತಯಾರಕರು ಟಾಕಿ ಭಾಗಗಳನ್ನು ಡಿಸೆಂಬರ್ ಮೊದಲ ವಾರದಲ್ಲಿ ಪೂರ್ಣಗೊಳಿಸುವ ಸಾಧ್ಯತೆ ಇದೆ.

ಆದರೆ ಈ ನಡುವೆ ಕಾಮಿಡಿ ಎಂಟರ್ಟೈನರ್ ನ ಮೂಲ ನಿರ್ದೇಶಕ ಗಿರಿ ಕೃಷ್ಣ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಯೋಜನೆಯಿಂದ ದೂರ ಸರಿಯಬೇಕಾಗಿದೆ,ಈಗ ಅವರ ಸ್ಥಾನದಲ್ಲಿ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಆಗಮನವಾಗಿದೆ. ಗಿರಿ ಕೃಷ್ಣ ಅವರೇ ಈ ಸುದ್ದಿಯನ್ನು ಡೃಢಪಡಿಸಿದ್ದು ಮೊದಲ ಶೆಡ್ಯೂಲ್ ನಲ್ಲಿ ಅನಾರೋಗ್ಯಕ್ಕೆ ಒಳಗಾಗಿ ತಾವು ನಿರ್ದೇಶನ ಮಾಡಲಾಗಲ್ಲಿಲ್ಲ ಎಂದರು.

"ಅವರು ಕಾಯಲು ಸಿದ್ಧರಾಗಿದ್ದರೂ, ತಂಡವು ನಿಗದಿತ ವೇಳಾಪಟ್ಟಿ ಮತ್ತು ಕಲಾವಿದರ ದಿನಾಂಕಗಳನ್ನು ಹೊಂದಿದ್ದರಿಂದ, ನನ್ನ ಅನುಪಸ್ಥಿತಿಯಿಂದಾಗಿ ಯೋಜನೆಗೆ ಅಡ್ಡಿಯಾಗಬಾರದೆಂದು ನಾನು ನಯಸುತ್ತೇನೆ. . ನಾನು ರಿಷಬ್ ಮತ್ತು ಪ್ರೊಡಕ್ಷನ್ ಹೌಸ್ ಜೊತೆ ಚರ್ಚೆ ನಡೆಸಿದ್ದೇನೆ, ನನ್ನ ಸ್ಥಾನದಲ್ಲಿ ಪ್ರಸ್ತುತ ಇಬ್ಬರು ನಿರ್ದೇಶಕರು ನಿರ್ವಹಿಸುತ್ತಿದ್ದಾರೆ, ”ಎಂದು ಅವರು ವಿವರಿಸಿದರು.

ರಿಷಬ್ ಶೆಟ್ಟಿ ನಾಯಕನಾಗಿರುವ "ಹರಿಕಥೆ ಅಲ್ಲ ಗಿರಿಕಥೆ"ಗೆ ತಮ್ಮ ಬ್ಯಾನರ್, ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ ಯೋಜನೆ ತಯಾರಿಕೆಯಲ್ಲಿಯೂ ತೊಡಗಿದ್ದಾರೆ. ನಟ-ನಿರ್ದೇಶಕರ ಪ್ರಕಾರ, ಗಿರಿ ಅವರ ಹಠಾತ್ ಆರೋಗ್ಯ ಸಮಸ್ಯೆಗಳಿಂದಾಗಿ ಯೋಜನೆಯಲ್ಲಿ ಕೆಲ ಬದಲಾವಣೆ ಅಗತ್ಯವಾಗಿದೆ."ಇದು ನಾವು ತೆಗೆದುಕೊಳ್ಳಬೇಕಾದ ನಿರ್ಧಾರವಾಗಿತ್ತು ಏಕೆಂದರೆ ನಾವು ಶೂಟಿಂಗ್ ನಿಲ್ಲಿಸಲು ಇಚ್ಚಿಸಿಲ್ಲ. , ಏಕೆಂದರೆ ಕಲಾವಿದರು ನಮಗೆ ಆ ದಿನಾಂಕಗಳಲ್ಲಿ ಸಿಕ್ಕಲಿದ್ದಾರೆ. ಚಿತ್ರಕ್ಕೆ ಗಿರಿ ಅವರ ಕಥೆಯನ್ನೇ ಬಳಸಿಕೊಳ್ಳುತ್ತೇವೆ. ನಮ್ಮಲ್ಲಿ ಇಬ್ಬರು ನಿರ್ದೇಶಕರು ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. "ರಿಷಬ್ ಹೇಳಿದರು,“ ಗಿರಿ ಒಬ್ಬ ಪ್ರತಿಭಾವಂತ ನಿರ್ದೇಶಕ ಮತ್ತು ನಾವು ಇನ್ನೊಂದು ಯೋಜನೆಗೆ ಒಟ್ಟಾಗುತ್ತೇವೆ" ಅವರು ಹೇಲಿದ್ದಾರೆ.

ಕರಣ್ ಅನಂತ್ ಅವರು ರಿಷಬ್ ಶೆಟ್ಟಿ ನೇತೃತ್ವದಲ್ಲಿ ಕಥಾ ಸಂಗಮ ಎಂಬ ಚಿತ್ರ್ದಲ್ಲಿ ತಂಡದಲ್ಲಿದ್ದರು. ಇದರಲ್ಲಿ ಅವರು ಕಿರುಚಿತ್ರವೊಂದರ ನಿರ್ದೇಶಕರಾಗಿದ್ದರು. ಇನ್ನೊಬ್ಬ ನಿರ್ದೇಶಕ ಅನಿರುದ್ಧ್ ಮಹೇಶ್ ಸಹಾಯಕ ಬಾಹಗಾರರಾಗಿದ್ದು ರಿಷಬ್ ನಿರ್ದೇಶನದ "ಸ.ಹಿ.ಪ್ರಾ. ಶಾಲೆ" ಚಿತ್ರದಲಿ ಸಹಾಯಕನಾಗಿ ಕೆಲಸ ಮಾಡಿದ್ದಾರೆ. 

ಚಿತ್ರಕ್ಕೆ . ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ, ಮತ್ತು ಇಬ್ಬರು ಛಾಯಾಗ್ರಾಹಕರಾದ - ಚಂದ್ರಶೇಖರನ್ ಮತ್ತು ರಂಗನಾಥ್ ಸಿಎಂ - ಕ್ಯಾಮೆರಾ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಸ್ವತಂತ್ರ ಚಲನಚಿತ್ರ ನಿರ್ಮಾಪಕನ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇಬ್ಬರು ನಾಯಕಿಯರು ಚಿತ್ರದಲ್ಲಿದ್ದು ಆ ಎರಡು ಪಾತ್ರಗಳನ್ನು ತಪಶ್ವಿನಿ ಹಾಗೂ ರಚನಾ ಇಂದರ್ ನಿರ್ವಹಿಸಿದ್ದಾರೆ. 

ಪ್ರಸ್ತುತ ಟಾಕಿ ಭಾಗಗಳನ್ನು ಪೂರ್ಣಗೊಳಿಸುವ ಅಂತಿಮ ಹಂತದಲ್ಲಿರುವ ಈ ತಂಡವು ಮುಂದಿನ ಶೆಡ್ಯೂಲ್ ಅನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲು ಯೋಜಿಸಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT