ಅನಿಲ್ ನೆಡುಮಂಗಾಡ್ 
ಸಿನಿಮಾ ಸುದ್ದಿ

ಸ್ನಾನಕ್ಕಿಳಿದಾಗ ಡ್ಯಾಮ್ ನಲ್ಲಿ ಮುಳುಗಿ ಖ್ಯಾತ ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಮೃತ್ಯು

ಖ್ಯಾತ ಮಲಯಾಳಂ ನಟ ಅನಿಲ್ ನೆಡುಮಂಗಾಡ್ (48) ಶುಕ್ರವಾರ ತೊಡುಪುಳ ಮಾಲಂಕಾರ ಡ್ಯಾಮ್ ನಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೊಚ್ಚಿನ್: ಖ್ಯಾತ ಮಲಯಾಳಂ ನಟ ಅನಿಲ್ ನೆಡುಮಂಗಾಡ್ (48) ತೊಡುಪುಳ ಮಾಲಂಕಾರ ಡ್ಯಾಮ್ ನಲ್ಲಿ ಸ್ನಾನ ಮಾಡುವಾಗ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಸಂಜೆ ನಟ ಮತ್ತು ಇತರ ಇಬ್ಬರು ಸ್ನಾನಕ್ಕಾಗಿ ಡ್ಯಾಮ್ ಗೆ ಹೋದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರು ತೊಡುಪುಳದಲ್ಲಿದ್ದರೆಂದು ಮಾಹಿತಿ ತಿಳಿಸಿದೆ,

“ಪ್ರಾಥಮಿಕ ವಿಚಾರಣೆಯ ಪ್ರಕಾರ, ನಟ ಮತ್ತು ಅವರ ಸ್ನೇಹಿತರು ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್ ಗೆ ಹೋಗಿದ್ದಾರೆ. ಅವರು ಆಳವಾದ ನೀರಿಗೆ ಇಳಿದಾಗ ನೀರಿನ ಸೆಳವು ಅವರನ್ನು ಎಳೆದೊಯ್ದಿದೆ” ಎಂದು ಇಡುಕಿ ವಿಶೇಷ ಶಾಖೆಯ ಅಧಿಕಾರಿಯೊಬ್ಬರು ಹೇಳಿದರು.

ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅನಿಲ್ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು‘ಕಮ್ಮಟ್ಟಿ ಪಾಡಮ್’, ‘ಎನ್ಜನ್ ಸ್ಟೀವ್ ಲೋಪೆಜ್’ ಮತ್ತು ‘ಪೊರಿಂಜು ಮರಿಯಮ್ ಜೋಸ್’ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಬಿನಯಿಸಿದ್ದರು. ಇತ್ತೀಚೆಗೆ ತೆರೆಕಂಡು ಯಶವಿಯಾಗಿದ್ದ “ಅಯ್ಯಪ್ಪನುಂಕೊಶಿಯಮ್” ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ಅನಿಲ್ ಅಪಾರ ಜನಪ್ರಿಯತೆ ಗಳಿಸಿದ್ದರು. 

ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆದರಿಕೆಯಡಿ ಮಾತುಕತೆ ಮುಂದುವರೆಸಲು ಸಾಧ್ಯವಿಲ್ಲ: ಟ್ರಂಪ್ ಗಡುವು ತಿರಸ್ಕರಿಸಿದ ಇರಾನ್!

Iran-Israel War: ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ IRGC ಗುಪ್ತಚರ ಮುಖ್ಯಸ್ಥ ಸಾವು

ಬಾರ್‌ನಲ್ಲಿ ಗಲಾಟೆ: ಬಿಯರ್ ಬಾಟಲಿಯಿಂದ ನಟ ದರ್ಶನ್ ಜೊತೆ ಅಭಿನಯಿಸಿದ್ದ ನಿರಂಜನ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ!

IPL 2026: ಚಿನ್ನಸ್ವಾಮಿಯಲ್ಲಿ RCB 'ಸಿಕ್ಸರ್‌ ಮಷಿನ್‌' ಟಿಮ್ ಡೇವಿಡ್ ಹೊಡೆದ ಬಾಲ್ ಎಲ್ಲಿಗೆ ಹೋಯ್ತು ಗೊತ್ತಾ?

ಉಪ ಚುನಾವಣೆ: ರಾಜ್ಯ ಸರ್ಕಾರದ ಗುಪ್ತಚರ ವರದಿ ಪ್ರಕಾರ ಎರಡೂ ಕಡೆ ಕಾಂಗ್ರೆಸ್‌ಗೆ ಸೋಲು!

SCROLL FOR NEXT