ಶಶಾಂಕ್ ಚಿತ್ರಕ್ಕೆ ಪ್ರಖ್ಯಾತ್-ಸಂಜನ ಆನಂದ್ ನಾಯಕ-ನಾಯಕಿ 
ಸಿನಿಮಾ ಸುದ್ದಿ

ಎಲ್ಲಿವರೆಗೂ ಬಂದಿದೆ ಗೊತ್ತೇ 5 ನಿರ್ದೇಶಕರ ಕನ್ನಡ ಚಿತ್ರ?: ಶಶಾಂಕ್ ಚಿತ್ರಕ್ಕೆ ಪ್ರಖ್ಯಾತ್ ನಾಯಕ, ಸಂಜನ ಆನಂದ್ ನಾಯಕಿ

ಚಿತ್ರವೊಂದಕ್ಕೆ ಕನ್ನಡದ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಇದರ ಭಾಗವಾಗಿರುವ ನಿರ್ದೇಶಕ ಶಶಾಂಕ್ ಈಗಾಗಲೇ ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಖ್ಯಾತ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರವೊಂದಕ್ಕೆ ಕನ್ನಡದ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿತ್ತು. ಇದರ ಭಾಗವಾಗಿರುವ ನಿರ್ದೇಶಕ ಶಶಾಂಕ್ ಈಗಾಗಲೇ ತಮ್ಮ ತಂಡವನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಖ್ಯಾತ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

ನಡುವೆ ಅಂತರವಿರಲಿ ಮೂಲಕ ಸಿನಿ ಪಯಣ ಆರಂಭಿಸಿದ್ದ ಪ್ರಖ್ಯಾತ್ ಪರಮೇಶ್ ಗೆ ಶಶಾಂಕ್ ನಿರ್ದೇಶನದ ಈ ಸೆಗ್ಮೆಂಟ್ ಎರಡನೇ ಸಿನಿಮಾ ಆದರೆ, ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ಆನಂದ್ ತಮ್ಮ ಎರಡನೇ ಸಿನಿಮಾ ಸಲಗ ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ.

ಶಶಾಂಕ್ ನಿರ್ದೇಶನದ ಸಿನಿಮಾದ ಸೆಗ್ಮೆಂಟ್ ಚಿತ್ರೀಕರಣ ಈ ವಾರದಿಂದ ಸಕಲೇಶಪುರದಲ್ಲಿ ಆರಂಭಗೊಳ್ಳಲಿದ್ದು 8 ದಿನಗಳವರೆಗೆ ಚಿತ್ರೀಕರಣ ಮಾಡುವ ಯೋಜನೆ ಹೊಂದಿದ್ದಾರೆ ನಿರ್ದೇಶಕರು.

ಇನ್ನು ಉಳಿದ ನಾಲ್ವರು ನಿರ್ದೇಶಕರು-ಯೋಗರಾಜ್ ಭಟ್, ಕೆಎಂ ಚೈತನ್ಯ, ಜಯತೀರ್ಥ, ಪವನ್ ಕುಮಾರ್ ಅವರ ಭಾಗದ ಸೆಗ್ಮೆಂಟ್ ಗಳ ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಚಿತ್ರವೊಂದಕ್ಕೆ 5 ನಿರ್ದೇಶಕರು ಒಟ್ಟಿಗೆ ಕೆಲಸ ಮಾಡುವ ಯೋಜನೆಗೆ ಜೀವ ಬಂದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಚಿತ್ರೀಕರಣ ಮುಕ್ತಾಯಗೊಳಿಸಲು ಯೋಜನೆ ಹೊಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT