ರಂಗನಾಯಕ ಮೂಹೂರ್ತ 
ಸಿನಿಮಾ ಸುದ್ದಿ

ಅಧಿಕೃತವಾಗಿ ಸೆಟ್ಟೇರಿದ ಗುರು-ಜಗ್ಗೇಶ್ ಜೋಡಿಯ 'ರಂಗನಾಯಕ'

ನವರಸನಾಯಕ ಜಗ್ಗೇಶ್-ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ‘ರಂಗನಾಯಕ’ ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದೆ.

ಬೆಂಗಳೂರು: ನವರಸನಾಯಕ ಜಗ್ಗೇಶ್-ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ‘ರಂಗನಾಯಕ’ ಸಿನಿಮಾ ಮುಹೂರ್ತ ಕಾರ್ಯಕ್ರಮ ನೆರವೇರಿದೆ.

ಬಸವನಗುಡಿಯ ರಾಯರ ಮಠದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಜನವರಿಯಲ್ಲಿ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾ ಅನೌನ್ಸ್ ಆಗಿ ತುಂಬಾ ದಿನವೇ ಕಳೆದಿದೆ. ಆದರೆ ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗುತ್ತಿದೆ. ಈ ಮೂಲಕ ‘ಮಠ’ ಬಳಿಕ ಜಗ್ಗೇಶ್-ಗುರುಪ್ರಸಾದ್ ಜೋಡಿ ಒಂದಾಗಿ ಸಿನಿಮಾ ಮಾಡುತ್ತಿದೆ.

'ಭ್ರಾಹ್ಮೀ ಮುಹೂರ್ತದ ಶುಭಸಮಯ ರಂಗನಾಯಕ ಚಿತ್ರ ಬಸವನಗುಡಿ ರಾಯರಮಠದಲ್ಲಿ ಪ್ರಥಮ ಆರಂಭಪಲಕ ಹಾಗು ರಾಯರ ಬೃಂದಾವನದ ಚಿತ್ರಿಕರಣ ಮಾಡಿ ಕಾರ್ಯ ಆರಂಭವಾಯಿತು. ಮಠ, ಎದ್ದೇಳು ಮಂಜುನಾಥ ನಂತರ ಗುರುಪ್ರಸಾಧ್ ನನ್ನ ಸಮ್ಮಿಲನ...ನಗಿಸಲು ನಾವು ರೆಡಿ ಶುಭಹಾರೈಸಿ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಅಂದ್ಹಾಗೆ, ಅನೂಪ್ ಸೀಳಿನ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್‌ನಲ್ಲಿ ಮೂರು ಸಿನಿಮಾಗಳು ಬಂದಿದ್ದು, ಈ ಮೂರು ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಅದ್ಭುತ ಎನಿಸಿಕೊಂಡಿದೆ. ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ ಹಾಗೂ ಎರಡನೇ ಸಲ ಸಿನಿಮಾಗೆ ಅನೂಪ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!

'ಹನೂರು ಎನ್‌ಕೌಂಟರ್': ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಉದಯನಿಧಿ ಸ್ಟಾಲಿನ್! ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಆಗ್ರಹ

SIR ವೇಳೆ 1.08 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಗೆ: ಆಕ್ಷೇಪಣೆ ಸಲ್ಲಿಕೆ ಅವಧಿ ವಿಸ್ತರಿಸಬೇಕು- CECಗೆ ಸಿಎಂ ಶಿವಕುಮಾರ್ ಪತ್ರ!