ಸಿನಿಮಾ ಸುದ್ದಿ

ಭೂ ಕಾಯ್ದೆ ಅಂಗೀಕಾರ: ದುಃಖದ ದಿನ ಎಂದ ನಟ ಚೇತನ್‌, ದೇವೇಗೌಡ, ಕುಮಾರಸ್ವಾಮಿ ವಿರುದ್ಧವೂ ಆಕ್ರೋಶ

Lingaraj Badiger

ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿದ ಭೂ ಸುಧಾರಣಾ ಕಾಯ್ದೆ(ಎರಡನೇ ತಿದ್ದುಪಡಿ)–2020 ಮಸೂದೆಯು ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಬೆಂಬಲದೊಂದಿಗೆ ಅಂಗೀಕಾರಗೊಂಡಿರುವುದಕ್ಕೆ ಸ್ಯಾಂಡಲ್ ವುಡ್ ನಟ, ಸಾಮಾಜಿಕ ಹೋರಾಟಗಾರ ಚೇತನ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ 'ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ 2020' ರೈತ ವಿರೋಧಿಯಾಗಿದೆ. ಇದರಡಿ 450 ಎಕರೆ ಕೃಷಿ ಭೂಮಿಯನ್ನು ಖರೀದಿಸಲು ಯಾರಿಗಾದರೂ ಅವಕಾಶ ದೊರೆಯುತ್ತದೆ. ಜೆಡಿಎಸ್ ಬೆಂಬಲದೊಂದಿಗೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕರಿಸಿದ್ದು, ಸರಿಯಲ್ಲ. ನಮಗೆ ಈ ದಿನ ಅತ್ಯಂತ ದುಃಖದ ದಿನ" ಎಂದು ಅವರು ಸಾಮಾಜಿಕ ಜಾಲತಾಣದ ಹೇಳಿಕೊಂಡಿದ್ದಾರೆ.

ರೈತರ ಹಕ್ಕುಗಳಿಗಾಗಿ ಹೋರಾಡುವುದಾಗಿ ಹೇಳಿಕೊಂಡು ತಮ್ಮ ರಾಜಕೀಯ ವೃತ್ತಿಯನ್ನು ಕಟ್ಟಿಕೊಂಡ ಮುಖ್ಯಮಂತ್ರಿ ಬಿ.ಎಸ್ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೋಸದವರು ಎಂಬುದು ಇದರಿಂದ ಸಾಬೀತಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

SCROLL FOR NEXT