

ಬೆಂಗಳೂರು: ನಟ ದರ್ಶನ್ ಅಭಿನಯದ ಒಡೆಯ ಚಿತ್ರದಲ್ಲಿ ಅಭಿನಯಿಸಿದ್ದ ನಟ ನಿರಂಜನ್ ಮೇಲೆ ಬಾರ್‌ನಲ್ಲಿ ನಡೆದ ಗಲಾಟೆಯಲ್ಲಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ. ಘಟನೆ ಮಾರ್ಚ್ 28ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸ್ನೇಹಿತ ಯಶಸ್ ಸೂರ್ಯ ಅವರ ಮನೆಗೆ ಹೋಗಿದ್ದ ನಿರಂಜನ್ ನಂತರ ಉತ್ತರಹಳ್ಳಿ ರಸ್ತೆಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಬಾಯಾರಿಕೆ ಆಗಿ ನೀರು ಕುಡಿಯಲು ಮಂತ್ರಿ ಅಲೈನ್ಸ್ ಬಳಿಯ ಬಾರ್ ಗೆ ಹೋಗಿದ್ದಾಗ ವ್ಯಕ್ತಿಯೋರ್ವ ನಿರಂಜನ್ ಅವರನ್ನು ತಳ್ಳಿದ್ದಾರೆ. ಈ ವೇಳೆ ಗಲಾಟೆಯಾಗಿದೆ.
ನಂತರ ಹೊರಗೆ ಇನೊವಾ ಕಾರಿನಲ್ಲಿದ್ದ ನಾಲ್ಕು ಜನರು ಒಳಗೆ ಬಂದು ನನ್ನ ಜೊತೆಯಲ್ಲಿ ಜಗಳ ತೆಗೆದರು. ಇಬ್ಬರು ಕೈಯಿಂದ ನನಗೆ ಹೊಡೆದರು. ಇಬ್ಬರು ಬಿಯರ್ ಬಾಟಲ್ ನಿಂದ ತನ್ನ ತಲೆಯ ಮೇಲೆ ಹೊಡೆದರು ಎಂದು ನಿರಂಜನ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement