ಎಸ್‌ಬಿ ಬಾಲಸುಬ್ರಮಣ್ಯಂ ಚಾಕೊಲೇಟ್ ಪ್ರತಿಮೆ 
ಸಿನಿಮಾ ಸುದ್ದಿ

339 ಕೆಜಿ ಚಾಕೋಲೇಟ್ ನಿಂದ ಗಾಯಕ ಎಸ್‌ಬಿಪಿಯ ಪ್ರತಿಮೆ ನಿರ್ಮಾಣ!

ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಸ್ಮರಣೆಗಾಗಿ ಚಾಕೊಲೇಟ್ ಅಂಗಡಿಯೊಂದರಲ್ಲಿ ಗಾಯಕನ ಚಾಕೊಲೇಟ್ ಪ್ರತಿಮೆಯನ್ನು ತಯಾರಿಸಿದೆ.

ಪುದುಚೇರಿ: ದಿವಂಗತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರ ಸ್ಮರಣೆಗಾಗಿ ಚಾಕೊಲೇಟ್ ಅಂಗಡಿಯೊಂದರಲ್ಲಿ ಗಾಯಕನ ಚಾಕೊಲೇಟ್ ಪ್ರತಿಮೆಯನ್ನು ತಯಾರಿಸಿದೆ.

ಪುದುಚೇರಿಯ ಮಿಷನ್ ಸ್ಟ್ರೀಟ್‌ನಲ್ಲಿರುವ ಅಂಗಡಿಯಲ್ಲಿ 5.8 ಅಡಿ ಎತ್ತರ 339 ಕೆ.ಜಿ. ತೂಕದ ಬಾಲಸುಬ್ರಮಣ್ಯಂ ಚಾಕೊಲೇಟ್ ಪ್ರತಿಮೆ ತಯಾರಿಸಿ ಪ್ರದರ್ಶಿಸಲಾಗಿದೆ. ಪ್ರತಿಮೆಯನ್ನು ಸಂಪೂರ್ಣವಾಗಿ ಚಾಕೊಲೇಟ್ ನಿಂದಲೇ ಮಾಡಲಾಗಿದೆ.ಈ ಕ್ರಿಸ್‌ಮಸ್ ಮತ್ತು ಹೊಸ ವರ್ಷ ಸೀಸನ್ ನಲ್ಲಿ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಅಂಗಡಿ ಮಾಲೀಕರು ಈ ಪ್ರತಿಮೆಯ ಪ್ರದರ್ಶನ ಏರ್ಪಡಿಸಿದ್ದಾರೆ.

ಈ ಚಾಕೊಲೇಟ್ ಪ್ರತಿಮೆಯನ್ನು ತಯಾರಿಸಿದ  ರಾಜೇಂದ್ರನ್, ಇದನ್ನು ಜನವರಿ 3 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ ಎಂದರು.

ಅಂಗಡಿಯು ಈ ಹಿಂದೆ ಎ ಪಿ ಜೆ ಅಬ್ದುಲ್ ಕಲಾಂ, ಚಲನಚಿತ್ರ ನಟ ರಜನಿಕಾಂತ್ ಅಲ್ಲದೆ ಕೆಲ ಕ್ರಿಕೆಟಿಗರ ಚಾಕೊಲೇಟ್ ಪ್ರತಿಮೆಗಳನ್ನು ತಯಾರಿಸಿ ಪ್ರದರ್ಶಿಸಿತ್ತು ಎನ್ನುವುದು ಗಮನಾರ್ಹ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ: ಶಾ ಅವರೇ ಆದೇಶ ನೀಡಿದ್ದಾರೆ, ಇಲ್ಲವೇ ಅವರು ಅಸಮರ್ಥ; ವಜಾಗೊಳಿಗೊಳಿಸಿ- ಪ್ರಧಾನಿಗೆ ರಾಹುಲ್ ಒತ್ತಾಯ

CWRC ಆದೇಶದ ವಿರುದ್ಧ ಮೇಲ್ಮನವಿ: ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿ ಅರಿಯಲು ಸಿಎಂ ವಿಜಯ್ ಗೆ ಹೆಲಿಕಾಪ್ಟರ್ ವ್ಯವಸ್ಥೆ- ಸಿಎಂ ಡಿಕೆ ಶಿವಕುಮಾರ್!

ಕಾವೇರಿ ನೀರು ಬಿಡುಗಡೆ ಸಮಿತಿಯ ಆದೇಶವು 'ಅವೈಜ್ಞಾನಿಕ', ಕರ್ನಾಟಕಕ್ಕೆ 'ಮಾರಕ': ಕೇಂದ್ರ ಸಚಿವ ಕುಮಾರಸ್ವಾಮಿ

ಚೆನ್ನೈ ಮೆಟ್ರೋ ರೈಲಿನಲ್ಲಿ ಸಿಎಂ ವಿಜಯ್ ಪ್ರಯಾಣ: ಜನರೊಂದಿಗೆ ಸಂವಾದ, ಸರಳತೆಗೆ ಫ್ಯಾನ್ಸ್ ಫಿದಾ! Video

Beat the f**king sh*t out: ಅಮೆರಿಕದ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ, ಟ್ರಂಪ್ ಆಕ್ರೋಶ!