ಹಿರಿಯ ನಟ ರಾಜೇಶ್ 
ಸಿನಿಮಾ ಸುದ್ದಿ

ಎಂಜಿ ಶ್ರೀನಿವಾಸ್ ನಿರ್ದೇಶನದ 'ಓಲ್ಡ್ ಮಾಂಕ್' ಚಿತ್ರತಂಡಕ್ಕೆ ಹಿರಿಯ ನಟ ರಾಜೇಶ್ ಸೇರ್ಪಡೆ

ಎಂಜಿ ಶ್ರೀನಿವಾಸ್ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಓಲ್ಡ್ ಮಾಂಕ್' ಚಿತ್ರಕ್ಕಾಗಿ ಹಿರಿಯ ನಾಯಕ ರಾಜೇಶ್ ಅವರನ್ನು ಕರೆ ತಂದಿದ್ದಾರೆ.

ಬೆಂಗಳೂರು: ಎಂಜಿ ಶ್ರೀನಿವಾಸ್ ನಿರ್ದೇಶಿಸಿ, ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ 'ಓಲ್ಡ್ ಮಾಂಕ್' ಚಿತ್ರಕ್ಕಾಗಿ ಹಿರಿಯ ನಾಯಕ ರಾಜೇಶ್ ಅವರನ್ನು ಕರೆ ತಂದಿದ್ದಾರೆ. ಇದೀಗ ಅವರು ರಾಜೇಶ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

88 ವರ್ಷದ ರಾಜೇಶ್, ಸ್ಯಾಂಡಲ್ ವುಡ್ ನ ಸುವರ್ಣಯುಗದ ಭಾಗವಾಗಿದ್ದರು. ಡಾ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ನಂತಹ ದೊಡ್ಡ ನಟರೊಂದಿಗೆ ನಟಿಸಿರುವ ರಾಜೇಶ್, ದಶಕದ ನಂತರ ಮತ್ತೆ ಬಣ್ಣ ಹಚ್ಚಲಿದ್ದಾರೆ.

ರಾಜೇಶ್ ಅವರಂತಹ ಹಿರಿಯ ನಾಯಕರಿಗೆ ನಿರ್ದೇಶನ ಮಾಡುವುದು ಅದೃಷ್ಟ ಎನ್ನುವ ಶ್ರೀನಿವಾಸ್, ಈ ವಯಸ್ಸಿನಲ್ಲಿಯೂ ಅವರ ವರ್ಚಸ್ಸು ಹಾಗೆಯೇ  ಇದೆ. ತಮ್ಮ ಪಾತ್ರದ ಬಗ್ಗೆ ತಿಳಿದು ಒಪ್ಪಿಗೆ ನೀಡಿದ್ದಕ್ಕೆ ಧನ್ಯವಾದಗಳು. ತಮ್ಮ ಪಾತ್ರ ಹಾಗೂ  ತುಂಬಾ ದಿನಗಳ ನಂತರ ಕ್ಯಾಮರಾ ಎದುರಿಸುತ್ತಿರುವುದಕ್ಕೆ ಅವರು ಕುತೂಹಲಭರಿತರಾಗಿದ್ದಾರೆ. ಜನವರಿ 15 ರಿಂದ ರಾಜೇಶ್ ಅವರ ಭಾಗದ ಚಿತ್ರೀಕರಣ ಆರಂಭಿಸುವುದಾಗಿ ತಿಳಿಸಿದರು. 

ಚಿತ್ರತಂಡ ಟಾಕಿ ಭಾಗ ಹಾಗೂ ಸಾಂಗ್ ವೊಂದರ ಚಿತ್ರೀಕರಣಕ್ಕಾಗಿ ಐದು ದಿನ ಉಳಿಸಿಕೊಂಡಿದ್ದು, ಜನವರಿ ತಿಂಗಳಲ್ಲಿ ಪೂರ್ಣಗೊಳಿಸುವ ಯೋಜನೆಯಲ್ಲಿದೆ. ಅದಿತಿ ಪ್ರಭುದೇವ ನಾಯಕಿಯಾಗಿದ್ದು, ಮಲಯಾಳಂ ನಟ ಸುದೇವ್ ನಾಯರ್, ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಉಳಿದಂತೆ ಅರುಣ್ ಬಾಲರಾಜ್, ಹಿರಿಯ ನಟ ಎಸ್ , ನಾರಾಯಣ್, ಸಿಹಿಕಹಿ ಚಂದ್ರು, ಆರ್ ಟಿ ರಮಾ, ಡಿಂಗ್ರಿ ನಾಗರಾಜ್, ಬೆಂಗಳೂರು ನಾಗರಾಜ್ ಮತ್ತಿತರ ತಾರಾಗಣವಿದೆ. ಸೌರಭ್ ವೈಭವ್ ಸಂಗೀತ ಸಂಯೋಜಿಸಿದ್ದು, ಭರತ್ ಪರಶುರಾಮ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT